ಹರಿದ್ವಾರ: ಆಲೋಪತಿ ಚಿಕಿತ್ಸೆಯ ವಿರುದ್ಧ ಮಾತನಾಡಿ ವೈದ್ಯರ ಕೆಂಗಣ್ಣಿಗೆ ಗುರಿಯಾಗಿರೋ ಬಾಬಾ ರಾಮ್​ದೇವ್ ಸವಾಲೊಂದನ್ನ ಹಾಕಿದ್ದಾರೆ. ಜಸ್ಟ್ 1 ವರ್ಷದಲ್ಲಿ 1,000 ಆಲೋಪತಿ ವೈದ್ಯರನ್ನ ಆಯುರ್ವೇದ ವೈದ್ಯರನ್ನಾಗಿ ಮತಾಂತರ ಮಾಡ್ತೇನೆ. ಹಾಗಂತ ವೈದ್ಯರನ್ನ ಧಾರ್ಮಿಕವಾಗಿ ಮತಾಂತರ ಮಾಡೋದಿಲ್ಲ ಅವರ ನಂಬಿಕೆಗಳನ್ನ ರೂಪಾಂತರ ಮಾಡ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಹರಿದ್ವಾರದ ಯೋಗ ಗ್ರಾಮ್ ಸೆಂಟರ್​​ನಲ್ಲಿ ಯೋಗ ಕಲಿಕಾ ಶಿಭಿರವೊಂದರಲ್ಲಿ ಮಾತನಾಡಿದ ಅವರು.. ಆಲೋಪತಿ ಔಷಧಿಯಿಂದ

ಸೈಡ್ ಎಫೆಕ್ಟ್ಸ್ ಅನುಭವಿಸಿದ ವೈದ್ಯರು ಈಗ ಯೋಗ ಆಯುರ್ವೇದದತ್ತ ಹೊರಳಿಕೊಂಡಿದ್ದಾರೆ. ಕೆಲವರು ತಮ್ಮ ಪ್ರಾಯೋಗಿಕ ಹಂತದಲ್ಲಿ ನಿವೃತ್ತಿ ತೆಗೆದುಕೊಂಡು ನಮ್ಮ ದಾರಿ ಹಿಡಿದಿದ್ದಾರೆ. ನಾನು ನಿರ್ಧಾರ ಮಾಡಿದ್ದೇನೆ. ಒಂದು ವರ್ಷದ ಅವಧಿಯಲ್ಲಿ 1 ಸಾವಿರ ಆಲೋಪತಿ ವೈದ್ಯರನ್ನ ನ್ಯಾಚುರೋಪತಿ ವೈದ್ಯರನ್ನಾಗಿ ಮತಾಂತರ ಮಾಡಲಿದ್ದೇನೆ ಎಂದಿದ್ದಾರೆ. ಈ ಶಿಬಿರದಲ್ಲಿ ಎಂಬಿಬಿರಸ್​​ ಮತ್ತು ಎಮ್​ಡಿ ಪದವಿ ಪಡೆದವರೂ ಭಾಗವಹಿಸಿದ್ದರು ಎನ್ನಲಾಗಿದೆ.

ಒಂದು ನಂಬಿಕೆ ಅಥವಾ ಒಂದು ಧರ್ಮವನ್ನ ರಕ್ಷಿಸುವುದು, ಬೆಂಬಲಿಸುವುದು ತಪ್ಪಲ್ಲ. ಡ್ರಗ್ ಇಂಡಸ್ಟ್ರಿಯನ್ನ ದೊಡ್ಡ ಶಕ್ತಿಗಳು ಬೆಂಬಲಿಸುತ್ತಿವೆ. ಆದರೆ ಯೋಗ, ಆಯುರ್ವೇದ, ನ್ಯಾಚರೋಪತಿಯನ್ನು ಯಾರು ಬೆಂಬಲಿಸುತ್ತಾರೆ..? ನೀವು, ಜನರು ಇದನ್ನ ಬೆಂಬಲಿಸಿದ್ದೀರಿ.. ಇಲ್ಲದಿದ್ದರೆ ಯಾರೂ ಈ ಪ್ರಾಚೀನ ವಿಜ್ಞಾನವನ್ನ ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ ಎಂದು ಇದೇ ವೇಳೆ ಬಾಬಾ ರಾಮ್​ದೇವ್ ಹೇಳಿದ್ದಾರೆ.

The post ‘ಸಾವಿರ ಆಲೋಪತಿ ವೈದ್ಯರನ್ನ ಆಯುರ್ವೇದಕ್ಕೆ ಮತಾಂತರ ಮಾಡ್ತೇನೆ’ ರಾಮ್​ದೇವ್ ಚಾಲೆಂಜ್ appeared first on News First Kannada.

Source: newsfirstlive.com

Source link