ಸ್ಯಾಂಡಲ್​ವುಡ್​ ನಟರು ಒಬ್ಬರಾದ ಮೇಲೆ ಒಬ್ಬರು ಕೊರೊನಾ ಸಂಕಷ್ಟದ ಮಧ್ಯೆ ಹಸಿದವರಿಗೆ ನೆರವಾಗ್ತಿದ್ದಾರೆ. ಅದೆಷ್ಟೋ ಜನ ತಿನ್ನಲು ಊಟವಿಲ್ಲದೇ, ಮಲಗಲು ಸೂರಿಲ್ಲದೇ, ಈ ಲಾಕ್​ಡೌನ್​ ಪರಿಸ್ಥಿತಿಯಲ್ಲಿ ಒದ್ದಾಡುತ್ತಿದ್ದಾರೆ. ಚಿತ್ರರಂಗದ ಕಲಾವಿದರು, ತಂತ್ರಜ್ಞರು ಕೂಡ ಈ ಸಂದರ್ಭ ಕಷ್ಟ ಅನುಭವಿಸುತ್ತಿದ್ದಾರೆ. ಇಂಥಾ ಕಠಿಣ ಪರಿಸ್ಥಿತಿಗಳ ನಡುವೆ ಸದ್ಯ ನಟ ನೀನಾಸಂ ಸತೀಶ್​ ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ. ತಾವೇ ನಿಂತು ಕಷ್ಟದಲ್ಲಿರುವವರ, ಹಸಿದವರ ಕೈಗೆ ಊಟ ನೀಡುತ್ತಿದ್ದಾರೆ.

ಹೌದು.. ಬೆಂಗಳೂರಿನ ಗಾಂಧಿ ಬಜಾರ್​ನ ಸುತ್ತ ಮುತ್ತ ಒಂದು ಸಾವಿರಕ್ಕೂ ಹೆಚ್ಚು ಆಹಾರದ ಪೊಟ್ಟಣ್ಣವನ್ನ ನಟ ಸತೀಶ್​ ಹಂಚಿದ್ದಾರೆ. ಒಂದು ಸಣ್ಣ ಟೀಂ ಸತೀಶ್​ ಜೊತೆಯಾಗಿಯೇ ನಿಂತು ನೆರವಾಗ್ತಿದ್ದಾರೆ.

ಇನ್ನೊಂದೆಡೆ ನಟ ಕಿಚ್ಚ ಸುದೀಪ್​ ತಮ್ಮ ಚಾರಿಟೇಬಲ್​ ಸೊಸೈಟಿ ಮುಖಾಂತರ ಸಹಾಯ ಹಸ್ತ ಚಾಚಿದ್ದಾರೆ. ನಟ ಉಪೇಂದ್ರ, ನಟಿ ರಾಗಿಣಿ ಖುದ್ದಾಗಿ ನಿಂತು ಬಡವರಿಗೆ, ಅಗತ್ಯ ಇರುವವರಿಗೆ ಊಟ ಹಾಗೂ ದಿನಸಿ ವ್ಯವಸ್ಥೆ ಮಾಡಿಕೊಡ್ತಿದ್ದಾರೆ. ಹೀಗೆ ದಿನೇ ದಿನೇ ಒಬ್ಬಬ್ಬ ನಟ-ನಟಿಯರು ಸಹಾಯ ಹಸ್ತ ಚಾಚಿ ನೆರವಾಗ್ತಿರೋದು ಶ್ಲಾಘನೀಯ.

The post ಸಾವಿರ ಜನರಿಗೆ ಹೊಟ್ಟೆ ತುಂಬ ತುತ್ತು ಕೊಟ್ಟ ನಟ ನೀನಾಸಂ ಸತೀಶ್ appeared first on News First Kannada.

Source: newsfirstlive.com

Source link