ಸಾಹಿತಿ ಬಿ.ಎಲ್.ವೇಣುಗೆ ಸಹಿಷ್ಣು ಹಿಂದೂ ಹೆಸರಿನಲ್ಲಿ ಎಚ್ಚರಿಕೆ ಪತ್ರ | A warning letter in the name of a tolerant Hindu to novelist BL Venu


ಸಾಹಿತಿ ಬಿ.ಎಲ್.ವೇಣುಗೆ ಸಹಿಷ್ಣು ಹಿಂದೂ ಹೆಸರಿನಲ್ಲಿ ಎಚ್ಚರಿಕೆ ಪತ್ರ

ಸಾಹಿತಿ ಬಿ.ಎಲ್.ವೇಣು

ಸಾಹಿತಿ ಬಿ.ಎಲ್.ವೇಣುಗೆ ಸಹಿಷ್ಣು ಹಿಂದೂ ಹೆಸರಿನಲ್ಲಿ 2 ಪುಟಗಳ ಕೈಬರಹದ ಎಚ್ಚರಿಕೆ ಪತ್ರ ಬರೆಯಲಾಗಿದ್ದು, ನಗರದ ಕೆಳಗೋಟೆ ಬಡಾವಣೆಯ ಮನೆಗೆ ಪತ್ರ ಬಂದಿದೆ.

ಚಿತ್ರದುರ್ಗ: ಸಾಹಿತಿ ಬಿ.ಎಲ್.ವೇಣುಗೆ ಸಹಿಷ್ಣು ಹಿಂದೂ ಹೆಸರಿನಲ್ಲಿ 2 ಪುಟಗಳ ಕೈಬರಹದ ಎಚ್ಚರಿಕೆ ಪತ್ರ ಬರೆಯಲಾಗಿದ್ದು, ನಗರದ ಕೆಳಗೋಟೆ ಬಡಾವಣೆಯ ಮನೆಗೆ ಪತ್ರ ಬಂದಿದೆ. ಎಸ್​ಡಿಪಿಐ, ಪಿಎಫ್​ಐ, ಸಿಎಫ್​ಐ ಜತೆ ಸೇರಿಕೊಂಡಿದ್ದೀರಿ. ದೇಶದ್ರೋಹಿಗಳ ಗುಂಪನ್ನು ಬೆಂಬಲಿಸುತ್ತಿದ್ದೀರಿ ಎಂದು ಎಚ್ಚರಿಕೆ ನೀಡಲಾಗಿದೆ. ಸಿದ್ದರಾಮಯ್ಯ, ಹೆಚ್.​ಡಿ. ಕುಮಾರಸ್ವಾಮಿ ನೆರವಾಗುತ್ತಿದ್ದೀರಿ ಎಂದು ಉಲ್ಲೇಖ ಮಾಡಲಾಗಿದೆ. ಸಾವರ್ಕರ್ ಬಗ್ಗೆ ಹಗುರವಾಗಿ ಮಾತಾಡಿದ್ದಕ್ಕೆ ಕ್ಷಮೆ ಕೇಳಬೇಕು. ಪಠ್ಯ ಪರಿಷ್ಕರಣೆ ಬಗ್ಗೆ ಸಾಹಿತಿ ಬಿ.ಎಲ್.ವೇಣು ಟೀಕೆಗೆ ಪತ್ರದಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಮಕ್ಕಳ ಮನಸ್ಸಲ್ಲಿ ವಿಷಬೀಜ ಬಿತ್ತಬೇಡಿ ಎಂಬ ಹೇಳಿಕೆ‌ಗೆ ಕಿಡಿಕಾರಲಾಗಿದ್ದು, 61 ಜನ ದುಷ್ಟಕೂಟದ ಸಾಹಿತಿಗಳಿಗೆ ತಿಳಿ ಹೇಳಿ ಎಂದು ಸಲಹೆ ಕೂಡ ನೀಡಲಾಗಿದೆ. ಎರಡು ಪುಟಗಳ ಕೈಬರಹದ ಪತ್ರದಲ್ಲಿ ಯಾವುದೇ ವಿಳಾಸವಿಲ್ಲ. ಎಳೆ ಮಕ್ಕಳ ಮನಸಿನಲ್ಲಿ ವಿಷಬೀಜ ಬಿತ್ತಬೇಡಿ ಎಂಬ ಹೇಳಿಕೆ ನೀಡಿದ್ದೀರಿ. ಪಾಳೆಗಾರರ ಇತಿಹಾಸಕ್ಕೆ ಸಂಬಂಧಿಸಿದಂತೆ ಕಾದಂಬರಿ ರಚಿಸಿದ ನಿಮ್ಮ ಬಗ್ಗೆ ಅಪಾರ ಗೌರವವಿದೆ. ಆದರೆ, ನೀವು 61 ಸಾಹಿತಿಗಳ ದುಷ್ಟಕೂಟ ಸೇರಿಕೊಂಡಿದ್ದೀರಿ. ಎಡಪಂಥೀಯರು, ನಕ್ಸಲ್‌ವಾದಿಗಳು, ಭಯೋತ್ಪಾದಕರ ಜೊತೆ ಸೇರಿ ಎಸ್‌ಡಿಪಿಐನಂತಹ ದೇಶದ್ರೋಹಿ ಗುಂಪು ಬೆಂಬಲಿಸುತ್ತಿದ್ದೀರಿ ಎಂದು ಪತ್ರದಲ್ಲಿ ಉಲ್ಲೇಖವಿದೆ.

TV9 Kannada


Leave a Reply

Your email address will not be published.