ಚೆನ್ನೈ: ತಮಿಳು ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ವನಿತಾ ವಿಜಯ್‍ಕುಮಾರ್ ಸದಾ ಗಾಸಿಪ್‍ನಲ್ಲಿರುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಇವರ ವೈಯಕ್ತಿಕ ಜೀವನದ ಬಗ್ಗೆಯೇ ಹೆಚ್ಚು ಚರ್ಚೆಯಾಗುವುದು ತಿಳಿದೇ ಇದೆ. ಅದೇ ರೀತಿ ಇದೀಗ ಅವರ ನಾಲ್ಕನೇ ವಿವಾಹದ ವಿಚಾರ ಸದ್ದು ಮಾಡುತ್ತಿದ್ದು, ಈ ಕುರಿತು ಸ್ವತಃ ನಟಿ ಸ್ಪಷ್ಟನೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ನಟಿ ವನಿತಾ, ನಾನು ಸಿಂಗಲ್ ಹಾಗೂ ಲಭ್ಯವಿದ್ದೇನೆ. ಆದರೆ ವದಂತಿ ಹಬ್ಬಿಸಬೇಡಿ ಹಾಗೂ ನಂಬಬೇಡಿ ಎಂದು ತಿಳಿಸಿದ್ದಾರೆ. ಕಳೆದ ವರ್ಷ ಲಾಕ್‍ಡೌನ್ ವೇಳೆ ವಿಎಫ್‍ಎಕ್ಸ್ ತಂತ್ರಜ್ಞ ಪೀಟರ್ ಪೌಲ್ ಜೊತೆ 3ನೇ ವಿವಾಹವಾಗಿದ್ದ ವನಿತಾ ಕೆಲವೇ ತಿಂಗಳ ಬಳಿಕ ಪತಿಯಿಂದ ದೂರ ಆಗಿದ್ದಾರೆ. ಇದಾದ ಬಳಿಕ ಮತ್ತೊಂದು ವಿವಾಹವಾಗಿದ್ದಾರೆ ಎಂಬ ವದಂತಿ ಕೇಳಿ ಬಂದಿತ್ತು.

ಇಬ್ಬರು ಹೆಣ್ಣು ಮಕ್ಕಳ ತಾಯಿಯಾಗಿರುವ ವನಿತಾ, ಕಳೆದ ವರ್ಷ ಲಾಕ್‍ಡೌನ್ ನಲ್ಲಿ ಪೀಟರ್ ಪೌಲ್ ಜೊತೆ ಸರಳವಾಗಿ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಿದ್ದರು. ಆದರೆ ಕೆಲವೇ ತಿಂಗಳಲ್ಲಿ ಪತಿ ಪೀಟರ್ ಅವರನ್ನು ಮನೆಯಿಂದ ಹೊರಹಾಕಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಬಳಿಕ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ ವನಿತಾ ಪತಿ ಪೀಟರ್ ಮೋಸ ಮಾಡಿರುವುದಾಗಿ ಹೇಳಿ ಕಣ್ಣೀರಿಟ್ಟಿದ್ದರು. ಈ ಮೂಲಕ 3ನೇ ವಿವಾಹವನ್ನು ಸಹ ಕಡೆದುಕೊಂಡಿರುವ ಬಗ್ಗೆ ಸ್ಪಷ್ಟಪಡಿಸಿದ್ದರು.

ಪೀಟರ್‍ನನ್ನು ತುಂಬಾ ಪ್ರೀತಿಸುತ್ತಿದ್ದೆ, ತುಂಬಾ ಚೆನ್ನಾಗಿ ನೋಡಿಕೊಂಡಿದ್ದೆ. ಆದರೆ ಆತನಿಗೆ ಕುಡಿತದ ಚಟ ಇರುವುದು ತಿಳಿದಿರಲಿಲ್ಲ. ನನ್ನ ಮಕ್ಕಳಿಗೆ ತಂದೆಯನ್ನು ಬಯಸಿ, ವಿವಾಹವಾಗಿದ್ದೆ. ಆದರೆ ಪೀಟರ್ ಮೋಸ ಮಾಡಿದ ಎಂದು ಹೇಳಿದ್ದರು. ಇದಾದ ಬಳಿಕ ನಟಿ ವನಿತಾ ವಿಜಯ್‍ಕುಮಾರ್ ಅವರು 4ನೇ ವಿವಾಹವಾಗಿದ್ದಾರೆ ಎಂಬ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿತ್ತು. ಇದೀಗ ಇದಕ್ಕೆ ಪ್ರತಿಕ್ರಿಯೆ ನೀಡುವ ಮೂಲಕ ವನಿತಾ ಅವರು ಸ್ಪಷ್ಟನೆ ನೀಡಿ, ಸಿಂಗಲ್ ಆಗಿರುವುದಾಗಿ ತಿಳಿಸಿದ್ದಾರೆ.

The post ಸಿಂಗಲ್ ಆಗಿದ್ದೇನೆ, ಲಭ್ಯವಿದ್ದೇನೆ- ನಾಲ್ಕನೇ ವಿವಾಹದ ಬಗ್ಗೆ ಮೌನ ಮುರಿದ ಬಿಗ್ ಬಾಸ್ ಸ್ಪರ್ಧಿ ವನಿತಾ appeared first on Public TV.

Source: publictv.in

Source link