ಸಿಂಘು ಗಡಿಯಲ್ಲಿ ಮತ್ತೊಂದು ಅನುಮಾನಾಸ್ಪದ ಸಾವು; ನೇಣು ಬಿಗಿದ ಸ್ಥಿತಿಯಲ್ಲಿ ರೈತನ ಶವ ಪತ್ತೆ | A protesting farmer at the Singhu border near Delhi was found hanging


ಸಿಂಘು ಗಡಿಯಲ್ಲಿ ಮತ್ತೊಂದು ಅನುಮಾನಾಸ್ಪದ ಸಾವು; ನೇಣು ಬಿಗಿದ ಸ್ಥಿತಿಯಲ್ಲಿ ರೈತನ ಶವ ಪತ್ತೆ

ಸಿಂಘು ಗಡಿಯಲ್ಲಿ ರೈತರ ಪ್ರತಿಭಟನೆ ಚಿತ್ರ

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ(Farm Laws)ಗಳ ವಿರುದ್ಧ ಸಿಂಘು ಗಡಿ (Singhu Border)ಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತನೊಬ್ಬನ ಮೃತದೇಹ ಇಂದು ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತನನ್ನು ಗುರ್​​ಪ್ರೀತ್​ ಸಿಂಗ್​ ಎಂದು ಗುರುತಿಸಲಾಗಿದ್ದು, ಪಂಜಾಬ್​ನ ಫತೇಘರ್ ಸಾಹಿಬ್​​​ನ ಅಮ್ರೋಹ್​ ಜಿಲ್ಲೆಯ ರೂಕಿ ಎಂಬ ಗ್ರಾಮದ ನಿವಾಸಿ ಎಂದು ಹೇಳಲಾಗಿದೆ. ಇವರು ಭಾರತೀಯ ಕಿಸಾನ್​ ಯೂನಿಯನ್​​ನ ಸಿಧಾಪುರದ ಜಗ್​ಜಿತ್​ ಸಿಂಗ್ ದಲ್ಲೇವಾಲ್​ ಬಣದೊಂದಿಗೆ ಗುರುತಿಸಿಕೊಂಡವರಾಗಿದ್ದರು. 

ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿರುವ ಕುಂಡ್ಲಿ ಠಾಣೆ ಪೊಲೀಸರು ಗುರ್​ಪ್ರೀತ್​ ಮೃತದೇಹವನ್ನು ಪೋಸ್ಟ್​ಮಾರ್ಟಮ್​​ಗೆ ಕಳಿಸಿದ್ದಾರೆ. ಹಾಗೇ, ಸಾವಿನ ಬಗ್ಗೆ ತನಿಖೆ ಪ್ರಾರಂಭ ಮಾಡಿದ್ದಾರೆ. ಗುರ್​ಪ್ರೀತ್​ ಸಾವಿಗೆ ನಿಖರ ಕಾರಣವೇನು ಎಂಬುದು ಇನ್ನೂ ಪತ್ತೆಯಾಗಿಲ್ಲ. ಇದು ಆತ್ಮಹತ್ಯೆಯೋ ಅಥವಾ ಬೇರೆ ಯಾವುದೇ ರೀತಿಯ ಸಾವೋ ಎಂಬ ಆಯಾಮದಲ್ಲೂ ತನಿಖೆ ಶುರುವಾಗಿದೆ.  ಪೋಸ್ಟ್​ಮಾರ್ಟ್​ಮ್​ ವರದಿ ಬಂದ ಹೊರತು ಯಾವುದೇ ಮಾಹಿತಿ ನೀಡುವುದಿಲ್ಲ ಎಂದು ಪೊಲೀಸ್​ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ಕಳೆದ ಒಂದು ವರ್ಷಗಳಿಂದಲೂ ದೆಹಲಿಯ ಗಡಿಭಾಗಗಳಲ್ಲಿ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಇಲ್ಲಿ ಆಗಾಗ ಪ್ರತಿಭಟನೆ, ಹಿಂಸಾಚಾರ, ಸಾವು-ನೋವು ನಡೆಯುತ್ತಲೇ ಇರುತ್ತಿದೆ. ಕಳೆದ ತಿಂಗಳು ಸಿಂಘು ಗಡಿಯಲ್ಲಿ ರೈತನೊಬ್ಬನನ್ನು ಬರ್ಬರವಾಗಿ ಹತ್ಯೆಗೈಯ್ಯಲಾಗಿತ್ತು. ಆ ರೈತನ ಕೈ-ಕಾಲು ಕತ್ತರಿಸಿ ಮೃತದೇಹವನ್ನು ಬ್ಯಾರಿಕೇಡ್​ಗೆ ಕಟ್ಟಲಾಗಿತ್ತು. ಈತ ಸಿಖ್ಖರ ಪವಿತ್ರ ಗ್ರಂಥ ಗುರುಗ್ರಂಥ ಸಾಹೀಬನ್ನು ಅಪವಿತ್ರಗೊಳಿಸಿದ್ದೇ ಈ ಹತ್ಯೆಗೆ ಕಾರಣ ಎನ್ನಲಾಗಿತ್ತು.

ಇದನ್ನೂ ಓದಿ: ಕೋರಮಂಗಲದ ಪಬ್​​ನಲ್ಲಿ ನಡುರಾತ್ರಿ ಟ್ಯಾಕ್ಸ್​​ ಇನ್​ಸ್ಪೆಕ್ಟರ್​​ಗೆ ಕೂಡಿಹಾಕಿ ಹಲ್ಲೆ ಮಾಡಿದ ಪಬ್ ಮಾಲಿಕ, ಬೌನ್ಸರ್​​ಗಳು!

TV9 Kannada


Leave a Reply

Your email address will not be published. Required fields are marked *