ಮೈಸೂರು: ಜಿಲ್ಲೆಯ ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ಅವರಿಗೆ ಅಹಿಂದ ನಾಯಕರು ಬೆಂಬಲ ಸೂಚಿಸಿದ್ದಾರೆ. ಸಿಂಧೂರಿ ವರ್ಗಾವಣೆಗೆ ಮೂಡಾ ಅಧ್ಯಕ್ಷ ಹೆಚ್.ವಿ‌.ರಾಜೀವ್​​ರಿಂದ ಪಿತೂರಿ ನಡೆದಿದೆ ಎಂಬ ಆರೋಪ ಕೇಳಿಬಂದಿರೋ ಹಿನ್ನೆಲೆ‌, ರಾಜೀವ್ ರಾಜೀನಾಮೆ ನೀಡಬೇಕೆಂದು ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಒತ್ತಾಯಿಸಿದೆ. ಹಾಗೇ ಮೂಡಾ ಆಯುಕ್ತ ನಟೇಶ್ ಅವರನ್ನ ಅಮಾನತು ಮಾಡಬೇಕೆಂದು ಆಗ್ರಹಿಸಲಾಗಿದೆ.

ಇಂದು ಮೈಸೂರಿನಲ್ಲಿ ಮಾತನಾಡಿದ ಅಹಿಂದ ಮುಖಂಡ ಕೆ.ಶಿವರಾಂ, ಮೂಡಾದಲ್ಲಿ ಅಧ್ಯಕ್ಷರೇ ಅಕ್ರಮ‌ ಎಸಗುತ್ತಿದ್ದಾರೆ. ಆಯುಕ್ತ ನಟೇಶ್ ಮೇಲೂ ಭ್ರಷ್ಟಾಚಾರ ಆರೋಪಗಳಿವೆ. ಭ್ರಷ್ಟಾಚಾರ ಆರೋಪಮುಕ್ತರಾಗೋವರೆಗೂ ರಾಜೀವ್ ರಾಜೀನಾಮೆ ನೀಡಬೇಕು ಎಂದರು.

ಸಾ.ರಾ. ಚೌಲ್ಟ್ರಿ ಮೂಲ ದಾಖಲೆಗಳನ್ನ ಶಾಸಕ ಸಾ.ರಾ.ಮಹೇಶ್ ಬಹಿರಂಗಪಡಿಸಬೇಕು. ಮೈಸೂರಿನ ಭೂ ಅಕ್ರಮಗಳ ಬಗ್ಗೆ ತನಿಖೆ ಏಕಪಕ್ಷೀಯವಾಗುತ್ತಿದೆ. ನೆರೆಹೊರೆಯವರಿಗೆ ನೋಟೀಸ್ ನೀಡದೆ ಹೇಗೆ ಸರ್ವೇ ಕಾರ್ಯ ನಡೆಸಿದ್ರು? ಸರ್ವೇ ಕಾರ್ಯದಲ್ಲಿ ಅಧಿಕಾರಿಗಳೇ ನಿಯಮ ಉಲ್ಲಂಘಿಸಿದ್ದಾರೆ ಅಂತ ಅವರು ಗಂಭೀರ ಆರೋಪ ಮಾಡಿದ್ರು.

The post ಸಿಂಧೂರಿಗೆ ಅಹಿಂದ ನಾಯಕರ ಬೆಂಬಲ, ಮೂಡಾ ಅಧ್ಯಕ್ಷರ ರಾಜೀನಾಮೆಗೆ ಒತ್ತಾಯ appeared first on News First Kannada.

Source: newsfirstlive.com

Source link