ಮೈಸೂರು: ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ನಾನು ಸಚಿವನಾಗಿದ್ದಾಗ ಕೆಲಸ ಮಾಡಿದ್ದಾರೆ, ಆದರೆ ತಪ್ಪಿ ನಡೆದಾಗ ಬುದ್ಧಿಯನ್ನೂ ಹೇಳಿದ್ದೇನೆ ಅಂತಾ ಮಾಜಿ ಸಚಿವ ಎ. ಮಂಜು ಹೇಳಿದರು.

ಸಿಂಧೂರಿ ನಾನು ಸಚಿವನಾಗಿದ್ದಾಗ ಕೆಲಸ ಮಾಡಿದ್ದಾರೆ
ಶಿಲ್ಪನಾಗ್-ರೋಹಿಣಿ ಸಿಂಧೂರಿ ಜಟಾಪಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಎ.ಮಂಜು.. ಅಧಿಕಾರಿಗಳನ್ನ ಜಿಲ್ಲಾ ಉಸ್ತುವಾರಿ ಸಚಿವರು, ಸರ್ಕಾರ ಕಂಟ್ರೋಲ್​​ಗೆ ತೆಗೆದುಕೊಳ್ಳಬಹುದು. ರೋಹಿಣಿ ಸಿಂಧೂರಿ ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಕೆಲಸ ಮಾಡಿದ್ದಾರೆ. ಮಹಾಮಸ್ತಕಾಭಿಷೇಕ ಉತ್ಸವದಲ್ಲಿ ಸಂದರ್ಭದಲ್ಲಿ ನಾನು ನೋಡಿದ್ದೇನೆ. ನಿರ್ವಹಣೆ ಮಾಡುವ ಸಂದರ್ಭದಲ್ಲಿ ಜನಪ್ರತಿನಿಧಿಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಡಿಸಿ ಅಂದ್ರೆ ಜಿಲ್ಲೆಯ ಮೊದಲ ಸೇವಕರು ಎಂದರು.

ಸಿಂಧೂರಿಗೆ ಕಾಲ ಮೇಲೆ ಕಾಲು ಹಾಕಿ ಕುಳಿತುಳ್ಳೋದು ಬೇಡ ಎಂದಿದ್ದೆ
ಎಲ್ಲ ಅಧಿಕಾರಿಗಳು ಇಷ್ಟ ಬಂದಹಾಗೆ ಕೆಲಸ ಮಾಡಲು ಅವಕಾಶವಿಲ್ಲ. ನನ್ನ ಅವಧಿಯಲ್ಲಿ ಕೆಲಸ ಮಾಡುವಾಗ ಕೆಲವು ತಪ್ಪುಗಳನ್ನ ತಿದ್ದಿದ್ದೆ, ತಿಳಿ ಹೇಳಿದ್ದೆ. ಜನರು ಬರುವಾಗ ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು ಬೇಡ, ಗೌರವ ಕೊಡಬೇಕು ಎಂದು ಹೇಳಿದ್ದೆ. ಈ ಬಗ್ಗೆ ಚೀಫ್ ಸೆಕ್ರೆಟರಿ, ಸಿಎಂ ಗಮನಕ್ಕೂ ತಂದಿದ್ದೆ. ಹಾಸನಕ್ಕೆ ಸಿಎಂ ಸಿದ್ದರಾಮಯ್ಯ ಬಂದಿದ್ದಾಗ ಅವರನ್ನ ಸ್ವಾಗತ ಮಾಡಲು ಪ್ರೋಟೋಕಾಲ್ ಪ್ರಕಾರ ಡಿಸಿ ಅವರು ಬರಬೇಕಿತ್ತು. ಆದರೆ ರೋಹಿಣಿ ಸಿಂಧೂರಿ ಬರಲಿಲ್ಲ, ಆಗ ಸಿದ್ದರಾಮಯ್ಯಗೆ ವರ್ಗಾವಣೆ ಮಾಡುವಂತೆ ಹೇಳಿದ್ದೆ ಎಂದು ತಿಳಿಸಿದ್ರು.

ನಾನ್ ಹೇಳಿದ್ದೆ ಆಗಬೇಕು ಅನ್ನೋದು ಸರಿಯಲ್ಲ
ನಂತರದ ಚುನಾವಣೆಯಲ್ಲಿ ನಾನು ಸೋತೆ, ಅವರ ಪರ ಯಾರಿದ್ದಾರೋ ಅವರೇ ಅವರನ್ನ ವರ್ಗಾವಣೆ ಮಾಡುವಂತೆ ಒತ್ತಾಯಿಸಲು ಮುಂದಾದರು. ಚುನಾಯಿತ ಪ್ರತಿನಿಧಿಗಳೊಂದಿಗೆ ಅಗೌರವದೊಂದಿಗೆ ನಡೆದುಕೊಳ್ಳುವುದು ಸರಿಯಿಲ್ಲ. ಎಲ್ಲವೂ ನನಗೆ ಗೊತ್ತಿದೆ, ನಾನ್ ಹೇಳಿದ್ದೆ ಆಗಬೇಕು ಅನ್ನೋದು ಸರಿಯಲ್ಲ. ಕೊರೊನಾ ಸಂಕಷ್ಟದಲ್ಲಿ ಸ್ವಿಮ್ಮಿಂಗ್ ಪೂಲ್ ಅವಶ್ಯಕತೆ ಇತ್ತಾ..? ಎಂದು ಸಿಂಧೂರಿ ಬಗ್ಗೆ ಮಂಜು ಪ್ರಶ್ನೆ ಮಾಡಿದರು.

ದನ ಕಾಯೋನೂ ಐಎಎಸ್ ಮಾಡ್ತಾನೆ
ಐಎಎಸ್ ಇವತ್ತು ದನ ಕಾಯುವವನು ಕೂಡ ಮಾಡುತ್ತಾನೆ. ಐಎಎಸ್ ಮಾಡಿದ ಮೇಲೆ ಅಧಿಕಾರ ಹೇಗೆ ನಡೆಸುತ್ತೇವೆ ಎನ್ನುವುದು ಮುಖ್ಯ. ದನ ಕಾಯುವವನು, ಅಡ್ಜೆಸ್ಟ್​​ಮೆಂಟ್​ನಲ್ಲೂ ಐಎಎಸ್ ಮಾಡ್ತಾನೆ. ಇವಾಗ ಯಾರ್ ಬೇಕಾದ್ರೂ ಐಎಎಸ್ ಮಾಡುತ್ತಾರೆ. ಆದ್ರೆ ಜನರ ಸೇವೆ ಹೇಗೆ ಮಾಡುತ್ತೇವೆ ಅನ್ನೋದೇ ಮುಖ್ಯ. ಮೈಸೂರು ಮಹಾರಾಜರೇ ಸ್ವಿಮ್ಮಿಂಗ್ ಪೂಲ್ ಕಟ್ಟಲಿಲ್ಲ. ಸರ್ಕಾರಿ ಸ್ಥಳದಲ್ಲಿ ಈ ಟೈಮ್​​ನಲ್ಲಿ ಬೇಕಿತ್ತಾ? ಸರ್ಕಾರಿ ಅಧಿಕಾರಿ ಒಂದೇ ಕಡೆ ಇರುತ್ತಾರಾ? 5 ವರ್ಷ ಆದಮೇಲೆ ವರ್ಗಾವಣೆ ಆಗುತ್ತಾರೆ. ಇದು ಗುತ್ತಿಗೆ ಕಂಟ್ರ್ಯಾಕ್ಟರ್ ಗೋಸ್ಕರ ಮಾಡಿರುವ ಕೆಲಸ ಅಷ್ಟೇ ಎಂದು ವಾಗ್ದಾಳಿ ನಡೆಸಿದರು.

The post ‘ಸಿಂಧೂರಿ ಒಳ್ಳೆ ಕೆಲ್ಸ ಮಾಡಿದ್ದರು.. ಆದರೆ’ ಎನ್ನುತ್ತಲೇ ಎ.ಮಂಜು ವಾಗ್ದಾಳಿ appeared first on News First Kannada.

Source: newsfirstlive.com

Source link