ಬೆಂಗಳೂರು: ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೊರಡಿಸಿದ್ದ ಸಂಪೂರ್ಣ ಲಾಕ್​ಡೌನ್ ಆದೇಶವನ್ನ ನೂತನ ಡಿಸಿ ಡಾ.ಬಗಾದಿ ಗೌತಮ್ ವಾಪಸ್​ ಪಡೆದಿದ್ದಾರೆ.

ರಾಜ್ಯ ಸರ್ಕಾರ ರೋಹಿಣಿ ಸಿಂಧೂರಿ ಅವರನ್ನ ವರ್ಗಾವಣೆ ಮಾಡ್ತಿದ್ದಂತೆ ಜಿಲ್ಲೆಯಲ್ಲಿ ಕಂಪ್ಲೀಟ್ ಲಾಕ್‌ಡೌನ್​​ ಜಾರಿ ಮಾಡಿ ಆದೇಶ ಹೊರಡಿಸಿದ್ದರು. ಜೂ 14 ರವರೆಗೆ ಕಂಪ್ಲೀಟ್ ಲಾಕ್‌ಡೌನ್ ಮುಂದುವರೆಸಿ ವಾರಕ್ಕೆ ಮೂರು ದಿನ ಅಗತ್ಯ ವಸ್ತುಗಳ ಖರೀದಿಗೆ ರೋಹಿಣಿ ಸಿಂಧೂರಿ ಅವಕಾಶ ಮಾಡಿಕೊಟ್ಟಿದ್ದರು.

ಇದೀಗ ರೋಹಿಣಿ ಸಿಂಧೂರಿ ಆದೇಶ ಹಿಂಪಡೆದ ನೂತನ ಡಿಸಿ ಡಾ.ಬಗಾದಿ ಗೌತಮ್, ಪ್ರತಿ ದಿನ ಬೆಳಗ್ಗೆ 6 ರಿಂದ 10 ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದಾರೆ.

The post ಸಿಂಧೂರಿ ಹೊರಡಿಸಿದ್ದ ‘ಕಂಪ್ಲೀಟ್​ ಲಾಕ್ಡೌನ್’ ಆದೇಶ ವಾಪಸ್ ಪಡೆದ ಮೈಸೂರು ಜಿಲ್ಲಾಡಳಿತ appeared first on News First Kannada.

Source: newsfirstlive.com

Source link