ಸಿಂಪಲ್ ಸುನಿ ‘‘ಸಖತ್’’ ನಲ್ಲಿ ​ ರೊಮ್ಯಾಂಟಿಕ್ ಮೂಡಲ್ಲಿ ಬಿದ್ದ ಸುಂದರಾಂಗ ಜಾಣ

ಪ್ರೀತಿಗೆ ಕಣ್ಣಿಲ್ಲ ಅಂತಾರೆ ಆದ್ರೆ ನಮ್ಮ ಗೋಲ್ಡನ್ ಸ್ಟಾರ್ ಗಣೇಶ್ ಪ್ರೇಮಕ್ಕೆ ಕಣ್ಣಿಲ್ಲಾ ಅಂತ ಹಾಡ್ತಿದ್ದಾರೆ.ಹಿಂಗ್ಯಾಕೆ ಹಾಡ್ತಿದ್ದಾರೆ ನಮ್ಮ ಸ್ಯಾಂಡಲ್​ವುಡ್ ಬಂಗಾರದ ತಾರೆ.? ಏನ್ ಸಮಾಚಾರ.?

ಮೊನ್ ಮೊನ್ನೆ ತಾನೆ ತ್ರಿಬಲ್ ರೈಡಿಂಗ್ ಸಿನಿಮಾದ ಶೂಟಿಂಗ್ ಮುಗಿಸಿ ಮುಂದಿನ ಸಿನಿಮಾದ ಶೂಟಿಂಗ್​​​ಗೆ ಕಾಲಿಟ್ಟಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್. ಗಣಪನ ಅಕೌಂಟ್​​ನಲ್ಲಿ ಸಾಲು ಸಾಲು ನಿರೀಕ್ಷಿತ ಸಿನಿಮಾಗಳಿವೆ. ಸದ್ಯ ಈಗ ಗಣೇಶ್ ಅವರ ಮುಖ್ಯವಾದ ಸಿನಿಮಾಗಳೆಂದ್ರೆ ‘‘ತ್ರಿಬಲ್ ರೈಡಿಂಗ್’’, ‘‘ಗಾಳಿಪಟ-2’’ ಹಾಗೂ ‘‘ಸಖತ್’’ ಸಿನಿಮಾ.. ಈ ಮೂರು ಸಿನಿಮಾಗಳಿಂದ ಆಗೊಂದು ಈಗೊಂದು ಬಂಗಾರದ್ ಸಮಾಚಾರ ಹೊರ ಬರ್ತಿರುತ್ತಾವೆ.. ಈಗ ‘‘ಸಖತ್’’ ಸಿನಿಮಾದ ಸವಿ ಸಮಾಚಾರ.

ಸಿಂಪಲ್ ಸುನಿ ‘‘ಚಮಕ್’’ ಸಿನಿಮಾದ ನಂತರ ‘‘ಸಖತ್’’ ಸಿನಿಮಾದಲ್ಲಿ ಗಣೇಶ್ ಅವರಿಗೆ ಡೈರೆಕ್ಷನ್ ಮಾಡ್ತೌವ್ರೆ. ಸಖತ್ ಸಿನಿಮಾ ತಂಡ ಈಗ ಪ್ರಚಾರದ ಪ್ಲಾಟ್ ಫಾರ್ಮ್​ಗೆ ಬಂದು ನಿಂತಿದೆ. ಮೊನ್ನೆ ಇನ್ಮುಂದೆ ನಮ್ಮ ಪ್ರಚಾರದ ಹಬ್ಬ ಶುರು ಅಂತ ಸಂದೇಶವನ್ನ ಕೊಟ್ಟಿದ್ದರು. ಆ ಸಂದೇಶದಂತೆ ಸಖತ್ ಸಿನಿಮಾ ಬಳಗ ಸೊಗಸಾದ ಹಾಡೊಂದನ್ನ ಚಿತ್ರಪ್ರೇಮಿಗಳ ಮಡಿಲಿಗೆ ಅರ್ಪಿಸಿದೆ.

ಸಖತ್ ಆಗಿದೆ ‘ಸಖತ್’ ಸಿನಿಮಾದ ಹಾಡು
ಗೋಲ್ಡನ್ ಗಣಿಗೆ ಸಖತ್​ ರೊಮ್ಯಾಂಟಿಕ್ ಮೂಡು

ಪ್ರೀತಿಗೆ ಕಣ್ಣಿಲ್ಲಾ ಅಂತಾರೆ ಆದ್ರೆ ನಮ್ಮ ಗೋಲ್ಡನ್ ಸ್ಟಾರ್ ಗಣೇಶ್ ಸಖತ್ ಸಿನಿಮಾದಲ್ಲಿ ಪ್ರೇಮಕ್ಕೆ ಕಣ್ಣಿಲ್ಲಾ ಅಂತ ಹಾಡ್ತಿದ್ದಾರೆ..ಅದ್ ಯಾರ್ ಜೊತೆಗೆ ಗೊತ್ತಾ ಜಂಟಲ್​ಮನ್ ಬೆಡಗಿ ನಿಶ್ವಿಕಾ ನಾಯ್ಡು ಜೊತೆಗೆ.

ರೊಮ್ಯಾಂಟಿಕ್ ಕಾಮಿಡಿ ಕ್ರೈಂ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಚಿತ್ರ ಸಖತ್. ಟಿವಿ ರಿಯಾಲಿಟಿ ಶೋ ಹಾಗೂ ಕೋರ್ಟ್ ಕೇಸ್ ಸುತ್ತ ಸಿನಿಮಾ ಕಥೆ ಹೆಣೆಯಲಾಗಿದೆ. ಇಲ್ಲಿವರೆಗೆ ಭಿನ್ನ ಪಾತ್ರಗಳ ಮೂಲಕ ರಂಜಿಸುತ್ತಿದ್ದ ಗೋಲ್ಡನ್ ಸ್ಟಾರ್ ಈ ಚಿತ್ರದಲ್ಲಿ ಚಾಲೆಂಜಿಂಗ್ ರೋಲ್ ನಲ್ಲಿ ಅಭಿನಯಿಸುತ್ತಿದ್ದಾರೆ. ಅಂಧ ಗಾಯಕನ ಪಾತ್ರಕ್ಕೆ ಜೀವ ತುಂಬಿರುವ ಗೋಲ್ಡನ್ ಸ್ಟಾರ್ ರಿಯಾಲಿಟಿ ಶೋ ಸ್ವರ್ಧಿಯಾಗಿ ಕಾಣಸಿಗಲಿದ್ದಾರೆ. ನಿಶ್ವಿಕಾ ನಾಯ್ಡು ಹಾಗೂ ಹೊಸ ಪ್ರತಿಭೆ ಸುರಭಿ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ.

ಜ್ಯೂಡಾ ಸ್ಯಾಂಡಿ ಸಂಗೀತದ ಜಯಂತ್ ಕಾಯ್ಕಿಣಿ ಸಾಹಿತ್ಯದ ಹಾಡಿಗೆ ಪಂಚಮ್ ಜೀವಾ ಮತ್ತು ಶ್ರೇಯಾ ಐಯರ್ ಧ್ವನಿಯಾಗಿದ್ದಾರೆ.. ಸಖತ್ ಸಿನಿಮಾಕ್ಕೆ ಕೆವಿನ್ ಪ್ರೋಡಕ್ಷನ್​​​​ನ ನಿಶಾ ವೆಂಕಟ್ ಕೋನನ್ಕಿ, ಭರಾಟೆ ಖ್ಯಾತಿಯ ಸುಪ್ರಿತ್ ಬಂಡವಾಳ ಹೂಡಿದ್ದು, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಚಿತ್ರಕ್ಕಿದೆ.. ಶೂಟಿಂಗ್ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಕೆಲಸಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಪ್ರಚಾರ ಕಾರ್ಯವನ್ನು ಈ ಹಾಡಿನ ಮೂಲಕ ಪ್ರಾರಂಭಿಸಿದೆ.

The post ಸಿಂಪಲ್ ಸುನಿ ‘‘ಸಖತ್’’ ನಲ್ಲಿ ​ ರೊಮ್ಯಾಂಟಿಕ್ ಮೂಡಲ್ಲಿ ಬಿದ್ದ ಸುಂದರಾಂಗ ಜಾಣ appeared first on News First Kannada.

News First Live Kannada

Leave a comment

Your email address will not be published. Required fields are marked *