ಚೆನ್ನೈ: ಹೈದರಾಬಾದ್​ನ ನೆಹರು ಜೂವಾಲಜಿಕಲ್ ಪಾರ್ಕ್​​ನ 8 ಏಷ್ಯಾಟಿಕ್ ಸಿಂಹಗಳಿಗೆ ಕೊರೊನಾ ಪಾಸಿಟಿವ್ ಕಂಡುಬಂದ ಬೆನ್ನಲ್ಲೇ ಮುಂಜಾಗೃತಾ ಕ್ರಮವಾಗಿ ಆನೆಗಳಿಗೂ ಕೊರೊನಾ ಟೆಸ್ಟ್​ ಮಾಡಲಾಗಿದೆ.

ಚಾಮರಾಜನಗರ ಜಿಲ್ಲೆಯ ಬಂಡೀಪುರಕ್ಕೆ ಹೊಂದಿಕೊಂಡಿರುವ ಮಧುರೈ ಹುಲಿ‌ ಸಂರಕ್ಷಿತ ಪ್ರದೇಶದಲ್ಲಿರುವ 2-60 ವರ್ಷಗಳ 28 ಸಾಕಾನೆಗಳ ಸ್ವಾಬ್​ ಸಂಗ್ರಹಿಸಿರುವ ಅಧಿಕಾರಿಗಳು, ಪರೀಕ್ಷೆ ನಡೆಸಲು ಉತ್ತರ ಪ್ರದೇಶದ ಇಜತ್ ನಗರದಲ್ಲಿರುವ ಭಾರತೀಯ ಪಶು ವೈದ್ಯಕೀಯ ಸಂಶೋಧನ ಸಂಸ್ಥೆಗೆ ಸ್ವಾಬ್ ರವಾನಿಸಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.

ಹೈದರಾಬಾದ್ ನೆಹರು ಜೂವಾಲಜಿಕಲ್ ಪಾರ್ಕ್​​ನ 8 ಏಷ್ಯಾಟಿಕ್ ಸಿಂಹಗಳಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢವಾದ ಬಳಿ ಸಾಕಷ್ಟು ಎಚ್ಚರಿಕೆ ವಹಿಸಿದ್ದರೂ, 8 ಸಿಂಹಗಳಲ್ಲಿ ಒಂದು ಸಿಂಹ ಸಾವನ್ನಪ್ಪಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಮುನ್ನೆಚ್ಚರಿಕೆಯಿಂದ ಟೆಸ್ಟ್​​ ಮಾಡಿಸಿದ್ದಾರೆ.

The post ಸಿಂಹಗಳು ಪಾಸಿಟಿವ್ ಬಂದ ಬೆನ್ನಲ್ಲೇ ಆನೆಗಳಿಗೂ ಕೊರೊನಾ ಟೆಸ್ಟ್​​; 28 ಆನೆಗಳ ಸ್ವಾಬ್ ಸಂಗ್ರಹ appeared first on News First Kannada.

Source: newsfirstlive.com

Source link