ಸಿಂಹದ ಪಕ್ಕ ನಿಂತು ಮಾಂಸ ತಿನ್ನಿಸಿದ ಯಶ್​; ರಾಕಿ ಭಾಯ್ ಡೇರಿಂಗ್​ ನೋಡಿ ಫಿದಾ ಆದ ಅಭಿಮಾನಿಗಳು | Yash With Lion In Dubai Goes viral In Social Media

ಸಿಂಹದ ಪಕ್ಕ ನಿಂತು ಮಾಂಸ ತಿನ್ನಿಸಿದ ಯಶ್​; ರಾಕಿ ಭಾಯ್ ಡೇರಿಂಗ್​ ನೋಡಿ ಫಿದಾ ಆದ ಅಭಿಮಾನಿಗಳು

ಯಶ್​

ಯಶ್​ ಸ್ಟಾರ್​ಡಮ್​ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರು ಏನೇ ಮಾಡಿದರೂ ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತದೆ. ‘ಕೆಜಿಎಫ್​’ ಸಿನಿಮಾ ಅಷ್ಟು ದೊಡ್ಡಮಟ್ಟದ ಖ್ಯಾತಿ ತಂದುಕೊಟ್ಟಿದೆ. ಈಗ ಯಶ್​ ಸಿಂಹದ ಜತೆ ನಿಂತು ಪೋಸ್ ನೀಡಿದ್ದಾರೆ. ಈ ವಿಡಿಯೋ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ.

ಯಶ್​ ಅವರು ಪತ್ನಿ ರಾಧಿಕಾ ಪಂಡಿತ್​ ಜತೆ ದುಬೈಗೆ ತೆರಳಿದ್ದಾರೆ. ‘ಕೆಜಿಎಫ್​ 2’ ತೆರೆಕಾಣೋಕೆ ಇನ್ನೂ ಸಮಯವಿದೆ. ಸಿನಿಮಾ ತಂಡ ಕೊನೆಯ ಹಂತದ ಕೆಲಸದಲ್ಲಿ ಬ್ಯುಸಿ ಇದ್ದು, ಶೀಘ್ರವೆ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಿದೆ. ಅದಕ್ಕೂ ಮೊದಲು ಯಶ್​ ರಜೆಯ ಮಜ ಕಳೆಯೋಕೆ ದುಬೈಗೆ ತೆರಳಿದ್ದಾರೆ. ಇತ್ತೀಚೆಗೆ ಅಲ್ಲಿನ ಜನಪ್ರಿಯ ಹೋಟೆಲ್​ಗೆ ತೆರಳಿ ರಾಧಿಕಾ ಪಂಡಿತ್​ ಜತೆಗೆ ಸಮಯ ಕಳೆಯುತ್ತಿರುವ ಫೋಟೋ ಹಾಕಿದ್ದರು. ಈಗ ಯಶ್​ ಸಿಂಹದ ಜತೆ ಪೋಸ್​ ನೀಡಿದ್ದಾರೆ.

ಯಶ್​ ಸಿಂಹದ ಪಕ್ಕದಲ್ಲಿ ನಿಂತು ಮಾಂಸ ತಿನ್ನಿಸುತ್ತಿದ್ದಾರೆ. ಈ ವಿಡಿಯೋವನ್ನು ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಸಖತ್ ಖುಷಿ ಆಗಿದ್ದಾರೆ. ‘ಸಿಂಹದ ಜತೆ ಮತ್ತೊಂದು ಸಿಂಹ’ ‘ನಿಮ್ಮ ಧೈರ್ಯಕ್ಕೆ ಮೆಚ್ಚಬೇಕು’ ಎಂಬಿತ್ಯಾದಿ ಕಮೆಂಟ್​ಗಳು ಬಂದಿವೆ.

ದುಬೈನಲ್ಲಿ ವನ್ಯಜೀವಿಗಳನ್ನು ಸಾಕೋಕೆ ಅವಕಾಶವಿದೆ. ನಮ್ಮ ದೇಶದಲ್ಲಿ ಮನೆಯಲ್ಲಿ ನಾಯಿಗಳನ್ನು ಸಾಕಿದಂತೆ ಅಲ್ಲಿನ ರಾಜ ಮನೆತನದವರು ಸಿಂಹವನ್ನು ಸಾಕುತ್ತಾರೆ. ಅದು ಪ್ರತಿಷ್ಠೆಯ ಸಂಕತೇವೂ ಹೌದು. ಖಾಸಗಿ ಝೂ ಮಾಡೋಕೂ ಅಲ್ಲಿ ಅವಕಾಶವಿದೆ. ಆ ಸಿಂಹಗಳು ಮನುಷ್ಯರಿಗೆ ಏನನ್ನೂ ಮಾಡುವುದಿಲ್ಲ. ಯಶ್ ಕೂಡ ಹೀಗೆ ಸಾಕಿದ ಸಿಂಹಕ್ಕೆ ಮಾಂಸ ತಿನ್ನಿಸಿದ್ದಾರೆ.

ಇಡೀ ಭಾರತೀಯ ಚಿತ್ರರಂಗವೇ ಕಾತರದಿಂದ ಕಾಯುತ್ತಿರುವ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಯಾವಾಗ ರಿಲೀಸ್​ ಆಗಲಿದೆ ಎಂಬುದಕ್ಕೆ ಇತ್ತೀಚೆಗೆ ಉತ್ತರ ಸಿಕ್ಕಿತ್ತು. 2022ರ ಏಪ್ರಿಲ್​ 14ರಂದು ಚಿತ್ರ ಬಿಡುಗಡೆ ಆಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಷ್ಟು ಹೊತ್ತಿಗಾಗಲೇ ‘ಕೆಜಿಎಫ್​ 2’ ತೆರೆಕಂಡಿರಬೇಕಿತ್ತು. ಆದರೆ ಕೊರೊನಾ ವೈರಸ್​ ಎರಡನೇ ಅಲೆ ಹರಡಿದ ಪರಿಣಾಮ ಚಿತ್ರದ ರಿಲೀಸ್​ ದಿನಾಂಕ ಮುಂದೂಡಲಾಗಿತ್ತು.

ಇದನ್ನೂ ಓದಿ: ‘ಅವರ ವಯಸ್ಸಿನಲ್ಲಿ ನಾನು ಹೀಗೆ ಇರಲು ಸಾಧ್ಯವೇ?’ ರಾಧಿಕಾ ಪಂಡಿತ್​ಗೆ ಹೀಗೊಂದು ಅನುಮಾನ

Yash: ದುಬೈನಲ್ಲಿ ಮಿಂಚುತ್ತಿದ್ದಾರೆ ರಾಕಿಂಗ್ ಸ್ಟಾರ್ ಯಶ್ ದಂಪತಿ; ಏನು ವಿಶೇಷ?

TV9 Kannada

Leave a comment

Your email address will not be published. Required fields are marked *