ಬೆಂಗಳೂರು: ವೃತ್ತಿಪರ ಕೋರ್ಸ್​​ಗಳ ಆಯ್ಕೆಗಾಗಿ ನಡೆಸುವ ಸಿಇಟಿ ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ  ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್​ಸೈಟ್​​​ನಲ್ಲಿ ನಿಗದಿತ ಲಿಂಕ್ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.

ಸಿಇಟಿ ಪರೀಕ್ಷೆ ಆಗಸ್ಟ್ 28 ಮತ್ತು ಆಗಸ್ಟ್ 29ರಂದು ನಡೆಯಲಿದೆ. ಇಂದು ಮಧ್ಯಾಹ್ನ 12 ಗಂಟೆಯಿಂದ ಜುಲೈ 10ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ, ಅಭ್ಯರ್ಥಿಯ ಅರ್ಹತೆ, ಶೈಕ್ಷಣಿಕ ಅರ್ಹತೆಗಳನ್ನು ಇಲಾಖೆಯ ವೆಬ್​ಸೈಟ್​​​ನಲ್ಲಿ ನೀಡಲಾಗಿದೆ.

ಆಗಸ್ಟ್ 13ರ ಬೆಳಗ್ಗೆ 11 ಗಂಟೆಯಿಂದ ಹಾಲ್ ಟಿಕೆಟ್‌ ಡೌನ್ಲೋಡ್ ಮಾಡಿಕೊಳ್ಳಬಹುದು ಅಂತ ಕೂಡ ತಿಳಸಲಾಗಿದೆ.

The post ಸಿಇಟಿ ಪರೀಕ್ಷೆಗೆ ಇಂದಿನಿಂದ ಅರ್ಜಿ ಸಲ್ಲಿಸಲು ಅವಕಾಶ appeared first on News First Kannada.

Source: newsfirstlive.com

Source link