ಸಿಇಟಿ ರ್ಯಾಂಕಿಂಗ್​ ವಿಚಾರದಲ್ಲಿ ಕೆಇಎ ತೀರ್ಮಾನ ಸರಿಯಾಗಿದೆ: ಸಚಿವ ಅಶ್ವತ್​ ನಾರಾಯಣ | Minister Ashwath Narayan talked about CET Result in Bengaluru


ಸಿಇಟಿ ಪರೀಕ್ಷೆಯಲ್ಲಿ ಮೊದಲಿನಿಂದಲೂ ಸಿಇಟಿ ಮತ್ತು ಪಿಯುಸಿ ಪರೀಕ್ಷೆ ಅಂಕ ಶೇ. 50ರಷ್ಟು ಪರಿಗಣಿಸಿ ರ್ಯಾಂಕ್ ನೀಡಲಾಗುತ್ತಿದ್ದು, ಕೆಇಎ ಉತ್ತಮವಾಗಿ ಕಾರ್ಯ ನಿರ್ವಹಿಸಿಕೊಂಡು ಬಂದಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಹೇಳಿದ್ದಾರೆ.

ಸಿಇಟಿ ರ್ಯಾಂಕಿಂಗ್​ ವಿಚಾರದಲ್ಲಿ ಕೆಇಎ ತೀರ್ಮಾನ ಸರಿಯಾಗಿದೆ: ಸಚಿವ ಅಶ್ವತ್​ ನಾರಾಯಣ

ಡಾ ಸಿ ಎನ್ ಅಶ್ವಥ್ ನಾರಾಯಣ

ಬೆಂಗಳೂರು: ಸಿಇಟಿ (CET) ಪರೀಕ್ಷೆಯಲ್ಲಿ ಮೊದಲಿನಿಂದಲೂ ಸಿಇಟಿ ಮತ್ತು ಪಿಯುಸಿ ಪರೀಕ್ಷೆ ಅಂಕ ಶೇ. 50ರಷ್ಟು ಪರಿಗಣಿಸಿ ರ್ಯಾಂಕ್ ನೀಡಲಾಗುತ್ತಿದ್ದು, ಕೆಇಎ (KEA) ಉತ್ತಮವಾಗಿ ಕಾರ್ಯ ನಿರ್ವಹಿಸಿಕೊಂಡು ಬಂದಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ (Ashwath Narayan) ಹೇಳಿದ್ದಾರೆ. ಸಿಇಟಿ ರ್ಯಾಂಕಿಗ್​​ ಪಟ್ಟಿಯಲ್ಲಿ ಗೊಂದಲ ಹಿನ್ನೆಲೆ ವಿಕಾಸಸೌಧದಲ್ಲಿ ಸಭೆ ನಡೆಸಿ ಮಾತನಾಡಿದ ಅವರು ಕೊರಾನಾ ಬಂದ ಹಿನ್ನೆಲೆಯಲ್ಲಿ 2020-21 ರಲ್ಲಿ ಕ್ವಾಲಿಫೈ ಮಾಡಿ ಪಿಯುಸಿ ಅಂಕ ಪರಿಗಣಿಸಿರಲಿಲ್ಲ. ಸಿಇಟಿ ಪರೀಕ್ಷೆ ಮಾಡಿ ಅದರ ಅಂಕ ಮಾತ್ರ ನೀಡಲಾಗಿತ್ತು ಎಂದು ತಿಳಿಸಿದರು.

2022ರ ವಿದ್ಯಾರ್ಥಿಗಳಿಗೆ ಎರಡೂ ಪರೀಕ್ಷೆ ಅಂಕ ಪರಿಗಣಿಸಿ ನೀಡಲಾಗಿದೆ. ಎಸ್ ಎಸ್ ಎಲ್ ಸಿ 40 ಪ್ರತಿಶತ, ಪ್ರಥಮ ಪಿಯುಸಿ 40 ಪ್ರತಿಶತ, ಗುಡ್ ಬಿಹೇವಿಯರ್ 10 ಪ್ರತಿಶತ ಮತ್ತು ಇಂಟರ್ನಲ್ ಅಸೆಸ್ಮೆಂಟ್ 10 ಪ್ರತಿಶತ ಅಂತ ಗುರುತಿಸಿ ಅಂಕ ನೀಡಲಾಗಿತ್ತು ಎಂದರು.

ಈ ಬಾರಿ ಕಳೆದ ಬಾರಿಗಿಂತ ಹೆಚ್ಚು ಮಾನದಂಡದಿಂದ ಪಾಸ್ ಆಗಿದ್ದಾರೆ. ಹೀಗಾಗಿ ಈ ಬಾರಿ ಕೆಇಎ ಮಾಡಿರುವ ನಿರ್ಧಾರ ಸರಿ ಇದೆ. 2021ರ ಬ್ಯಾಚ್‌ನವರಿಗೆ ಕಳೆದ ಬಾರಿಯೇ ಅವಕಾಶ ಸಿಕ್ಕಿತ್ತು. ಹಾಗಾಗಿ ಈ ವರ್ಷ ತೆಗೆದುಕೊಂಡ ನಿರ್ಣಯ ಸರಿ ಇದೆ ಎಂದು ತಿಳಿಸಿದ್ದಾರೆ.

ಐಸಿಎಸ್​ಸಿ, ಸಿಬಿಎಸ್​ಇ ಕೆಲವರಿಗೆ ನೀಡಲಾಗಿದೆ ಅಂತ ಆರೋಪ ಇದೆ. ಅವುಗಳನ್ನು ಹುಡುಕಿ ಅದನ್ನೂ ತೆಗೆದು ಹಾಕಲಾಗಿದೆ. ಐಸಿಎಸ್​ಇ, ಸಿಬಿಎಸ್​ಇ ವಿದ್ಯಾರ್ಥಿಗಳಿಗೂ ವಿತ್ ಡ್ರಾ ಮಾಡಿದ್ದೇವೆ ಎಂದು ಮಾತನಾಡಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *