ಸಿಎಂ ಆದ್ಮೇಲೆ 7 ಬಾರಿ ದೆಹಲಿ ಪ್ರವಾಸ; ಬೆಂಗಳೂರು ಸಮಸ್ಯೆ ಮರೆತೇ ಬಿಟ್ರಾ ಬೊಮ್ಮಾಯಿ..?

ಕಳೆದ ವಾರವಷ್ಟೇ ದೆಹಲಿ ಯಾತ್ರೆ ಮಾಡಿದ್ದ ಸಿಎಂ ಮತ್ತೆ ಮುಂದಿನ ವಾರ ಡೆಲ್ಲಿಗೆ ಹೋಗೋ ಪ್ಲ್ಯಾನ್ ಹಾಕೊಂಡಿದ್ದಾರೆ. ಸವಾಲುಗಳಿವೆ ಕೇಂದ್ರದ ಜೊತೆ ಉತ್ತಮ ಸಂಬಂಧ ಇರ್ಬೇಕು, ಅದಕ್ಕಾಗಿ ಹೋಗಿ ಬರ್ಲಿ. ಆದ್ರೆ ಪದೇ ಪದೇ ರಾಷ್ಟ್ರ ರಾಜಧಾನಿಗೆ ಹೋಗೋ ಸಿಎಂ ಇತ್ತ ರಾಜ್ಯ ರಾಜಧಾನಿ ಪ್ರವಾಸ ಮಾಡದೇ ಬೆಂಗಳೂರನ್ನ ನಿರ್ಲಕ್ಷಿಸಿದ್ರೆ ಹೇಗೆ? ಹೀಗೊಂದು ಪ್ರಶ್ನೆ ಇದೀಗ ಹುಟ್ಕೊಂಡಿದೆ.

ರಾಜ್ಯ ಬಿಜೆಪಿಯಲ್ಲಿ ಯಾವುದೇ ರೀತಿ ಅಸಮಾಧಾನ ಭುಗಿಲೇಳಬಾರದು. ದೆಹಲಿ ನಾಯಕರಿಗೆ ಕಾಲಕಾಲಕ್ಕೆ ರಾಜ್ಯದ ಪರಿಸ್ಥಿತಿಯನ್ನ ತಿಳಿಸುತ್ತಿರಬೇಕು. ಉಸ್ತುವಾರಿ ನೇಮಕ, ನಿಗಮ, ಮಂಡಳಿ ಅಧ್ಯಕ್ಷರ ಆಯ್ಕೆಯಾಗಬೇಕಿದೆ. ಕ್ಯಾಬಿನೆಟ್ ವಿಸ್ತರಣೆಯ ತಲೆನೋವು ಸಹ ಸಿಎಂ ಬೊಮ್ಮಾಯಿಗೆ ಇದೆ. ಜೊತೆಗೆ ಮುಂಬರುವ ಬಿಬಿಎಂಪಿ, ಜಿ.ಪಂ, ತಾ.ಪಂ ಚುನಾವಣೆಗೆ ತಯಾರಾಗ್ಬೇಕು. 2023ರ ವಿಧಾನಸಭೆ ಚುನಾವಣೆ ಸಿದ್ಧತೆ ಮಾಡುವುದೂ ಚಾಲೆಂಜ್ ಆಗಿದೆ.

ಹೀಗೆ ಸಾಲು ಸಾಲು ಸವಾಲುಗಳಿರೋದ್ರಿಂದ ಸಿಎಂ ಪದೇ ಪದೇ ರಾಷ್ಟ್ರ ರಾಜಧಾನಿಗೆ ಹೋಗಿ ಬರ್ತಿದ್ದಾರೆ. ಆದ್ರೆ ಇದ್ರ ನಡುವೆ ಸಿಎಂ ರಾಜ್ಯ ರಾಜಧಾನಿ ಬೆಂಗಳೂರನ್ನ ಮರೆತಂತಿದೆ. ಸಿಎಂ ಆದ್ಮೇಲೆ 7ನೇ ಬಾರಿ ಡೆಲ್ಲಿಗೆ ಹೋಗ್ತಿರುವ ಸಿಎಂ, ಒಂದು ಬಾರಿಯೂ ಸಾವಿರ ಸಮಸ್ಯೆ ಇರೋ ಬೆಂಗಳೂರು ಪ್ರವಾಸ ಮಾಡಿಲ್ಲ.

ಬೆಂಗಳೂರಲ್ಲಿ ಕಳೆದೊಂದು ವಾರದಿಂದ ಧಾರಾಕಾರ ಮಳೆಯಾಗ್ತಿದೆ. ರಾಜಧಾನಿಯಲ್ಲಿ ಕಟ್ಟಡ ಕುಸಿತ ದುರಂತಗಳು ಮುಂದುವರಿದೇ ಇದೆ. ಈ ಎಲ್ಲಾ ದುರ್ಘಟನೆಗಳಿಂದ ಬೆಂಗಳೂರು ಜನರಲ್ಲಿ ಆತಂಕ ಕೂಡ ಹೆಚ್ಚಾಗಿದೆ. ಆದ್ರೆ ಉಸ್ತುವಾರಿ ಹೊಣೆ ಇದ್ರೂ ನಗರದ ಸಮಸ್ಯೆಯನ್ನ ಸಿಎಂ ಬೊಮ್ಮಾಯಿ ಆಲಿಸ್ತಿಲ್ಲ. ಸಿಎಂ ಬೊಮ್ಮಾಯಿ ನಮ್ಮ ಸಮಸ್ಯೆ ಆಲಿಸುತ್ತಿಲ್ಲ ಅಂತ ಜನ ಬೇಸರ ವ್ಯಕ್ತಪಡಿಸ್ತಿದ್ದಾರೆ. ಸಿಎಂ ರಂತೆ 7 ಮಂದಿ ಬೆಂಗಳೂರು ಸಚಿವರಿಗೂ ನಗರದ ಬಗ್ಗೆ ನಿರ್ಲಕ್ಷ್ಯ ಇದೆ. ಸಿಎಂ ಬಳಿ ಉಸ್ತುವಾರಿ ಇರೋದ್ರಿಂದ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ ಅನ್ನೋದು ಬೆಂಗಳೂರಿಗರ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ರಸ್ತೆಗಿಳಿದು ಟ್ರಾಫಿಕ್​​ ಕ್ಲಿಯರ್​ ಮಾಡಿದ ಮಾಜಿ ಸಚಿವ ಸುರೇಶ್​ ಕುಮಾರ್

ಸವಾಲನ್ನೇ ಹೊತ್ತು ಗದ್ದುಗೆ ಏರಿರೋ ಸಿಎಂ ದೆಹಲಿ ಯಾತ್ರೆಗಳು ಮುಂದುವರಿದೇ ಇದೆ. ಆದ್ರೆ ಅದರ ಭರದಲ್ಲಿ ಎಲ್ಲೋ ಬೆಂಗಳೂರನ್ನ ಸಿಎಂ ಸಂಪೂರ್ಣವಾಗಿ ಮರೆತಂತಿದೆ. ಸಾಲು ಸಾಲು ದುರ್ಘಟನೆಗಳಿಂದ ಆತಂಕಕ್ಕೊಳಗಾಗಿರುವ ಬೆಂಗಳೂರು ಮಂದಿಯ ಸಮಸ್ಯೆ ಆಲಿಸೋರೆ ಇಲ್ವಾ ಅನ್ನೋ ಪ್ರಶ್ನೆಯನ್ನ ಹುಟ್ಟುಹಾಕಿದೆ.

News First Live Kannada

Leave a comment

Your email address will not be published. Required fields are marked *