ಸಿಎಂ ಆದ ನಾಲ್ಕೇ ತಿಂಗಳಲ್ಲಿ ತೀರಥ್ ಸಿಂಗ್ ರಾವತ್ ರಾಜೀನಾಮೆ, ಉತ್ತರಾಖಂಡ್​​​ನ​​ಲ್ಲಿ ನಾಯಕತ್ವ ಬಿಕ್ಕಟ್ಟು

ಸಿಎಂ ಆದ ನಾಲ್ಕೇ ತಿಂಗಳಲ್ಲಿ ತೀರಥ್ ಸಿಂಗ್ ರಾವತ್ ರಾಜೀನಾಮೆ, ಉತ್ತರಾಖಂಡ್​​​ನ​​ಲ್ಲಿ ನಾಯಕತ್ವ ಬಿಕ್ಕಟ್ಟು

ಸಿಎಂ ಆದ ಕೇವಲ ನಾಲ್ಕೇ ತಿಂಗಳಲ್ಲಿ ಉತ್ತರಾಖಂಡ್​​ನ ಸಿಎಂ ತೀರಥ್ ಸಿಂಗ್ ರಾವತ್ ರಾಜೀನಾಮೆ ನೀಡಿದ್ದಾರೆ.

ಸಿಎಂ ಆಗಲು ಶಾಸಕರಾಗಿರಬೇಕು, ಪ್ರಸ್ತುತ ಸಂಸದರಾಗಿರುವ ರಾವತ್‌ ಸಿಎಂ ಗದ್ದುಗೆಯಲ್ಲಿ ಮುಂದುವರಿಯಲು ಸೆಪ್ಟೆಂಬರ್ 10ರೊಳಗೆ ಶಾಸಕರಾಗಿ ಆಯ್ಕೆಯಾಗಬೇಕಾಗಿದೆ. ಆದ್ರೆ ಕೊರೊನಾದಿಂದಾಗಿ ಗಂಗೋತ್ರಿ ಮತ್ತು ಹಲ್ದವಾನಿ ಕ್ಷೇತ್ರಗಳ ಉಪ ಚುನಾವಣೆಯನ್ನು ಚುನಾವಣೆ ಆಯೋಗ ಮುಂದೂಡಿದ್ದು, ತೀರಥ್ ಪಾಲಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ.

ಒಂದು ವೇಳೆ ಉಪಚುನಾವಣೆ ನಡೆಯದಿದ್ದರೆ ಬಿಜೆಪಿ ಹೈಕಮಾಂಡ್​​ಗೂ ನಾಯಕತ್ವ ಬದಲಾವಣೆ ಅನಿವಾರ್ಯವಾಗಲಿದ್ದು, ಶಾಸಕರಲ್ಲಿ ಒಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕಿದೆ.  ಇಂದು ಡೆಹ್ರಾಡೂನ್​​ನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಮುಂದಿನ ಸಿಎಂ ಯಾರು ಅನ್ನೋದು ತಿಳಿಯಲಿದೆ.

The post ಸಿಎಂ ಆದ ನಾಲ್ಕೇ ತಿಂಗಳಲ್ಲಿ ತೀರಥ್ ಸಿಂಗ್ ರಾವತ್ ರಾಜೀನಾಮೆ, ಉತ್ತರಾಖಂಡ್​​​ನ​​ಲ್ಲಿ ನಾಯಕತ್ವ ಬಿಕ್ಕಟ್ಟು appeared first on News First Kannada.

Source: newsfirstlive.com

Source link