ದಾವಣಗೆರೆ: ಶಾಸಕ ರೇಣುಕಾಚಾರ್ಯ ಮತ್ತೊಮ್ಮೆ ಸ್ವಪಕ್ಷದ ಸಚಿವರ ವಿರುದ್ಧವೇ ಗುಡುಗುವ ಮೂಲಕ ಗಮನ ಸೆಳೆದಿದ್ದಾರೆ.

ಕೆಲಸ ಮಾಡ್ತಾ ಇದ್ದೀವಾ ಇಲ್ವಾ ಅಂತ ಸಚಿವರುಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಯಾರಿಗೆ ಯಾವ ಜವಾಬ್ದಾರಿ ಇದೆ ಅಂತ ನಾವಾಗಲಿ, ಮುಖ್ಯಮಂತ್ರಿಯಾಗಲೀ ಹೇಳೋದಲ್ಲ.. ಅವರೇ ಅರ್ಥ ಮಾಡಿಕೊಳ್ಳಬೇಕು.

ಮುಖ್ಯಮಂತ್ರಿಗಳು ಇಳಿವಯಸ್ಸಿನಲ್ಲಿ ಕೆಲಸ ಮಾಡ್ತಾ ಇದ್ದಾರೆ.. ಸಚಿವರಿಗೆ ಏನಾಗಿದೆ..? ಸಚಿವರುಗಳು ಸರ್ಕಾರಕ್ಕೆ, ಪಕ್ಷಕ್ಕೆ, ಮುಖ್ಯಮಂತ್ರಿಗಳಿಗೆ ವರ್ಚಸ್ಸು ತರೋ ಕೆಲಸ ಮಾಡಬೇಕು ಎಂದು ಪರೋಕ್ಷವಾಗಿ ರೇಣುಕಾಚಾರ್ಯ ಸುಧಾಕರ್​ಗೆ ಟಾಂಗ್ ಕೊಟ್ಟಿದ್ದಾರೆ.

ನೀವು ಒಳ್ಳೇ ಕೆಲಸ ಮಾಡಿದ್ದರೆ ನಿಮ್ಮ ಜವಾಬ್ದಾರಿಗಳನ್ನ ಬೇರೆಯವರಿಗೆ ಹಂಚಿಕೆ ಯಾಕೆ ಮಾಡ್ತಾ ಇದ್ವಿ..? ನಿಮ್ಮ ಕೆಲಸದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ.. ನಿಮಗೆ ನೀವೆ ಮಾರ್ಕ್ಸ್​ ಕೊಟ್ಕೊಳ್ಳಿ ಎಂದು ರೇಣುಕಾಚಾರ್ಯ ಕಿಡಿಕಾರಿದ್ದಾರೆ.

The post ಸಿಎಂ ಇಳಿವಯಸ್ಸಿನಲ್ಲಿ ಕೆಲಸ ಮಾಡ್ತಾ ಇದ್ದಾರೆ.. ಸಚಿವರಿಗೆ ಏನಾಗಿದೆ..?- ರೇಣುಕಾಚಾರ್ಯ ಕಿಡಿ appeared first on News First Kannada.

Source: newsfirstlive.com

Source link