ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬಿಟ್ ಕಾಯಿನ್ ದಂಧೆ ಬಿರುಗಾಳಿಯನ್ನೇ ಎಬ್ಬಿಸಿದೆ. ನಾಯಕರ ಹರಿತ ಹೇಳಿಕೆಗಳೊಂದಿಗೆ ‘ಬಿಟ್’ ವಾಕ್ಸಮರ ತಾರಕಕ್ಕೇರಿದೆ. ಎಷ್ಟೇ ತಡಕಾಡಿದರೂ ಕೈ ನಾಯಕರ ಕೈಗೆ ‘ಬಿಟ್’ ಡಾಕ್ಯುಮೆಂಟ್ಸ್ ಸಿಕ್ತಿಲ್ಲ. ಒಂದು ವೇಳೆ ದಾಖಲೆಗಳು ಕೈಗೆಟುಕಿದರೆ ‘ಬಿಟ್’ ಎಂಬ ಅಸ್ತ್ರವೇ ಕಾಂಗ್ರೆಸ್ ಪಾಳಯಕ್ಕೆ ಬ್ರಹ್ಮಾಸ್ತ್ರವಾಗಲಿದೆ.
ರಾಜ್ಯ ರಾಜಕೀಯದಲ್ಲಿ ಬಿಟ್ ಕಾಯಿನ್ ದಂಧೆ ಬಿರುಗಾಳಿ
‘ಕೈ’ಗೆ ದಾಖಲೆಗಳು ಸಿಕ್ಕರೆ ‘ಬಿಟ್’ ಎಂಬ ಅಸ್ತ್ರವೇ ಬ್ರಹ್ಮಾಸ್ತ್ರ
ಬಿಟ್ ಕಾಯಿನ್ ದಂಧೆಯ ಬಿರುಗಾಳಿ ರಾಜ್ಯ ರಾಜಕಾರಣದಲ್ಲಿ ಸುನಾಮಿಯಂತೆ ಸಂಚಲನ ಸೃಷ್ಟಿಸಿದೆ. ದಂಧೆಯ ಹಿಂದಿನ ಕೈಗಳ ವಿಚಾರ ದಿನಕಳೆದಂತೆ ಕುತೂಹಲದ ಗೂಡಾಗ್ತಿದೆ. ಬಿಟ್ ಕಾಯಿನ್ ಯಾರ ಜೇಬು ತುಂಬಿದೆ ಅನ್ನೋದ್ರ ಬಗ್ಗೆ ಮಿಂಚಿನ ಚರ್ಚೆ ನಡೀತಿದೆ.
ಸದ್ಯ ರಾಜ್ಯದಲ್ಲಿ ಬಿಟ್ ಕಾಯಿನ್ ಅಸ್ತ್ರ ಹರಿತ ಹೇಳಿಕೆಗಷ್ಟೇ ಸೀಮಿತವಾಗಿದ್ದು, ಮೂರೂ ಪಕ್ಷಗಳ ನಾಯಕರ ನಡುವೆ ಭಾರೀ ವಾಕ್ಸಮರಕ್ಕೆ ನಾಂದಿ ಹಾಡಿದೆ. ಮುಖ್ಯಮಂತ್ರಿ ಗಾದಿ ವರೆಗೆ ಮಾತಿನ ದಾಳಿ ಬಂದು ನಿಂತಿದೆ. ದಾಖಲೆ ಇಲ್ಲದೆ ಮಾತಲ್ಲೇ ಬಡಿದಾಡ್ತಿಕೊಳ್ತಿರುವ ನಾಯಕರಲ್ಲಿ ಯಾರಿಗೆ ಯಾರ ವಿರುದ್ಧದ ದಾಖಲೆ ಸಿಗುತ್ತೋ ಅವರೇ ಹೀರೋ ಅನ್ನುವಂತಾಗಿದೆ ಸದ್ಯದ ಪರಿಸ್ಥಿತಿ. ಇದೇ ಕಾರಣಕ್ಕೆ ಕಾಂಗ್ರೆಸ್ ದಾಖಲೆಗಳಿಗಾಗಿ ಬಾರೀ ತಡಕಾಡ್ತಿದೆ.
ಇದನ್ನೂ ಓದಿ: ಬಿಟ್ ಕಾಯಿನ್ ಹಗರಣದಲ್ಲಿ CM ಬೊಮ್ಮಾಯಿ ಬಲಿ ಪಡಿಯೋದು 100% ಗ್ಯಾರೆಂಟಿ -ಪ್ರಿಯಾಂಕ್ ಖರ್ಗೆ
ದಾಖಲೆಗಾಗಿ ಕೈ ತಡಕಾಟ!
ಅತ್ಯಂತ ಹರಿತ ಹೇಳಿಕೆಗಳೊಂದಿಗೆ ‘ಬಿಟ್’ ವಾಕ್ಸಮರ ತಾರಕಕ್ಕೇರಿದೆ. ಬಿಟ್ ಕಾಯಿನ್ ದಂಧೆ ಬಗ್ಗೆ ನ್ಯೂಸ್ ಫಸ್ಟ್ ವರದಿ ಬಳಿಕ ವಾಗ್ಬಾಣ ಸುರಿಮಳೆಯಾಗ್ತಿದೆ. ಅಂದಿನಿಂದ ಇಂದಿನವರೆಗೂ ನಡೆದಿರೋದು ನಾಯಕರ ಮಾತಿನ ಕದನವೇ ನಡೀತಿದೆ. ಇನ್ನು ಎಷ್ಟೇ ತಡಕಾಡಿದರೂ ಕೈ ನಾಯಕರ ಕೈಗೆ ಸಿಕ್ತಿಲ್ಲ ‘ಬಿಟ್’ ಡಾಕ್ಯುಮೆಂಟ್ಸ್ ಸಿಗ್ತಿಲ್ಲ. ದಾಖಲೆಗಳು ಕೈಗೆಟುಕಿದರೆ ‘ಬಿಟ್’ ಎಂಬ ಅಸ್ತ್ರವೇ ಕಾಂಗ್ರೆಸ್ಗೆ ಬ್ರಹ್ಮಾಸ್ತ್ರವಾಗಲಿದೆ.
ಈ ಬಹುಕೋಟಿ ದಂಧೆಯಲ್ಲಿ ಒಬ್ಬೊಬ್ಬ ನಾಯಕರು ಆಡ್ತಿರೋ ಒಂದೊಂದೂ ಮಾತುಗಳು ಮಿಂಚಿನ ಸಂಚಲನ ಸೃಷ್ಟಿಸ್ತಿವೆ. ಸಿಎಂ ಗಾದಿವರೆಗೂ ಮಾತು ಬಂದು ನಿಂತುಬಿಟ್ಟಿದೆ. ಅಷ್ಟಕ್ಕೂ ನಾಯಕರ ಬಿಟ್ ವಾಕ್ಸಮರದಲ್ಲಿ ಯಾರ್ಯಾರು ಏನ್ ಹೇಳ್ತಿದ್ದಾರೆ ಗೊತ್ತಾ..?
ಇದನ್ನೂ ಓದಿ: ಬೊಮ್ಮಾಯಿ..ಸಿದ್ದರಾಮಯ್ಯ ಎಲ್ಲರ ಬಾಯಲ್ಲೂ ಬಿಟ್ಕಾಯಿನ್.. ಅಷ್ಟಕ್ಕೂ ಏನಿದು? ಇಲ್ಲಿದೆ ಡಿಟೇಲ್ಸ್
‘ಬಿಟ್’ದೇ ಮಾತು
-
ಸಿಎಂ ಪಟ್ಟವನ್ನೇ ಬಿಟ್ ಕಾಯಿನ್ ಬಲಿ ಪಡೆಯಲಿದೆ- ಪ್ರಿಯಾಂಕ್ ಖರ್ಗೆ, ಕಾಂಗ್ರೆಸ್ ಶಾಸಕ
-
ಈ ಹಗರಣದಲ್ಲಿ ಕಾಂಗ್ರೆಸ್ ನಾಯಕರೇ ಇದ್ದಾರೆ -ಬಸವರಾಜ್ ಬೊಮ್ಮಾಯಿ, ಮುಖ್ಯಮಂತ್ರಿ
-
ಹಗರಣದಲ್ಲಿ ಯಾರೇ ಇರಲಿ ಮೊದಲು ಅರೆಸ್ಟ್ ಮಾಡಲಿ -ಡಿ.ಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
-
ನಂಗ್ಯಾಕೋ ಬೊಮ್ಮಾಯಿ ಮೇಲೇ ಡೌಟು ಬರ್ತಿದೆ -ಸಿದ್ದರಾಮಯ್ಯ, ವಿಪಕ್ಷ ನಾಯಕ
-
ಈ ಹಗರಣದ ಬಗ್ಗೆ ನ್ಯಾಯಾಂಗ ತನಿಖೆ ಆಗಲಿ -ಕುಮಾರಸ್ವಾಮಿ, ಮಾಜಿ ಸಿಎಂ
ಒಟ್ಟಿನಲ್ಲಿ ಮಾತಲ್ಲೇ ಬಿಟ್ ಸಮರಕ್ಕೆ ನಿಂತಿರುವ ನಾಯಕರಿಗೆ ದಾಖಲೆಯ ಕೊರತೆ ದೊಡ್ಡ ಹಿನ್ನಡೆಯಾಗಿದೆ. ಅದ್ರಲ್ಲೂ ಕೈ ಪಡೆಯಂತೂ ಡಾಕ್ಯುಮೆಂಟ್ಗಾಗಿ ತಡಕಾಡ್ತಿದೆ. ಒಂದು ವೇಳೆ ದಾಖಲೆ ಸಿಕ್ಕಿದ್ರೆ ಆದ್ರೆ ಅದೇ 2023ರ ಚುನಾವಣೆಗೆ ಬ್ರಹ್ಮಾಸ್ತ್ರವಾಗಲಿದೆ. ಹೀಗಾಗಿ ಸದ್ಯ ಬಿಟ್ ದಂಧೆ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿ ಕುತೂಹಲವನ್ನು ಹೆಚ್ಚಿಸಿದೆ.
ವಿಶೇಷ ವರದಿ: ವೀರೇಂದ್ರ ಉಪ್ಪುಂದ, ಪೊಲಿಟಿಕಲ್ ಬ್ಯೂರೋ