ಸಿಎಂ ಚನ್ನಿ ಸಹೋದರಳಿನ ಬಂಧಿಸಿದ ED ಅಧಿಕಾರಿಗಳು


ಪಂಜಾಬ್ ಚುನಾವಣೆಯ ಕಾವು ಜೋರಾಗುತ್ತಿದೆ, ಇದರ ಮಧ್ಯೆ ಸಿಎಂ ಚರಣಜಿತ್ ಸಿಂಗ್ ಚನ್ನಿಗೆ ಸಂಕಷ್ಟ ಎದುರಾಗಿದೆ. ಚನ್ನಿ ಅವರ ಸಹೋದರಿಯ ಮಗನನ್ನ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ಬಂಧಿಸಿದ್ದಾರೆ.

ಚನ್ನಿ ಸೋದರಳಿಯ ಭುಪೇಂದರ್ ಸಿಂಗ್ ಹನಿಯನ್ನ ಅಕ್ರಮ ಮರಳುಗಾರಿಕೆ ಪ್ರಕರಣದಲ್ಲಿ ಇಂದು ಬಂಧಿಸಿದ್ದಾರೆ. ಚುನಾವಣೆ ಎದುರಿಸುತ್ತಿರುವ ಹೊತ್ತಿನಲ್ಲಿ ಇಡಿ ಅಧಿಕಾರಿಗಳ ಈ ದಾಳಿ ಸಿಎಂ ಚನ್ನಿಗೆ ರಾಜಕೀಯವಾಗಿ ದೊಡ್ಡ ಹೊಡೆತ ನೀಡಲಿದೆ ಅನ್ನೋ ಮಾತುಗಳು ಕೇಳಿಬರುತ್ತಿವೆ.

ಪಿಎಂಎಲ್​ಎ (Prevention of Money Laundering Act) ಅಡಿಯಲ್ಲಿ ಇಡಿ ಅಧಿಕಾರಿಗಳು ಬಂಧಿಸಿ, ತನಿಖೆಯನ್ನ ಆರಂಭಿಸಿದ್ದಾರೆ. ಈಗಾಗಲೇ ಬಂಧನಕ್ಕೆ ಒಳಪಡಿಸಿರುವ ತನಿಖಾಧಿಕಾರಿಗಳು ಬರೋಬ್ಬರಿ 8 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ತಿಂಗಳು ಲೂಧಿಯಾನದಲ್ಲಿರುವ ಹನಿ ನಿವಾಸದ ಮೇಲೆ ಇಡಿ ದಾಳಿ ಮಾಡಿತ್ತು.

ದಾಳಿ ವೇಳೆ 10 ಕೋಟಿ ರೂಪಾಯಿ ಹಣ, 21 ಲಕ್ಷ ಮೌಲ್ಯದ ಚಿನ್ನಾಭರಣ, ಮರಳು ಉದ್ಯೋಗಕ್ಕೆ ಸಂಬಂಧಿಸಿದ ದಾಖಲೆಗಳು, ಬ್ಯಾಂಕ್​ ಡಿಟೇಲ್ಸ್​, ಮೊಬೈಲ್​ ಫೋನ್​​ಗಳು, 12 ಲಕ್ಷ ಮೌಲ್ಯದ ರೊಲೆಕ್ಸ್ ವಾಚ್​​ ಸೀಜ್ ಮಾಡಿತ್ತು.

News First Live Kannada


Leave a Reply

Your email address will not be published.