ಬೆಂಗಳೂರು: ಸಿಎಂ ಬಿಎಸ್​ ಯಡಿಯೂರಪ್ಪ ನಿವಾಸದ ಎದುರು ಬೆಡ್​​ಗಾಗಿ ಪ್ರತಿಭಟನೆ ನಡೆಸಿದ ಘಟನೆ ಬಳಿಕ ಇಂತಹ ಘಟನೆಗಳಿಗೆ ಬ್ರೇಕ್​​ ಹಾಕಲು ಪೊಲೀಸರು ಕುಮಾರಕೃಪಾ ರಸ್ತೆಯನ್ನೇ ಬಂದ್​ ಮಾಡಿದ್ದಾರೆ. ಈ ನಡುವೆ ರೋಗಿಯನ್ನು ಕರೆದೊಯ್ಯಲು ಬಂದ ಆಂಬುಲೆನ್ಸ್​ಗೂ ಪೊಲೀಸರು​ ಅವಕಾಶ ನೀಡದೆ ವಾಪಸ್​ ಕಳುಹಿಸಿರುವ ಘಟನೆ ನಡೆದಿದೆ.

ರೋಗಿಯೊಬ್ಬರನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆ ಕರೆದೊಯ್ಯಬೇಕಿದ್ದ ಕಾರಣ, ಕುಮಾರಕೃಪಾ ಮಾರ್ಗವಾಗಿ ರೋಗಿಯ ಮನೆಯ ಬಳಿ ತೆರಳಲು ಆಂಬ್ಯಲೆನ್ಸ್​​​ ಬಂದಿತ್ತು. ಆದರೆ ವಿಂಡ್ಸರ್ ಸ್ಕ್ವೇರ್ ವೃತ್ತದಲ್ಲೇ ಆಂಬ್ಯುಲೆನ್ಸ್ ತಡೆದ ಪೊಲೀಸರು, ಈ ಮಾರ್ಗ ಬಂದ್ ಮಾಡಲಾಗಿದೆ. ಮೊದಲು ಸೈರನ್​​ ಬಂದ್ ಮಾಡು ಎಂದು ಡ್ರೈವರ್​​ಗೆ ಹೇಳಿ ಬೇರೆ ಮಾರ್ಗದ ಮೂಲಕ ತೆರಳಲು ಸೂಚಿಸಿದರು. ಪೊಲೀಸರಿಗೆ ಮನವರಿಗೆ ಮಾಡಿಕೊಳ್ಳುವ ಸಮಯವೂ ಇಲ್ಲದ ಕಾರಣ ಆಂಬ್ಯುಲೆನ್ಸ್​ ಡ್ರೈವರ್​​ ಕೂಡಲೇ ಯೂಟರ್ನ್ ತೆಗೆದುಕೊಂಡು ಸುತ್ತಿಬಳಸಿ ಮತ್ತೆ ಚಾಲುಕ್ಯ ವೃತ್ತದ ಮೂಲಕ ರೋಗಿಯ ಮನೆ ತಲುಪಿದ್ದಾರೆ ಎಂಬ ಮಾಹಿತಿ ಲಭಿಸಿದೆ.

The post ಸಿಎಂ ನಿವಾಸ ಎದುರಿನ ರೋಡ್​​ ಬಂದ್​​​- ಸೋಂಕಿತನಿಗಾಗಿ ಬಂದಿದ್ದ ಆಂಬ್ಯುಲೆನ್ಸ್​ ತಡೆದ ಪೊಲೀಸರು appeared first on News First Kannada.

Source: newsfirstlive.com

Source link