ಬೆಂಗಳೂರು: ಕೊರೊನಾ ಸಂಕಷ್ಟ ಪರಿಹಾರಕ್ಕಾಗಿ ಅಪೆಕ್ಸ್ ಬ್ಯಾಂಕ್, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಕೋಟಿ ರೂಪಾಯಿ ದೇಣಿಗೆಯನ್ನು ನೀಡಿದೆ. ಇಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್, ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪಗೆ ಚೆಕ್ ಹಸ್ತಾಂತರಿಸಿದರು.

ಇದೇ ವೇಳೆ 1 ಲಕ್ಷ N-95 ಮಾಸ್ಕ್​ಗಳನ್ನ ಸಹ ಮುಖ್ಯಮಂತ್ರಿಗಳಿಗೆ ಅಪೆಕ್ಸ್ ಬ್ಯಾಂಕ್ ವತಿಯಿಂದ ನೀಡಲಾಯಿತು. ಇದೇ ವೇಳೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರೂ ಆದ ಶಾಸಕ ಬೆಳ್ಳಿಪ್ರಕಾಶ್, ಮಾರ್ಕೆಟಿಂಗ್ ಫೆಡರೇಶನ್ ಅಧ್ಯಕ್ಷರಾದ ರಾಜೇಂದ್ರ ಕುಮಾರ್, ಅಪೆಕ್ಸ್ ಬ್ಯಾಂಕ್ ಎಂ.ಡಿ ಸಿ.ಎನ್.ದೇವರಾಜ್ ಮತ್ತು ಇನ್ನಿತರರು ಉಪಸ್ಥಿತರಿದ್ದರು.

ಸರ್ಕಾರಕ್ಕೆ ಬೇಕಿದೆ ಇಂತಹ ನೆರವಿನ ಹಸ್ತ
ಕೋವಿಡ್ ಎರಡನೇ ಅಲೆ ಬಹಳ ಗಂಭೀರ ಪರಿಣಾಮವನ್ನು ಬೀರುತ್ತಿದೆ. ಇದರ ನಿರ್ವಹಣೆ ಸರ್ಕಾರಗಳಿಗೂ ಒಂದು ಸವಾಲಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲಿ ಸಹಕಾರ ಸಂಸ್ಥೆಗಳು ಸರ್ಕಾರದ ನೆರವಿಗೆ ಬರುತ್ತಿರುವುದು ಹೆಮ್ಮೆಯ ವಿಷಯ ಎಂದು ಸಚಿವ ಸೋಮಶೇಖರ್ ಹೇಳಿದ್ರು.

ಅಪೆಕ್ಸ್ ಬ್ಯಾಂಕ್ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದಂತೆ ಇತರೆ ಸಂಘ ಸಂಸ್ಥೆಗಳು, ಖಾಸಗಿ ಕಂಪನಿಗಳು ಮುಂದಾಗಬೇಕಿದೆ. ಆ ಮೂಲಕ ಸಾರ್ವಜನಿಕ ಹಿತಾಸಕ್ತಿಗೆ ಇಂತಹ ಹಣ ಬಳಕೆಯಾಗಲು ಕಾರಣವಾಗಬೇಕಿದೆ. ನಾನು ಸಹ ಮೈಸೂರು ಮೃಗಾಲಯ ನಿರ್ವಹಣೆಗೆ ದಾನಿಗಳು ನೆರವು ನೀಡಬೇಕೆಂದು ನಿನ್ನೆಯಷ್ಟೇ ಮೈಸೂರಿನಲ್ಲಿ ಮನವಿ ಮಾಡಿದ್ದೆ. ಹೀಗೆ ಉದಾರಿಗಳ ನೆರವಿನಿಂದ ಇಂತಹ ಮಹಾಮಾರಿ ಎದುರಿಸಲು ಸಾಧ್ಯವಾಗುತ್ತದೆ ಎಂದು ಸೋಮಶೇಖರ್ ಸುದ್ದಿಗಾರರಿಗೆ ತಿಳಿಸಿದರು.

The post ಸಿಎಂ ಪರಿಹಾರ ನಿಧಿಗೆ ₹5 ಕೋಟಿ, 1 ಲಕ್ಷ N95 ಮಾಸ್ಕ್ ನೆರವು ನೀಡಿದ ಅಪೆಕ್ಸ್ ಬ್ಯಾಂಕ್ appeared first on News First Kannada.

Source: newsfirstlive.com

Source link