ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಪರ ಸಹಿ ಸಂಗ್ರಹಿಸಿರುವುದಾಗಿ ಶಾಸಕ ರೇಣುಕಾಚಾರ್ಯ ಹೇಳಿಕೆ ನೀಡಿದ ಹಿನ್ನೆಲೆ ಪ್ರತಿಕ್ರಿಯೆ ನೀಡಿದ ಕಂದಾಯ ಇಲಾಖೆ ಸಚಿವ ಆರ್.ಅಶೋಕ್.. ಯಾರೂ ಪರ, ವಿರುದ್ಧ ಸಹಿ ಸಂಗ್ರಹ ಮಾಡಬಾರದು. ಅನಗತ್ಯ ಗೊಂದಲ ಸೃಷ್ಟಿಸಿದರೆ ಕ್ರಮ ನಿಶ್ಚಿತ ಎಂದಿದ್ದಾರೆ.

ಯಾರೂ ಪರ, ವಿರೋಧದ ಹೇಳಿಕೆಗಳನ್ನ ನೀಡಬಾರದು.. ಸಹಿ ಸಂಗ್ರಹವನ್ನೂ ಮಾಡಬಾರದು. ಪರ, ವಿರುದ್ಧ ಸಹಿ ಸಂಗ್ರಹವನ್ನೂ ಮಾಡಬಾರದು. ಸಿಎಂ ಬಗ್ಗೆಯೂ ಯಾವುದೇ ಹೇಳಿಕೆಗಳನ್ನ ನೀಡಬಾರದು. ಅನಗತ್ಯ ಗೊಂದಲ ಸೃಷ್ಟಿಸಿದರೆ ಕ್ರಮ ನಿಶ್ಚಿತ. ಈ ಸಂಬಂಧ ಸಮಿತಿಯನ್ನ ಕೂಡ ರಚಿಸಲಾಗಿದೆ ಎಂದು ಎಚ್ಚರಿಸಿದ್ದಾರೆ.

ಒಂದು ಬಾರಿ ಸಭೆಯನ್ನ ಕೂಡ ನಡೆಸಲಾಗಿದೆ. ನಮ್ಮ ಪಕ್ಷದ ರಾಜ್ಯದ ಅಧ್ಯಕ್ಷರು ಸಮಿತಿ ರಚನೆ ಮಾಡಿದ್ದಾರೆ. ಸಮಿತಿ ಮೂಲಕ ಗೊಂದಲಕಾರಿ ಹೇಳಿಕೆ ತಡೆಯುವಂಥ ಕೆಲಸ ಮಾಡಲಾಗುತ್ತೆ. ಪರವಾಗಿ, ವಿರುದ್ಧವಾಗಿ ಯಾರೂ ಮಾತಾಡಬಾರದು. ಸಿಎಂ ವಿರುದ್ಧ ಅನಗತ್ಯವಾಗಿ ಹೇಳಿಕೆ ನೀಡಬಾರದು. ಮುಂದೆ ಬಿಜೆಪಿಗೆ ಬೂಸ್ಟ್ ಆಗುವ ರೀತಿಯಲ್ಲಿ ಸಮಿತಿ ರಚಿಸಲಾಗಿದೆ ಎಂದಿದ್ದಾರೆ.

The post ‘ಸಿಎಂ ಪರ-ವಿರೋಧದ ಸಹಿ ಸಂಗ್ರಹಿಸಿ ಗೊಂದಲ ಮೂಡಿಸಿದ್ರೆ ಕ್ರಮ ನಿಶ್ಚಿತ’ appeared first on News First Kannada.

Source: newsfirstlive.com

Source link