ಬಸವರಾಜ ಬೊಮ್ಮಾಯಿ ದಕ್ಷ ನಾಯಕತ್ವದಲ್ಲಿ BJP ಸರ್ಕಾರ ಸುಭದ್ರವಾಗಿದೆ. ಕಾಂಗ್ರೆಸ್ನ ಡಬಲ್ ಡೋರ್ ಬಸ್ಸಿನಿಂದ ಯಾರನ್ನು ಕೆಳಗಿಳಿಸ್ತಾರೆ. ಯಾರು, ಯಾರನ್ನು ಕೆಳಗಿಳಿಸುತ್ತಾರೆಂದು ಸದ್ಯದಲ್ಲೇ ಗೊತ್ತಾಗುತ್ತದೆ ಎಂದು ಕಾಂಗ್ರೆಸ್ ಬೆಳವಣಿಗೆಗಳ ಕುರಿತು ಸಚಿವ ಡಾ.ಕೆ.ಸುಧಾಕರ್ ಲೇವಡಿ ಮಾಡಿದ್ದಾರೆ.

ಸಚಿವ ಡಾ. ಕೆ ಸುಧಾಕರ್
ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಎಂಬುದು ಕಾಂಗ್ರೆಸ್ ಕಂಡ ಕನಸು. ‘3ನೇ ಸಿಎಂ’ ಆಗುತ್ತಾರೆಂಬ ಕಾಂಗ್ರೆಸ್ ಟ್ವೀಟ್ಗೆ ಸಚಿವ ಡಾ.ಕೆ.ಸುಧಾಕರ್(Dr K Sudhakar) ಆಕ್ರೋಶ ಹೊರ ಹಾಕಿದ್ದಾರೆ. ಕಾಂಗ್ರೆಸ್ ಆಳ್ವಿಕೆಯಲ್ಲಿ ಚೀಫ್ ಮಿನಿಸ್ಟರ್ ಅಂದ್ರೆ ಚೀಟಿ ಮಿನಿಸ್ಟರ್. ಚೀಟಿ ಆಧಾರದ ಮೇಲೆ CM ಬದಲಾಯಿಸಿದ ಖ್ಯಾತಿ ಕಾಂಗ್ರೆಸ್ಸಿಗಿದೆ ಎಂದು ಕಾಂಗ್ರೆಸ್ಗೆ ಟ್ವೀಟ್ ಮೂಲಕ ಸಚಿವ ಡಾ.ಕೆ.ಸುಧಾಕರ್ ತಿರುಗೇಟು ಕೊಟ್ಟಿದ್ದಾರೆ.