ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬದಲಾವಣೆ ಬಲವಾಗಿ ಕೇಳಿ ಬರುತ್ತಿದೆ. ಇದಕ್ಕೆ ಪ್ರಮುಖ ವೀರಶೈವ-ಲಿಂಗಾಯತ ರಾಜಕೀಯ ಮುಖಂಡರು ವಿರೋಧವೂ ವ್ಯಕ್ತಪಡಿಸುತ್ತಿದ್ದಾರೆ. ಹೀಗಿರುವಾಗಲೇ ನಾನು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಪಕ್ಷ ನನಗೆ ಮಾತೃ ಸಮಾನ. ನನ್ನನ್ನು ಬೆಂಬಲಿಸುವರು ಪಕ್ಷದ ಶಿಸ್ತನ್ನು ಪಾಲಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಎಂದಿದ್ದರು. ಇದರ ಬೆನ್ನಲ್ಲೀಗ ಸಿಎಂ ಬಿ.ಎಸ್​ ಯಡಿಯೂರಪ್ಪ ಸಚಿವ ಸಂಪುಟ ಸಭೆ ಕರೆದಿದ್ದಾರೆ.

ಸಿಎಂ ಬದಲಾವಣೆ ವದಂತಿ ವಿಚಾರದ ಬೆನ್ನಲ್ಲೇ ಕರೆದಿರುವ ಈ ಸಚಿವ ಸಂಪುಟ ಸಭೆ ತೀವ್ರ ಕುತೂಹಲ ಕೆರಳಿಸಿದೆ. ಇಂದು ವಿಧಾನಸೌಧದಲ್ಲಿ ಸಂಜೆ 4 ಗಂಟೆಗೆ ಸಿಎಂ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡಯಲಿದೆ. ಸಿಎಂ ಬದಲಾವಣೆ ವಿಚಾರವಾಗಿ ಯಡಿಯೂರಪ್ಪ ಈ ಸಭೆಯಲ್ಲಿ ಮೌನ ಮುರಿಯಲಿದ್ದಾರಾ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಇದನ್ನೂ ಓದಿ: ‘ಪಕ್ಷ ನನಗೆ ಮಾತೃ ಸಮಾನ.. ಅಭಿಮಾನ ಶಿಸ್ತು ಮೀರಬಾರದು’ ಬೆಂಬಲಿಗರಿಗೆ ಬಿಎಸ್​ವೈ ಸಂದೇಶ

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ರಹಸ್ಯ ಬಿಚ್ಚಿಡಲಿದ್ದಾರಾ ಎಂಬ ಕುತೂಹಲ ಸಂಪುಟ ಸಹೋದ್ಯೋಗಿಗಳಲ್ಲಿ ಮೂಡಿದೆ. ಈ ಸಭೆಯಲ್ಲಿ ನನ್ನನ್ನು ಬದಲಾಯಿಸಿದರೆ ಯಾರೂ ಕೂಡಾ ಪ್ರತಿಭಟನೆ ಸೇರಿದಂತೆ ಯಾವುದೇ ಅಹಿತಕರ ಕೃತ್ಯಗಳಿಗೆ ಕೈ ಹಾಕಬಾರದು. ಪಕ್ಷದ ಘನತೆಗೆ ಧಕ್ಕೆ ತರುವ, ಮುಜುಗರ ಉಂಟುಮಾಡುವ ಕೆಲಸ ಮಾಡಬಾರದು ಎಂದು ಮನವಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

The post ಸಿಎಂ ಬದಲಾವಣೆ ಕೂಗು ಬೆನ್ನಲ್ಲೇ ಇಂದು ಸಚಿವ ಸಂಪುಟ ಸಭೆ ಕರೆದ ಬಿಎಸ್​ವೈ; ಮಹತ್ವದ ಚರ್ಚೆ appeared first on News First Kannada.

Source: newsfirstlive.com

Source link