ಸಿಎಂ ಬದಲಾವಣೆ ಖಚಿತ ಆಗ್ತಿದ್ದಂತೆ ಗದ್ದುಗೆಗಾಗಿ ಪ್ರಬಲ ಪೈಪೋಟಿ -ತೆರೆಮರೆಯಲ್ಲಿ ನಡೀತಿದೆ ತಯಾರಿ!

ಸಿಎಂ ಬದಲಾವಣೆ ಖಚಿತ ಆಗ್ತಿದ್ದಂತೆ ಗದ್ದುಗೆಗಾಗಿ ಪ್ರಬಲ ಪೈಪೋಟಿ -ತೆರೆಮರೆಯಲ್ಲಿ ನಡೀತಿದೆ ತಯಾರಿ!

ಬೆಂಗಳೂರು: ಬಿಜೆಪಿಯಲ್ಲಿ ರಾಜ್ಯ ನಾಯಕತ್ವ ಬದಲಾವಣೆಯೂ ಬಿರುಗಾಳಿಯ ಸಂಚಲನವನ್ನೇ ಮೂಡಿಸಿದೆ. ಸಿಎಂ ಪಟ್ಟಕ್ಕೇರಲು ತೆರೆಮರೆಯಲ್ಲಿ ತಯಾರಿ ನಡೆಯುತ್ತಿದ್ದು, ಇಬ್ಬರು ನಾಯಕರ ಮಧ್ಯೆ ಪ್ರಬಲ ಪೈಪೋಟಿ ಇದೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ರಾಜ್ಯ ಗಣಿಗಾರಿಕೆ ಸಚಿವ ಮುರುಗೇಶ್​​ ನಿರಾಣಿ ಮುಖ್ಯಮಂತ್ರಿ ಹುದ್ದೆಗಾಗಿ ಭಾರೀ ಪೈಪೋಟಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಕೇಂದ್ರ ಸಚಿವ, ಧಾರವಾಡ ಸಂಸದರಾಗಿರುವ ಪ್ರಹ್ಲಾದ್ ಜೋಶಿ ಹಾಗೂ ಗಣಿ ಮತ್ತು ಭೂವಿಜ್ಞಾನ ಸಚಿವರಾಗಿರುವ ಮುರುಗೇಶ್ ನಿರಾಣಿ ಇಬ್ಬರೂ ಕೂಡ ಉತ್ತರ ಕರ್ನಾಟಕ ಭಾಗದವರೇ ಆಗಿದ್ದಾರೆ.

ಇದನ್ನೂ ಓದಿ: ಯಡಿಯೂರಪ್ಪ ಎಲ್ಲಾ ವರ್ಗದ ಮಾಸ್​​ ಲೀಡರ್​​​; ಶಾಸಕ ಎಂ.ಪಿ ರೇಣುಕಾಚಾರ್ಯ

ಇನ್ನು ಜೋಶಿ ಅವರು ಬ್ರಾಹ್ಮಣ ಸಮುದಾಯದವರಾಗಿದ್ದು, ನಿರಾಣಿ ಪ್ರಬಲ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸೇರಿದವರಾಗಿದ್ದಾರೆ. ಸದ್ಯ ಒಬ್ಬರು ಕೇಂದ್ರದಲ್ಲಿ ಸಚಿವರಾದ್ರೆ, ಇನ್ನೊಬ್ಬರು ರಾಜ್ಯದಲ್ಲಿ ಸಚಿವರಾಗಿದ್ದಾರೆ. ಇಬ್ಬರು ಕೂಡ ತೆರೆಮರೆಯಲ್ಲಿ ತಮ್ಮದೇ ರೀತಿಯಲ್ಲಿ ಕಸರತ್ತು ನಡೆಸುತ್ತಿದ್ದಾರಂತೆ.

The post ಸಿಎಂ ಬದಲಾವಣೆ ಖಚಿತ ಆಗ್ತಿದ್ದಂತೆ ಗದ್ದುಗೆಗಾಗಿ ಪ್ರಬಲ ಪೈಪೋಟಿ -ತೆರೆಮರೆಯಲ್ಲಿ ನಡೀತಿದೆ ತಯಾರಿ! appeared first on News First Kannada.

Source: newsfirstlive.com

Source link