ಸಿಎಂ ಬದಲಾವಣೆ ಖಚಿತ ಬೆನ್ನಲ್ಲೇ ಬಿಎಸ್​​ವೈ ಭೇಟಿಗೆ ಮುಂದಾದ ಮಿತ್ರ ಮಂಡಳಿ ಸದಸ್ಯರು

ಸಿಎಂ ಬದಲಾವಣೆ ಖಚಿತ ಬೆನ್ನಲ್ಲೇ ಬಿಎಸ್​​ವೈ ಭೇಟಿಗೆ ಮುಂದಾದ ಮಿತ್ರ ಮಂಡಳಿ ಸದಸ್ಯರು

ಬೆಂಗಳೂರು; ಸಿಎಂ ಬಿ.ಎಸ್.​​ ಯಡಿಯೂರಪ್ಪ ಅವರು ದೆಹಲಿ ಭೇಟಿಯ ಬಳಿಕ ದಟ್ಟವಾಗಿದ್ದ ನಾಯಕತ್ವ ಬದಲಾವಣೆ ವಿಚಾರ.. ಹಾಗೂ ಬಿಜೆಪಿ ರಾಜಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್​ ಆಗುತ್ತಿದಂತೆ.. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾಗಿದ್ದ ಮಿತ್ರ ಮಂಡಳಿ ನಾಯಕರದಲ್ಲಿ ಆತಂಕ ಶುರುವಾಗಿದೆ ಎನ್ನಲಾಗಿದೆ.

ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಲಸಿಗ ಶಾಸಕರು ಆ ಬಳಿಕ ಸಚಿವ ಸ್ಥಾನವನ್ನು ಪಡೆದುಕೊಂಡಿದ್ದರು. ಆದರೆ ಸದ್ಯ ನಾಯಕತ್ವ ಬದಲಾವಣೆಗೆ ಹೈಕಮಾಂಡ್​ ಸೂಚನೆ ನೀಡಿದೆ ಎಂಬ ಸುದ್ದಿ ಹೊರ ಬರುತ್ತಿದಂತೆ ಸಚಿವರು ಸಿಎಂ ಬಿಎಸ್​​ವೈ ಅವರನ್ನು ಭೇಟಿ ಮಾಡಲು ಮುಂದಾಗಿದ್ದು, ಈಗಾಗಲೇ ಆರೋಗ್ಯ ಸಚಿವ ಡಾ.ಕೆ ಸುಧಾಕರ್, ಕೃಷಿ ಸಚಿವ ಬಿ.ಸಿ ಪಾಟೀಲ್​​ ಹಾಗೂ ಆರ್​​.ಆರ್​​ ನಗರ ಶಾಸಕ ಮುನಿರತ್ನ ಅವರು ಸಿಎಂ ಭೇಟಿ ಮಾಡಿ ಚರ್ಚೆ ನಡೆಸಿದ್ದಾರಂತೆ.

ಇದನ್ನೂ ಓದಿ: 2023ರ ಚುನಾವಣೆ ಗುರಿ; ಸಿಎಂ ಬದಲಾವಣೆ ಖಚಿತ ಬೆನ್ನಲ್ಲೇ ಹೊಸ ಕ್ಯಾಬಿನೇಟ್, 5D ಪ್ಲಾನ್

ಉಳಿದಂತೆ ಎಸ್.ಟಿ. ಸೋಮಶೇಖರ್, ಭೈರತಿ ಬಸವರಾಜ್, ಶಿವರಾಮ್ ಹೆಬ್ಬಾರ್, ಶ್ರೀಮಂತ್ ಪಾಟೀಲ್, ಗೋಪಾಲಯ್ಯ ಅವರು ಬಿಎಸ್​​ವೈರನ್ನ ಭೇಟಿ ಮಾಡಿ, ನಮ್ಮನ್ನ ಸಂಪುಟದಿಂದ ಕೈಬಿಡಬಾರದೆಂದು ಮನವಿ ಮಾಡಿದ್ದಾರಂತೆ. ಈಗಾಗಲೇ ಪಕ್ಷಾಂತರ ಮಾಡಿ ಚುನಾವಣೆಯಲ್ಲಿ ಗೆದ್ದು ಕೆಲ ನಾಯಕರು ಸಚಿವ ಸ್ಥಾನ ಪಡೆದು ಅಧಿಕಾರ ನಡೆಸಿದ್ದು, ಇನ್ನೂ ಕೆಲವರು ಸಚಿವ ಸ್ಥಾನ ಆಕಾಂಕ್ಷಿಗಳಿದ್ದರು. ಆದರೆ ಸದ್ಯ ಸಿಎಂ ಬದಲಾವಣೆಯಿಂದ ತಮ್ಮ ಸಚಿವ ಸ್ಥಾನ ಭದ್ರವಾಗಿರುತ್ತಾ.. ಮುಂದಿನ ಚುನಾವಣೆಗೆ ಪಕ್ಷದಿಂದ ಟಿಕೆಟ್ ಸಿಗುತ್ತಾ.. ಬಿಎಸ್​ವೈ ಬಳಿಕ ಬರೋ ನಾಯಕರು ತಮ್ಮನ್ನು ಪರಿಗಣಿಸುತ್ತಾರಾ ಎಂಬ ಸಂದೇಹಗಳು ಮಿತ್ರ ಮಂಡಳಿ ಸದಸ್ಯರನ್ನ ಕಾಡುತ್ತಿದೆಯಂತೆ.

ಇದನ್ನೂ ಓದಿ: ಜುಲೈ 21ರಂದು RSS​, ಬಿಜೆಪಿ ಸಮನ್ವಯ ಬೈಠಕ್ -ನೂತನ ಸಿಎಂ ಆಯ್ಕೆ ನಿರ್ಧಾರ ಸಾಧ್ಯತೆ

The post ಸಿಎಂ ಬದಲಾವಣೆ ಖಚಿತ ಬೆನ್ನಲ್ಲೇ ಬಿಎಸ್​​ವೈ ಭೇಟಿಗೆ ಮುಂದಾದ ಮಿತ್ರ ಮಂಡಳಿ ಸದಸ್ಯರು appeared first on News First Kannada.

Source: newsfirstlive.com

Source link