ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಮಧ್ಯೆ ಸ್ವತಃ ಸಿಎಂ ಯಡಿಯೂರಪ್ಪನವರೂ ಸಹ ಪರೋಕ್ಷವಾಗಿ ತಮ್ಮ ರಾಜೀನಾಮೆ ಬಗ್ಗೆ ಸೂಚನೆಗಳನ್ನು ನೀಡುತ್ತಿದ್ದಾರೆ.

ಈ ವಿಚಾರವಾಗಿ ವಿಧಾನಸೌಧದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ.. ಯಡಿಯೂರಪ್ಪ ಇವತ್ತು ಹೇಳಿದಾರೆ ಅಂತಿದ್ದೀರಿ, ನಾನು ಅವತ್ತೇ ಹೇಳಿದ್ನಲ್ಲ.. ಯಡಿಯೂರಪ್ಪ ಈ ರಾಜ್ಯಕ್ಕೆ ಒಂದು ಕೆಟ್ಟ ಸರ್ಕಾರ ಕೊಟ್ಟರು. ಮುಂದೆ ಯಾರೇ ಬಿಜೆಪಿಯಿಂದ ಸಿಎಂ ಆದರೂ ಸಹ ಮತ್ತೆ ಕೆಟ್ಟ ಸರ್ಕಾರವನ್ನೇ ಕೊಡ್ತಾರೆ. ಈ ಸರ್ಕಾರವನ್ನು ಬಿಜೆಪಿ ವಿಸರ್ಜಿಸಲಿ.. ಮಧ್ಯಂತರ ಚುನಾವಣೆ ನಡೆದರೆ ಕಾಂಗ್ರೆಸ್ ಸಿದ್ಧವಿದೆ ಎಂದು ಹೇಳಿದ್ದಾರೆ.

The post ಸಿಎಂ ಬದಲಾವಣೆ ಚರ್ಚೆ; ಮಧ್ಯಂತರ ಚುನಾವಣೆಗೆ ಕಾಂಗ್ರೆಸ್ ಸಿದ್ಧವಿದೆ ಎಂದ ಸಿದ್ದರಾಮಯ್ಯ appeared first on News First Kannada.

Source: newsfirstlive.com

Source link