ಮಂಗಳೂರು: ಸಿಎಂ ಬದಲಾವಣೆ ವಿಚಾರ ಚರ್ಚೆಯಲ್ಲಿರುವಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಒಂದು ವೈರಲ್ ಆಗಿದ್ದು ರಾಜ್ಯ ರಾಜಕಾರಣದಲ್ಲಿ ಹಲ್​ಚಲ್​ ಎಬ್ಬಿಸಿದೆ.. ಕಟೀಲ್ ತಮ್ಮ ಆಪ್ತರ ಬಳಿ ಮಾತನಾಡಿದ ಆಡಿಯೋ ಇದು ಎನ್ನಲಾಗಿದೆ.

ಆಡಿಯೋದಲ್ಲಿ ಏನಿದೆ..?
ಯಾರಿಗೂ ಹೇಳೋಕೆ ಹೋಗಬೇಡಿ.. ಈಶ್ವರಪ್ಪ ಜಗದೀಶ್​ ಶೆಟ್ಟರ್​ ಟೀಂ ತೆಗೀತಾ ಇದ್ದೀವಿ. ಹೊಸ ಟೀಂ ಕಟ್ಟಬೇಕು ಅಂತಾ ಅಂದುಕೊಂಡಿದೀವಿ. ಇರಿ ಆಮೇಲೆ ಹೇಳ್ತೀನಿ. ಎಲ್ಲಾ ಹೊಸ ಟೀಂ ಮಾಡ್ತಾ ಇದ್ದೀವಿ.. ಯಾರಿಗೂ ಹೇಳೋಕೆ ಹೋಗಬೇಡಿ. ಏನೂ ತೊಂದರೆ ಇಲ್ಲ ಹೆದರಬೇಡಿ.. ನಾವು ಇದ್ದೀವಿ. ಯಾರಾದರೂ ಇನ್ನು ನಮ್ಮ ಕೈಗೇನೆ. ಮೂರು ಹೆಸರಿದೆ.. ಅದು ಆಗುವ ಸಾಧ್ಯತೆ ಇದೆ.. ಇಲ್ಲ ಇಲ್ಲ.. ಇಲ್ಲಿನವರನ್ನು ಹಾಕಲ್ಲ.. ಡೆಲ್ಲಿಯವರನ್ನೇ ಹಾಕ್ತಾರೆ.

ಈ ಆಡಿಯೋ ರಾಜ್ಯ ರಾಜಕಾರಣದಲ್ಲಿ ಹಲ್​ಚಲ್​ ಎಬ್ಬಿಸಿರೋದಂತೂ ನಿಜ.. ಆದ್ರೆ ಆಡಿಯೋದಲ್ಲಿರುವ ಧ್ವನಿ ನಳೀನ್ ಕುಮಾರ್ ಕಟೀಲ್​ ಅವರದ್ದೇನಾ ಎಂಬ ಬಗ್ಗೆ ಇನ್ನಷ್ಟೇ ಸ್ಪಷ್ಟತೆ ಸಿಗಬೇಕಿದೆ.

The post ಸಿಎಂ ಬದಲಾವಣೆ ನಿಶ್ಚಿತ; ಈಶ್ವರಪ್ಪ, ಜಗದೀಶ್‌ ಶೆಟ್ಟರ್‌ ಟೀಮ್​​ಗೆ ಕೊಕ್‌? ವೈರಲ್ ಆಡಿಯೋದಲ್ಲಿ ಏನಿದೆ.? appeared first on News First Kannada.

Source: newsfirstlive.com

Source link