ಸಿಎಂ ಬದಲಾವಣೆ ಬಗ್ಗೆ ಈಗ ಮೋದಿ-ನಡ್ಡಾಗೇ ಗೊಂದಲ; ಮಠಾಧೀಶರ ಎಂಟ್ರಿ ಬಳಿಕ ತಪ್ಪಿದ ಲೆಕ್ಕಾಚಾರ?

ಸಿಎಂ ಬದಲಾವಣೆ ಬಗ್ಗೆ ಈಗ ಮೋದಿ-ನಡ್ಡಾಗೇ ಗೊಂದಲ; ಮಠಾಧೀಶರ ಎಂಟ್ರಿ ಬಳಿಕ ತಪ್ಪಿದ ಲೆಕ್ಕಾಚಾರ?

ಬೆಂಗಳೂರು: ಸಿಎಂ ಬಿ.ಎಸ್​ ಯಡಿಯೂರಪ್ಪ ಬದಲಾವಣೆ ಬಗ್ಗೆ ಈಗ ಬಿಜೆಪಿ ವರಿಷ್ಠರಿಗೇ ಗೊಂದವುಂಟಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಯಡಿಯೂರಪ್ಪರನ್ನ ಬದಲಾಯಿಸಬೇಕಾ? ಬೇಡವಾ? ಅನ್ನೋದ್ರ ಬಗ್ಗೆ ವಿಪರೀತ ಗೊಂದಲಕ್ಕೆ ಬಿಜೆಪಿ ನಾಯಕರು ಸಿಲುಕಿದ್ದಾರೆ ಎನ್ನಲಾಗಿದೆ.

ಯಡಿಯೂರಪ್ಪ ಪರ ಒಟ್ಟಾಗಿ ಇಡೀ ವೀರಶೈವ-ಲಿಂಗಾಯತ ಸಮುದಾಯ ನಿಂತಿದೆ. ಅದ್ರಲ್ಲೂ ಪಕ್ಷಾತೀತವಾಗಿ ನಾಯಕರು ಯಡಿಯೂರಪ್ಪ ಪರ ಹೇಳಿಕೆ ನೀಡುತ್ತಿದ್ದಾರೆ. ಜೊತೆಗೆ ಮಠಾಧೀಶರೂ ಸಹ ಸಿಎಂ ಪರವಾಗಿಯೇ ಈಗ ನಿಂತಿದ್ದಾರೆ ಇದರಿಂದಾಗಿ ಹೈಕಮಾಂಡ್ ಸಾಫ್ಟ್ ಆಯ್ತಾ ಅನ್ನೋ ಪ್ರಶ್ನೆ? ಈಗ ಮೂಡುತ್ತಿದ್ದು ಸಿಎಂ ಬದಲಾವಣೆ ಈಗ ಸೂಕ್ತವಾ? ಅನ್ನೋ ಗೊಂದಲ ಕೂಡ ಉಂಟಾಗಿದೆಯಂತೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಅನ್ನೋ ಸುದ್ದಿಯೇ ಬಿರುಗಾಳಿ ಎಬ್ಬಿಸಿದ್ದು, ಸಿಎಂ ಬದಲಾಗುತ್ತಾರೆ ಅಂತ ಸಮುದಾಯ ಕೂಡ ಒಗ್ಗಟ್ಟಾಯ್ತಾ? ಅನ್ನೋ ಪ್ರಶ್ನೆ ಕೂಡ ಮೂಡಿದೆ.

ವಿಶೇಷ ಅಂದ್ರೆ ಬಿಎಸ್​ವೈ ಪರ ಕಾಂಗ್ರೆಸ್, ಬಿಜೆಪಿಯ ನಾಯಕರೂ ಸಹ ಪಕ್ಷಾತೀತವಾಗಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಈಗಾಗಲೇ ಮಾಜಿ ಸಚಿವ ಎಂ.ಬಿ ಪಾಟೀಲ್, ವೀರಶೈವ ಮಹಾಸಭಾ ಅಧ್ಯಕ್ಷ ಹಾಗೂ ಶಾಸಕ ಶ್ಯಾಮನೂರು ಶಿವ ಶಂಕರಪ್ಪ ಬ್ಯಾಟ್​ ಬೀಸಿದ್ದಾರೆ. ಇನ್ನೊಂದೆಡೆ ಹಲವು ನಾಯಕರು ಸಹ ಸಿಎಂ ಬಿಎಸ್​ವೈ ಪರ ಹೇಳಿಕೆ ನೀಡುತ್ತಿದ್ದಾರೆ. ಅಲ್ಲದೇ, ‘ಬಿಎಸ್​ವೈ ಬದಲಾಯಿಸಬಾರದು ಅಂತ ಹೇಳಿಕೆ ಕೊಟ್ಟಿದ್ದಾರೆ.

ಹೀಗೆ ಸಾಲು ಸಾಲು ಮಠಾಧೀಶರೂ ಸಿಎಂ ಭೇಟಿಯಾಗಿದ್ದಾರೆ, ನಿಮ್ಮ ಪರ ನಾವಿದ್ದೇವೆ ಅನ್ನೋ ಸಂದೇಶವನ್ನ ಕೊಟ್ಟಿದ್ದಾರೆ. ಇದಿಷ್ಟೇ ಅಲ್ಲ ಕೆಲ  ಕೆಲ ಸ್ವಾಮೀಜಿಗಳಂತೂ ನೇರವಾಗಿಯೇ ಬಿಜೆಪಿಗೆ ನಾಯಕತ್ವಕ್ಕೆ ಸವಾಲು ಹಾಕಿದ್ದು, ಸಿಎಂ ಬದಲಾಯಿಸದಂತೆ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಸಿಎಂ ಬದಲಾವಣೆ ಆದ್ರೆ ಗಂಭೀರ ಪರಿಣಾಮಗಳನ್ನ ಎದುರಿಸಬೇಕಾಗುತ್ತೆ ಅಂತ ಎಚ್ಚರಿಸಿದ್ದಾರೆ.

ಹೀಗಾಗಿ, ಈ ಬೆಳವಣಿಗೆಗಳಿಂದ ಹೈಕಮಾಂಡ್​ಗೂ ಈಗ ಗೊಂದಲ ಉಂಟಾಗಿದೆಯಂತಾ ಹೇಳಲಾಗ್ತಿದೆ. ಹೀಗೆ ಸದ್ಯ ಮತ್ತೊಮ್ಮೆ
ಯಡಿಯೂರಪ್ಪರನ್ನ ಬದಲಾಯಿಸಬೇಕಾ? ಬೇಡ್ವಾ? ಎಂಬ ಗೊಂದಲ ಹೈ-ಕಮಾಂಡ್​ಗೆ ಉಂಟಾಗಿದೆಯಂತೆ.

The post ಸಿಎಂ ಬದಲಾವಣೆ ಬಗ್ಗೆ ಈಗ ಮೋದಿ-ನಡ್ಡಾಗೇ ಗೊಂದಲ; ಮಠಾಧೀಶರ ಎಂಟ್ರಿ ಬಳಿಕ ತಪ್ಪಿದ ಲೆಕ್ಕಾಚಾರ? appeared first on News First Kannada.

Source: newsfirstlive.com

Source link