ಬೆಂಗಳೂರು: ನಿನ್ನೆ ರಾತ್ರಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್ ಎನ್ನಲಾಗಿರೋ ಆಡಿಯೋ ವಿಚಾರ ಬಹಿರಂಗವಾಗ್ತಿದ್ದಂತೆ ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಮಹತ್ವದ ಬದಲಾವಣೆಯ ಚರ್ಚೆಯೇ ಶುರುವಾಗಿದೆ. ಏನೆಂದರೇ, ರಾಜ್ಯದಲ್ಲಿ ಸಿಎಂ ಬಿಎಸ್‌ ಯಡಿಯೂರಪ್ಪ ಬದಲಾವಣೆಯಾಗುವುದು ಬಹತೇಕ ಖಚಿತವಾಗಿದೆ ಎನ್ನಲಾಗ್ತಿದೆ.

ಸಿಎಂ ರೇಸ್‌ನಲ್ಲಿ ಬಿಜೆಪಿಯ ನಾಲ್ವರು ನಾಯಕರು ನಾ ಮುಂದು ತಾ ಮುಂದು ಅಂತ ಸಿದ್ಧರಾಗಿದ್ದಾರೆ ಅಂತ ಹೇಳಲಾಗ್ತಿದೆ. ಅವಱರು ಅಂದತ ನೋಡುವುದಾದ್ರೆ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಡಿಸಿಎಂ ಅಶ್ವತ್‌ ನಾರಾಯಣ್‌ ಮತ್ತು ಶಾಸಕ ಅರವಿಂದ್‌ ಬೆಲ್ಲದ್‌ ಕೂಡ ಸಿಎಂ ರೇಸ್‌ನಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ನಾಲ್ವರಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಭಾರೀ ಪೈಪೋಟಿ ಶುರುವಾಗಿದೆ.

ಜುಲೈ 26ರಂದು ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷದ ಸಭೆ
ಸಿಎಂ ಹೈಕಮಾಂಡ್​ ಭೇಟಿ ಬೆನ್ನಲ್ಲೇ ರಾಜ್ಯ ಬಿಜೆಪಿ ಶಾಸಕಂಗ ಪಕ್ಷದ ಸಭೆ ಕರೆದಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ. ಇದೇ ಜುಲೈ 26ರಂದು ಶಾಸಕಾಂಗ ಸಭೆಯ ದಿನಾಂಕವನ್ನು ಸಿಎಂ ಘೋಷಿಸಿದ್ದು, ಈ ಬಗ್ಗೆ ರಾಜ್ಯ ರಾಜಕೀಯದಲ್ಲಿ ಚರ್ಚೆಗಳು ಗರಿಗೆದರಿವೆ.
2023ರ ರಾಜ್ಯ ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಸಿದ್ಧತೆ ಮಾಡಿಕೊಳ್ತಿದೆ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗ್ತಿದ್ದು, ಈ ಸಭೆಯಲ್ಲಿ ಎಲೆಕ್ಷನ್ ಕ್ಯಾಬಿನೆಟ್ ರಚನೆ ವಿಚಾರದ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ. ಇನ್ನು ಈ ಸಭೆಯ ಮುಖಾಂತರ ಎಷ್ಟು ಮಂದಿ ತಮ್ಮ ಪರವಿದ್ದಾರೆ? ಎಷ್ಟು ಜನ ವಿರೋಧಿಗಳಿದ್ದಾರೆ ಎಂಬುವುದನ್ನು ತಾಳೆ ಹಾಕುವುದಕ್ಕೆ ಸಹ ಸಿಎಂ ಮುಂದಾಗಿದ್ದಾರೆ ಅಂತ ಹೇಳಲಾಗ್ತಿದೆ.

The post ಸಿಎಂ ಬದಲಾವಣೆ ಬಹುತೇಕ ಖಚಿತ -ಜುಲೈ 26ರಂದು ಶಾಸಕಾಂಗ ಪಕ್ಷದ ಸಭೆ ಕರೆದ ಬಿಎಸ್​​ವೈ appeared first on News First Kannada.

Source: newsfirstlive.com

Source link