ಬೆಂಗಳೂರು: ಲಾಕ್​​ಡೌನ್​ನಿಂದ ರಾಜ್ಯದಲ್ಲಿ ಕೊರೊನಾ 2ನೇ ಅಲೆ ತಹಬದಿಗೆ ಬರ್ತಿದೆ. ಹೀಗಾಗಿ ಲಾಕ್​​ಡೌನ್ ಸಡಿಲಿಕೆ ಮಾಡಲು ಸಿಎಂ ಯಡಿಯೂರಪ್ಪ ಮುಂದಾಗಿದ್ದಾರೆ. ಹಂತ ಹಂತವಾಗಿ ಲಾಕ್​​ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸುವ ನಿಟ್ಟಿನಲ್ಲಿ ಇಂದು ಬೆಳಗ್ಗೆ 11.30ಕ್ಕೆ 11 ಜಿಲ್ಲೆಗಳ ಡಿಸಿಗಳ ಜೊತೆ ಸಿಎಂ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ.

11 ಜಿಲ್ಲೆಗಳಲ್ಲಿ ಕೊರೊನಾ ಸೋಂಕಿನ ಸ್ಥಿತಿಗತಿ ಬಗ್ಗೆ ಮಾಹಿತಿ ಕಲೆ ಹಾಕಲಿದ್ದಾರೆ. ಜೊತೆಗೆ ಯಾವ ಮಾದರಿಯಲ್ಲಿ ಲಾಕ್​​ಡೌನ್ ಸಡಿಲಿಕೆ ಮಾಡಬೇಕು ಅನ್ನೋ ಬಗ್ಗೆ ಚರ್ಚಿಸಲು ಸಿಎಂ ಬಿಎಸ್​ವೈ ಸಂಜೆ 6 ಗಂಟೆಗೆ ಕಾವೇರಿ ನಿವಾಸದಲ್ಲಿ ಕೋವಿಡ್-19 ಉಸ್ತುವಾರಿ ಸಚಿವರೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. ಹೀಗಾಗಿ ಇವತ್ತೇ ಅನ್​ಲಾಕ್ ಆದೇಶ ಹೊರಬಿಳುವ ಸಾಧ್ಯತೆ ಇದೆ.

The post ಸಿಎಂ ಬಿಎಸ್​ವೈರಿಂದ ಮಹತ್ವದ ಸಭೆ.. ಇಂದೇ ಹೊರಬೀಳುತ್ತಾ ಅನ್‌ಲಾಕ್ ಆದೇಶ? appeared first on News First Kannada.

Source: newsfirstlive.com

Source link