ಸಿಎಂ ಬಿಎಸ್​ವೈ -ಮಾಜಿ ಸಿಎಂ ಹೆಚ್​ಡಿಕೆ ಚರ್ಚೆ..ಕೂತೂಹಲ ಮೂಡಿಸಿರುವ  ಭೇಟಿ

ಸಿಎಂ ಬಿಎಸ್​ವೈ -ಮಾಜಿ ಸಿಎಂ ಹೆಚ್​ಡಿಕೆ ಚರ್ಚೆ..ಕೂತೂಹಲ ಮೂಡಿಸಿರುವ  ಭೇಟಿ

ಬೆಂಗಳೂರು: ಇಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ, ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರನ್ನ ಭೇಟಿಯಾಗಿದ್ದಾರೆ.

ಊಭಯ ನಾಯಕರು ಮಂಡ್ಯ ಮೈಶುಗರ್ ಖಾಸಗೀಕರಣ ಸಮಸ್ಯೆ ಬಗ್ಗೆ ಮಹತ್ವದ ಚರ್ಚೆ ನಡೆಸುತ್ತಿದ್ದಾರೆ. ಇದರ ಜೊತೆಗೆ ಇತರೆ ಪ್ರಮುಖ ಪ್ರಸಕ್ತ ವಿಚಾರಗಳ ಬೆಗ್ಗಯೂ ಚರ್ಚೆ ಮಾಡಿದ್ದಾರೆ. ಮನ್ಮುಲ್ ಅಕ್ರಮ ಪ್ರಕರಣ, ಜಿ.ಪಂ-ತಾ.ಪಂ ಮೀಸಲಾತಿ ವಿಚಾರಗಳ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿನ್ನೆಲೆ ಸಿಎಂ-ಮಾಜಿ ಸಿಎಂ ಭೇಟಿ ಕುತೂಹಲ ಮೂಡಿಸಿದೆ.

ಕುಮಾರಸ್ವಾಮಿ ಜೊತೆಗೆ ಮಂಡ್ಯ ಶಾಸಕ ಎಂ.ಶ್ರೀನಿವಾಸ್, ಮಳವಳ್ಳಿ ಶಾಸಕ ಅನ್ನದಾನಿ ಹಾಗೂ ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಕೂಡ ಸಿಎಂ ನಿವಾಸಕ್ಕೆ ಆಗಮಿಸಿದ್ದಾರೆ.

The post ಸಿಎಂ ಬಿಎಸ್​ವೈ -ಮಾಜಿ ಸಿಎಂ ಹೆಚ್​ಡಿಕೆ ಚರ್ಚೆ..ಕೂತೂಹಲ ಮೂಡಿಸಿರುವ  ಭೇಟಿ appeared first on News First Kannada.

Source: newsfirstlive.com

Source link