ಸಿಎಂ ಬೊಮ್ಮಾಯಿ ನಿಮ್ಮ ಹನಿಮೂನ್ ಕಾಲ ಮುಗಿದಿದೆ; ಜನಸ್ವರಾಜ್​ ಯಾತ್ರೆ ಅಲ್ಲ, ಇದು ಜನಬರ್ಬಾದ್ ಯಾತ್ರೆ- ಸಿದ್ದರಾಮಯ್ಯ ಟ್ವೀಟ್ | Siddaramaiah expressed outraged on twitter that CM Basavaraj Bommai honeymoon is over


ಸಿಎಂ ಬೊಮ್ಮಾಯಿ ನಿಮ್ಮ ಹನಿಮೂನ್ ಕಾಲ ಮುಗಿದಿದೆ; ಜನಸ್ವರಾಜ್​ ಯಾತ್ರೆ ಅಲ್ಲ, ಇದು ಜನಬರ್ಬಾದ್ ಯಾತ್ರೆ- ಸಿದ್ದರಾಮಯ್ಯ ಟ್ವೀಟ್

ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು: ಅಕಾಲಿಕ ಮಳೆಯಿಂದ ಅರ್ಧ ರಾಜ್ಯ ತತ್ತರಿಸಿಹೋಗಿದೆ. ಕೈಗೆ ಬಂದ ಬೆಳೆ ಬಾಯಿಗೆ ಬರದೆ ಗದ್ದೆಯಲ್ಲಿ ಕೊಳೆಯುತ್ತಿದೆ. ಸರ್ಕಾರ ಟೂರಿಂಗ್ ಟಾಕೀಸ್ ರೀತಿ ಜನಸ್ವರಾಜ್ ಎಂಬ ನಾಟಕವನ್ನು ಪ್ರದರ್ಶನ ಮಾಡುತ್ತಿದೆ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಜನಸ್ವರಾಜ್ ಯಾತ್ರೆ ಅಲ್ಲ, ಇದು ಜನಬರ್ಬಾದ್ ಯಾತ್ರೆ ಅಂತ ಟ್ವೀಟ್ ಮೂಲಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಳೆ, ನೆರೆಗೆ ಸಿಲುಕಿ 20ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. 10 ಸಾವಿರ ಹೆಕ್ಟೇರ್​ಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ರಾಜ್ಯದ ಹಲವೆಡೆ ಮನೆ ಬಿದ್ದು ಜನ ಬೀದಿಪಾಲಾಗಿದ್ದಾರೆ. ಸಂಕಷ್ಟದಲ್ಲಿರುವವರ ನೆರವಿಗೆ ಬರಬೇಕಿದ್ದ ರಾಜ್ಯ ಸರ್ಕಾರ, ಜನಸ್ವರಾಜ್ ಎಂದ ನಾಟಕ ಮಾಡುತ್ತಾ ತಿರುಗುತ್ತಿದ್ದಾರೆ ಅಂತ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಸಿಎಂ ಬೊಮ್ಮಾಯಿ ನಿಮ್ಮ ಹನಿಮೂನ್​ ಕಾಲ ಮುಗಿದಿದೆ ಎಂ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ ಸಿದ್ದರಾಮಯ್ಯ, ನಿಮ್ಮ ಸಚಿವರ ಈ ನಾಟಕ ಪ್ರದರ್ಶನದ ಯಾತೆ ನಿಲ್ಲಿಸಿ. ಸಚಿವರನ್ನು ಮಳೆ ಪೀಡಿತ ಜಿಲ್ಲೆಗಳಿಗೆ ಕಳುಹಿಸಿ. ಕಣ್ಣೀರಿಟ್ಟು ಗೋಳಾಡುತ್ತಿರುವ ಜನರ ಕಷ್ಟಗಳನ್ನು ಆಲಿಸಿ. ಪರಿಹಾರ ಕಾರ್ಯಕೈಗೊಳ್ಳುವಂತೆ ಸಚಿವರಿಗೆ ಸೂಚನೆ ನೀಡಿ ಅಂತ ತಿಳಿಸಿದ್ದಾರೆ.

ಅಕಾಲಿಕ ಮಳೆಯಿಂದ ಸಾವಿರಾರು ಎಕರೆ ಬೆಳೆ ಹಾಳಾಗಿದೆ. ಭತ್ತ, ರಾಗಿ, ಜೋಳ, ತರಕಾರಿ, ಬಾಳೆ, ತೆಂಗು ಬೆಳೆ ಹಾನಿಯಾಗಿದೆ. ನಮ್ಮ ಅನ್ನದಾತರು ಕಣ್ಣೀರಿನಿಂದ ಕೈತೊಳೆಯುತ್ತಿದ್ದಾರೆ. ಸಚಿವರು ಯಾತ್ರೆಯಲ್ಲಿದ್ದಾರೆ, ಅಧಿಕಾರಿಗಳು ಮನೆಯಲ್ಲಿದ್ದಾರೆ. ಜನ ಬೀದಿಪಾಲಾಗಿದ್ದಾರೆ, ಇಲ್ಲೊಂದು ಸರ್ಕಾರ ಇದೆಯೇ? ಅಂತ ಮಾಜಿ ಮುಖ್ಯಮಂತ್ರಿ ಪ್ರಶ್ನಿಸಿದ್ದಾರೆ.

 

ಇದನ್ನೂ ಓದಿ

ವಿಜಯಪುರದಲ್ಲಿ ಎಟಿಎಂಗೆ ಹಾನಿ ಮಾಡದೇ 16 ಲಕ್ಷಕ್ಕೂ ಹೆಚ್ಚು ಹಣ ಎಗರಿಸಿದ ಕಳ್ಳರು! ಬ್ಯಾಂಕ್ ಸಿಬ್ಬಂದಿ, ಕಾವಲುಗಾರನಿಂದಲೇ ಕಳ್ಳತನ ಶಂಕೆ

ಯುರೋಪ್​ನಲ್ಲಿ ಕೊರೊನಾ ಹೆಚ್ಚಳದಿಂದ ಜಗತ್ತಿಗೆ ಆತಂಕ; ಆಸ್ಟ್ರಿಯಾ, ನೆದರ್​​ಲ್ಯಾಂಡ್ಸ್​ನಲ್ಲಿ ಲಾಕ್​ಡೌನ್! ಜನರ ಪ್ರತಿಭಟನೆ

TV9 Kannada


Leave a Reply

Your email address will not be published. Required fields are marked *