ಸಿಎಂ ಮಾಧ್ಯಮ ಸಂಯೋಜಕ ದಿ. ಗುರುಲಿಂಗಸ್ವಾಮಿ ಹೊಳಿಮಠ ಪತ್ನಿಗೆ ನೌಕರಿ ಮಂಜೂರು ಮಾಡಿದ ಸರ್ಕಾರ | Govt granted employment to CM Media Coordinator late Gurulingaswamy holimath’s wife


ಮುಖ್ಯಮಂತ್ರಿ ಮಾಧ್ಯಮ ಸಂಯೋಜಕರಾಗಿದ್ದ ದಿವಂಗತ ಗುರುಲಿಂಗಸ್ವಾಮಿ ಹೊಳಿಮಠ ಕುಟುಂಬಕ್ಕೆ ನೌಕರಿ ಮಂಜೂರು ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಸಿಎಂ ಮಾಧ್ಯಮ ಸಂಯೋಜಕ ದಿ. ಗುರುಲಿಂಗಸ್ವಾಮಿ ಹೊಳಿಮಠ ಪತ್ನಿಗೆ ನೌಕರಿ ಮಂಜೂರು ಮಾಡಿದ ಸರ್ಕಾರ

ಗುರುಲಿಂಗಸ್ವಾಮಿ ಹೊಳಿಮಠ

ಬೆಂಗಳೂರು: ಮುಖ್ಯಮಂತ್ರಿ ಮಾಧ್ಯಮ ಸಂಯೋಜಕರಾಗಿದ್ದ ದಿವಂಗತ ಗುರುಲಿಂಗಸ್ವಾಮಿ ಹೊಳಿಮಠ ಕುಟುಂಬಕ್ಕೆ ನೌಕರಿ ಮಂಜೂರು ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ದಿ. ಗುರುಲಿಂಗಸ್ವಾಮಿ ಹೊಳಿಮಠ ಪತ್ನಿ ದೀಪಾ ಅವರಿಗೆ ಸಿಎಂ ಸಚಿವಾಲಯದಲ್ಲಿ ಸಿ ಗ್ರೂಪ್ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾಧ್ಯಮ ಸಂಯೋಜಕರಾಗಿದ್ದ ಗುರುಲಿಂಗಸ್ವಾಮಿ ಹೊಳಿಮಠ ಅವರು ಬೆಂಗಳೂರಿನಲ್ಲಿ  ಆ.23  ಸೋಮವಾರ ಮುಂಜಾನೆ ನಿಧನರಾದರು. 44 ವರ್ಷ ವಯಸ್ಸಿನ ಅವರಿಗೆ ಜಿಮ್​ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ನಾಗರಬಾವಿಯ ಯುನಿಟಿ ಲೈಫ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರಿದ್ದ ವಾಹನ ಆಸ್ಪತ್ರೆ ತಲುಪುವ ಒಳಗೆ ಪ್ರಾಣಪಕ್ಷಿ ಹಾರಿಹೋಗಿತ್ತು.

ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಾದ ನಂತರ ಗುರುಲಿಂಗಸ್ವಾಮಿ ಅವರನ್ನು ಗೃಹ ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ನೇಮಿಸಲಾಗಿತ್ತು. ಬೊಮ್ಮಾಯಿ ಮುಖ್ಯಮಂತ್ರಿಯಾದ ನಂತರ ಗುರುಲಿಂಗಸ್ವಾಮಿ ಅವರನ್ನು ಮಾಧ್ಯಮ ಸಂಯೋಜಕರಾಗಿ ನೇಮಿಸಿಕೊಳ್ಳಲಾಯಿತು.

ಕಳೆದ ವರ್ಷ (2021ರ) ಆಗಸ್ಟ್​ 2ರಿಂದ ಜಾರಿಗೆ ಬರುವಂತೆ ಮುಖ್ಯಮಂತ್ರಿಗಳ ಅವಧಿಯವರೆಗೆ ಗುತ್ತಿಗೆ ಆಧಾರದ ಮೇಲೆ ಗುರುಲಿಂಗಸ್ವಾಮಿ ಅವರನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕರನ್ನಾಗಿ ನೇಮಕ ಮಾಡಲಾಗಿದೆ ಎಂದು ಆಗಸ್ಟ್​ 18, 2021ರಂದು ಹೊರಡಿಸಿದ್ದ ಆದೇಶದಲ್ಲಿ ತಿಳಿಸಲಾಗಿತ್ತು. ಗುರುಲಿಂಗಸ್ವಾಮಿ ಅವರು ವಿಜಯವಾಣಿ ಸೇರಿದಂತೆ ಹಲವು ಪತ್ರಿಕೆ ಮತ್ತು ಟಿವಿ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.