ಮೈಸೂರು: ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಬದಲಾವಣೆ ಸುದ್ದಿ ಕೇಳಿ ಸಚಿವ ಸಿ.ಪಿ ಯೋಗೇಶ್ವರ್ ಫುಲ್​​ ಖುಷಿಯಾಗಿದ್ದಾರೆ ಎನ್ನಲಾಗಿದೆ. ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳಿದ ಕೂಡಲೇ ಇದಕ್ಕೆ ಸಚಿವ ಸಿ.ಪಿ.ಯೋಗೇಶ್ವರ್ ಸ್ಮೈಲ್​​ ಮಾಡಿದ್ದಾರೆ. ಈ ಮೂಲಕ ಮೌನಂ ಸಮ್ಮತಿ ಲಕ್ಷಣಂ ಎಂಬ ಸಂದೇಶ ಸಾರಿದ್ದಾರೆ.

ಈ ಸಂಬಂಧ ತಲಕಾಡಿನಲ್ಲಿ ಮಾತಾಡಿದ ಸಿ.ಪಿ ಯೋಗೇಶ್ವರ್​​​, ನಾನು ಯಾವುದೇ ಕಾರಣಕ್ಕೂ ಈ ವಿಚಾರದ ಬಗ್ಗೆ ಮಾತಾಡೋಲ್ಲ. ನಾನು ಮಾತಾಡಿದರೇ ಸಾಕು ತಪ್ಪಿಗೆ ಸಿಲುಕಿಸಿಬಿಡ್ತೀರಿ. ಮೂರು ದಿನಗಳಿಂದ ಮಡಿಕೇರಿಯಲ್ಲಿ ಇದ್ದೇನೆ. ಇಂದಿನ ರಾಜಕೀಯ ವಿದ್ಯಾಮಾನಗಳ ಬಗ್ಗೆ ಮಾಹಿತಿ ಇಲ್ಲ ಎಂದರು.

ಹೆಲಿ-ಟೂರಿಸಂ ಶುರುವಾಗಲಿದೆ:

ಮುಂದಿನ 15 ದಿನಗಳಲ್ಲಿ ಬೆಂಗಳೂರಿನಲ್ಲಿ ಹೆಲಿ-ಟೂರಿಸಂ ಶುರುವಾಗಲಿದೆ. ಆದರೆ, ಈ ಹೆಲಿ-ಟೂರಿಸಂಗೆ ಮೈಸೂರಿನಲ್ಲಿ ವಿರೋಧವಿದೆ. ಆದರೆ, ವಿಮಾನ ನಿಲ್ದಾಣ ಬಳಕೆ ಮಾಡಿಕೊಂಡು ಪ್ರಾರಂಭ ಮಾಡುತ್ತೇವೆ. ಸದ್ಯದಲ್ಲೇ ಮೈಸೂರಿನಲ್ಲೂ ಹೆಲಿ-ಟೂರಿಸಂ ಶುರು ಮಾಡಲಿದ್ದೇವೆ. ಇಂತಹ ಸಂದರ್ಭದಲ್ಲಿ ನಾನು ರಾಜಕೀಯ ಬಗ್ಗೆ ಮಾತಾಡೋಲ್ಲ ಎಂದು ಸ್ಮೈಲ್​​​​ ಕೊಟ್ಟು ಸುಮ್ಮನಾದರು.

ಇದನ್ನೂ ಓದಿ: ಸಿ.ಎಂ ಬದಲಾವಣೆ ವಿಚಾರ ಬೆನ್ನಲ್ಲೇ ಯಡಿಯೂರಪ್ಪ ಶಿವಮೊಗ್ಗ ಪ್ರವಾಸ

The post ಸಿಎಂ ಯಡಿಯೂರಪ್ಪ ಬದಲಾವಣೆ ಸುದ್ದಿ ಕೇಳಿ ಫುಲ್​ ಖುಷಿಯಾದ್ರಾ ಸಚಿವ ಸಿ.ಪಿ ಯೋಗೇಶ್ವರ್​​? appeared first on News First Kannada.

Source: newsfirstlive.com

Source link