ಮೈಸೂರು: ಆರೋಗ್ಯ ಇಲಾಖೆ‌ ಸಿಬ್ಬಂದಿ ನೇಮಕ‌ ವಿಳಂಬವಾಗುತ್ತಿದೆ. ಯಾವುದೇ ನೇಮಕಾತಿ ನಡೆಯಬೇಕಾದರೂ ಪ್ರತಿಯೊಂದಕ್ಕೂ ಹಣಕಾಸು ಇಲಾಖೆಯ ಒಪ್ಪಿಗೆ ಬೇಕು. ಸಿ.ಎಂ.ಯಡಿಯೂರಪ್ಪ ಅವರೇ ಹಣಕಾಸು ಸಚಿವರಾಗಿರುವುದರಿಂದ ಎಲ್ಲಾ ಅವರ ಹತ್ತಿರ ಹೋಗಬೇಕು. ಅವರು ಕ್ಲಿಯರ್ ಮಾಡಲ್ಲ. ಆದರೆ ಆರೋಗ್ಯಮಂತ್ರಿಗೆ ಆಸಕ್ತಿ, ಅವಸರ ಎರಡೂ ಇದೆ ಎಂದು ಬಿಜೆಪಿ ಪರಿಷತ್​​ ಸದಸ್ಯರಾದ ಹೆಚ್​​.ವಿಶ್ವನಾಥ್ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಶ್ವನಾಥ್ ಅವರು, ಇಲಾಖೆಯಲ್ಲಿ ಚೆನ್ನಾಗಿ ಕೆಲಸ ಮಾಡಲು ದುಡ್ಡು ಬೇಡವೇ? 10 ರೂಪಾಯಿ ಕೂಡ ಸಿಎಂ ಅವರೇ ರಿಲೀಸ್ ಮಾಡಬೇಕು. ರಾಜ್ಯದಲ್ಲಿ ಭತ್ತ, ರಾಗಿ, ಜೋಳ ಕೊಟ್ಟಿರುವ ರೈತರಿಗೆ ಇನ್ನೂ ಸರ್ಕಾರದ ದುಡ್ಡು ಬಿಡುಗಡೆಯಾಗಿಲ್ಲ. ಆದರೆ ವಾರಕ್ಕೆ ಒಂದು ಸಲ ಕಾಂಟ್ರಾಕ್ಟರ್ ಬಿಲ್ಸ್ ರಿಲೀಸ್ ಆಗುತ್ತೆ. ಏಕೆಂದರೆ ಕಂಟ್ರಾಕ್ಟರ್​ನಿಂದ 20 ಪರ್ಸೆಂಟ್ ಕಿಕ್​​ಬ್ಯಾಕ್ ಬರುತ್ತೆ. ರೈತರ ಹತ್ತಿರ ಯಾವ ಕಿಕ್ ಬ್ಯಾಕ್ ಬರುತ್ತೆ ಎಂದು ಹೇಳಿದರು.

ಆಡಳಿತದಲ್ಲಿ ಭದ್ರತೆ ಇಲ್ಲದಿರುವುದು ಎಲ್ಲಾ ವೈಫಲ್ಯಗಳಿಗೆ ಕಾರಣವಾಗಿದೆ. ದಿವಸಕ್ಕೆ ಹತ್ತು ಸಾವಿರ ಫಿಕ್ಸ್ ಮಾಡಿದ್ರೂ ಖಾಸಗಿ ಆಸ್ಪತ್ರೆಗಳು 35 ಸಾವಿರ ರೂಪಾಯಿ ಬಿಲ್ ಮಾಡುತ್ತಿದ್ದಾರೆ. ಪ್ರೈವೇಟ್ ಹಾಸ್ಪಿಟಲ್​ಗಳು ದುಡ್ಡು ಮಾಡುತ್ತಿವೆ. ಕೇಂದ್ರ ಸರ್ಕಾರದ ಬಜೆಟ್​ನಲ್ಲಿ ಪಿ.ಹೆಚ್.ಸಿ ಗಳನ್ನು ಅಪ್​​ಗ್ರೇಡ್ ಮಾಡಲು ಹಣ ಮೀಸಲಿಟ್ಟಿದೆ. ಮುಂದೆ ಸರಿಯಾಗಲಿದೆ ಎಂದು ಮಾತನಾಡಿರುತ್ತಾರೆ. ಇಂತಹ ಪರಿಸ್ಥಿತಿ ಯಾವತ್ತೂ ಬಂದಿಲ್ಲ ಎಂದು ಸರ್ಕಾರದ ವಿರುದ್ಧ ಗುಡುಗಿದರು.

The post ಸಿಎಂ ಯಾವುದಕ್ಕೂ ಕ್ಲಿಯರೆನ್ಸ್ ಕೊಡ್ತಿಲ್ಲ, ಆಡಳಿತದಲ್ಲಿ ಭದ್ರತೆ ಇಲ್ಲ- ವಿಶ್ವನಾಥ್ ಗುಡುಗು appeared first on News First Kannada.

Source: newsfirstlive.com

Source link