ಬೆಂಗಳೂರು: ಸಿಎಂ ಬಿ.ಎಸ್​ ಯಡಿಯೂರಪ್ಪ ರಾಜೀನಾಮೆ ಕುರಿತು ಮಹತ್ವದ ಸುಳಿವು ಕೊಟ್ಟ ಸಂಬಂಧ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ನ್ಯೂಸ್​​ ಫಸ್ಟ್​​ ಜತೆಗೆ ಮಾತಾಡಿದ ರೇಣುಕಾಚಾರ್ಯ.. ಸಿಎಂ ಯಡಿಯೂರಪ್ಪ ನಮ್ಮ ನಾಯಕರು.. ತಮ್ಮ ಅಧಿಕಾರದಲ್ಲಿ ಕರ್ನಾಟಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕೋವಿಡ್​​-19 ನಿರ್ವಹಣೆಯಾಗಲಿ ಅಭಿವೃದ್ಧಿ ಕೆಲಸಗಳಾಗಲೀ, ಪ್ರವಾಹ ಸಂರ್ಭದಲ್ಲೂ ಉತ್ತಮ ಕೆಲಸ ಮಾಡಿದ್ದಾರೆ. ರಾಜ್ಯಾದ್ಯಂತ ಹಗಲು ರಾತ್ರಿಯೆನ್ನದೇ ಶ್ರಮಿಸಿ ಬಿಜೆಪಿ ಪಕ್ಷ ಸಂಘಟನೆ ಮಾಡಿದ್ದಾರೆ ಎಂದರು.

ರಾಜೀನಾಮೆ ನೀಡಬೇಕೆಂದು ಯಾವುದೇ ರಾಷ್ಟ್ರೀಯ ನಾಯಕರು ಸೂಚನೆ ಕೊಟ್ಟಿದ್ದು ನಾನು ಕಂಡಿಲ್ಲ. ಸಂಘಪರಿವಾರದ ನಿಷ್ಠಾವಂತ ಕಾರ್ಯಕರ್ತ ಯಡಿಯೂರಪ್ಪ. ಪುರಸಭೆ ಅಧ್ಯಕ್ಷರಾಗಿದ್ದಾಗ ವಿರೋಧಿಗಳು ಯಡಿಯೂರಪ್ಪ ತಲೆಗೆ ಬಲವಾದ ಪೆಟ್ಟು ಕೊಟ್ಟಾಗ ಕುಸಿದು ಬಿದ್ದಿದ್ದರು. ಬಳಿಕ ಒಂದು ರೀತಿ ಮೇಲಕ್ಕೆ ಎದ್ದು ಬಂದು ಕೆಲಸ ಮಾಡಿದರು. ಇವರು ಛಲದಂಕ ಮಲ್ಲ, ಹೋರಾಟಗಾರ. ರಾಜಕೀಯಕ್ಕೆ ಹೋರಾಟದ ಮೂಲಕವೇ ಬಂದವರು. ಶಾಸಕರಾಗಿ, ಪ್ರತಿಪಕ್ಷದ ನಾಯಕರಾಗಿ, ಲೋಕಸಭಾ ಸದಸ್ಯರಾಗಿ, ಬಿಜೆಪಿ ರಾಜ್ಯಾಧ್ಯಕ್ಷರಾಗಿ, ಉಪ ಮುಖ್ಯಮಂತ್ರಿಯಾಗಿ, ಈಗ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಹೊಗಳಿದರು.

ಇನ್ನು, ಎಲ್ಲಿಯೂ ಯಡಿಯೂರಪ್ಪ ರಾಜೀನಾಮೆ ಕೊಡ್ತೀನಿ ಎಂದು ಹೇಳಿಲ್ಲ. ಬದಲಿಗೆ ವರಿಷ್ಠರು ಹೇಳಿದಂತೆ ನಡೆದುಕೊಳ್ಳುತ್ತೇನೆ ಅಂದಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರು ಮತ್ತು ಹೈಕಮಾಂಡ್​​ ತೆಗೆದುಕೊಂಡ ತೀರ್ಮಾನ ಪಾಲಿಸುತ್ತೇನೆ ಎಂದಿದ್ದಾರಷ್ಟೇ ಅಂದರು.

ಇದನ್ನೂ ಓದಿ: ಲೋಕ ಕಲ್ಯಾಣಕ್ಕಾಗಿ ಸಿಎಂ ಯಾಗ; ಯಡಿಯೂರಪ್ಪಗಾಗಿ ರಾಜ್ಯಾದ್ಯಂತ ಸ್ವಾಮೀಜಿಗಳ ಯಜ್ಞ

ಮುಂದುವರೆದು.. ಯಡಿಯೂರಪ್ಪ ಪಕ್ಷದ ಶಿಸ್ತು ಮೀರಲ್ಲ ಅಂದಿದ್ದಾರೆ. ರಾಜೀನಾಮೆ ಕೊಡಿ ಎಂದು ಯಡಿಯೂರಪ್ಪಗೆ ರಾಷ್ಟ್ರೀಯ ನಾಯಕರು ಹೇಳಿರೋದು ನಾನು ಇದುವರೆಗೂ ಕೇಳಿಲ್ಲ. ಯಡಿಯೂರಪ್ಪ ಮತ್ತು ರಾಷ್ಟ್ರೀಯ ನಾಯಕರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವು ಬದ್ಧರಾಗಿದೀವಿ ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: ಹೈಕಮಾಂಡ್​ಗೆ ತಲೆಬಾಗುವುದು ಕರ್ತವ್ಯ ಅಂತಾ ಒಂದೇ ಮಾತಿನಲ್ಲಿ ಸಿಎಂ ಹೇಳಿದ್ದಾರೆ-ಬಿ.ವೈ. ರಾಘವೇಂದ್ರ

ಯಡಿಯೂರಪ್ಪ ಬಿಜೆಪಿಯ ಹಿಂದುತ್ವ, ಧರ್ಮ ಮತ್ತು ದೇವರ ಮೇಲೆ ನಂಬಿಕೆಯಿಟ್ಟವರು. ಮಠಾಧೀಶರ ಬಗ್ಗೆ ಗೌರವ ಇಟ್ಟುಕೊಂಡವರು. ಹೀಗಾಗಿ ಕೇವಲ ವೀರಶೈವ ಲಿಂಗಾಯತ ಸಮುದಾಯವಲ್ಲದೇ ಎಲ್ಲಾ ಜಾತಿಗಳ ಸ್ವಾಮೀಜಿಗಳು ಬಂದು ಬೆಂಬಲ ನೀಡಿದ್ದಾರೆ ಎಂದು ತಿಳಿಸಿದರು.

The post ಸಿಎಂ ರಾಜೀನಾಮೆ ಕೊಡ್ತೀನಿ ಅಂದಿಲ್ಲ.. ಹೈಕಮಾಂಡ್​​ ತೀರ್ಮಾನ ಪಾಲಿಸುತ್ತೇನೆ ಎಂದಿದ್ದಾರೆ- ರೇಣುಕಾಚಾರ್ಯ appeared first on News First Kannada.

Source: newsfirstlive.com

Source link