ಬೆಂಗಳೂರು: ಗುತ್ತಿಗೆದಾರ ಚಂದ್ರಕಾಂತ್ ರಾಮಲಿಂಗಂ ಲಂಚ ಆರೋಪ ಪ್ರಕರಣದಲ್ಲಿ ಸಿಎಂ ಯಡಿಯೂರಪ್ಪ ಮತ್ತು ಅವರ ಕುಟುಂಬಕ್ಕೆ ಇಂದು ಬಿಗ್ ರಿಲೀಫ್ ಸಿಕ್ಕಿದೆ.

ಯಡಿಯೂರಪ್ಪ ಮತ್ತು ಅವರ ಕುಟುಂಬದ 9 ಸದಸ್ಯರ ವಿರುದ್ಧ ಎಫ್‍ಐಆರ್ ದಾಖಲಿಸಲು ಕೋರಿ ಸಲ್ಲಿಕೆಯಾಗಿದ್ದ ಖಾಸಗಿ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾ ಮಾಡಿದೆ. ಇದನ್ನೂ ಓದಿ : ಜುಲೈ 19ರಿಂದ ಪದವಿ ಕಾಲೇಜುಗಳು ಪ್ರಾರಂಭ?

ರಾಜ್ಯಪಾಲರು ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಲು ನಿರಾಕರಿಸಿದ್ದನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಅಬ್ರಾಹಂ, ಕೋರ್ಟ್ ಮೊರೆ ಹೋಗಿದ್ದರು.

ದೂರಿನಲ್ಲಿ ಏನಿತ್ತು?
ಕೋಲ್ಕತ್ತಾ  ಮೂಲದ ಶೆಲ್ ಕಂಪನಿಗಳಲ್ಲಿ ಯಡಿಯೂರಪ್ಪ ಕುಟುಂಬಸ್ಥರು ಹೂಡಿಕೆ ಮಾಡಿದ್ದಾರೆ. ಗುತ್ತಿಗೆದಾರ ಚಂದ್ರಕಾಂತ್ ರಾಮಲಿಂಗಮ್ ಜೊತೆ ವಿಜಯೇಂದ್ರ, ಶಶಿಧರ ಮರಡಿ ಲಿಂಕ್ ಇದೆ. ಸರ್ಕಾರದ ವಿವಿಧ ಕಾಮಗಾರಿಗಳಿಗೆ ಫಂಡ್ ರಿಲೀಸ್ ಮಾಡಲು ಸಿಎಂ ಆಪ್ತರು ಒತ್ತಡ ಹಾಕಿದ್ದಾರೆ. ಸರ್ಕಾರ ವಿವಿಧ ಇಲಾಖೆ ಯೋಜನೆಗಳಲ್ಲಿ ಒತ್ತಡ ಹಾಕಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.

ದೂರಿಗೆ ಪೂರಕವಾಗಿ ವಾಟ್ಸಪ್ ಚಾಟ್ ಸಲ್ಲಿಕೆಯಾಗಿದ್ದು, 2020ರ ಅಕ್ಟೋಬರ್ 19 ರಂದು ಶಶಿಧರ್, ಚಂದ್ರಕಾಂತ್ ಅವರಲ್ಲಿ ಮೆಸೇಜ್ ಮಾಡಿ ಹಣ ಕೇಳಿದ್ದಾರೆ. ಯಾವಾಗ ತಮ್ಮ ಬ್ಯಾಲೆನ್ಸ್ ಕ್ಲೀಯರ್ ಮಾಡ್ತಿರಾ ಎಂದು ಪ್ರಶ್ನೆ ಮಾಡಿದ್ದಾರೆ.

ಮಧ್ಯಾಹ್ನ 2:36ಕ್ಕೆ ಮೆಸೇಜ್ ಮಾಡಿ ಕೇಳಿರುವ ಸಾಕ್ಷಿಗಳಿದೆ. ಅದಕ್ಕೆ ಸೋಮವಾರ ಮಧ್ಯಾಹ್ನ 3 ಗಂಟೆಗೆ ಹಣ ನೀಡುತ್ತೇನೆ ಎಂದು ಚಂದ್ರಕಾಂತ್ ಹೇಳಿದ್ದಾರೆ. ಈ ಚಾಟ್ ನಲ್ಲಿ ಶಶಿಧರ್ ಅವರಿಗೆ 3 ಕೋಟಿ ನೀಡುವ ಬಗ್ಗೆ ಮಾತುಕತೆ ನಡೆಸಿದ ಬಗ್ಗೆ ದಾಖಲೆ ಪತ್ತೆಯಾಗಿದೆ ಎಂದು ದೂರು ನೀಡಿದ್ದರು.

The post ಸಿಎಂ, ವಿಜಯೇಂದ್ರ ಸೇರಿದಂತೆ 9 ಮಂದಿಗೆ ಬಿಗ್ ರಿಲೀಫ್ appeared first on Public TV.

Source: publictv.in

Source link