ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಉತ್ತರಾಧಿಕಾರಿಯಾಗಿ ಯಾರನ್ನು ನೇಮಿಸಬಹುದು ಎಂಬ ಚರ್ಚೆ ಜೋರಾಗಿದೆ. ಯುವ ನಾಯಕರೊಬ್ಬರಿಗೆ ಪಟ್ಟ ಕಟ್ಟಲು ಹೈಕಮಾಂಡ್ ಗಂಭೀರವಾಗಿ ಆಲೋಚಿಸಿದೆ ಎಂಬ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಸಿಎಂ ಬದಲಾವಣೆ ಜೊತೆಗೆ ಸಂಪುಟ ಪುನಾರಚನೆಗೂ ಹೈಕಮಾಂಡ್ ಚಿಂತನೆ ನಡೆಸಿದೆ. ವಲಸಿಗ ಸಚಿವರೂ ಸೇರಿದಂತೆ 10ರಿಂದ 12 ಸಚಿವರನ್ನೂ ಕೈಬಿಡಲು ಚಿಂತಿಸಿದೆ.

ರೇಸ್‍ನಲ್ಲಿ ಯಾರಿದ್ದಾರೆ?
ಪ್ರಹ್ಲಾದ್ ಜೋಷಿ:
ಹುಬ್ಬಳ್ಳಿ-ಧಾರವಾಡ ಸಂಸದರಾಗಿರುವ ಇವರು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆಯ ಸಚಿವರಾಗಿದ್ದಾರೆ. ಅನುಭವಿ ರಾಜಕಾರಣಿ, ಸಂಘ ಪರಿವಾರದ ಕಟ್ಟಾಳು, ಪಕ್ಷ ನಿಷ್ಠ, ಮೋದಿ ಆಪ್ತ, ಚಾಣಾಕ್ಷ ಆಡಳಿತಗಾರ, ಸಂಘಟನಾ ಚತುರ, ಬ್ರಾಹ್ಮಣ ಸಮುದಾಯದ ಮುಖಂಡರಾಗಿದ್ದಾರೆ.

ವಿಶ್ವೇಶ್ವರ ಹೆಗಡೆ ಕಾಗೇರಿ:
ಶಿರಸಿ ಶಾಸಕರಾಗಿರುವ ಇವರು ಹಾಲಿ ವಿಧಾನಸಭಾ ಸ್ಪೀಕರ್ ಆಗಿದ್ದಾರೆ. ಆರ್‍ಎಸ್‍ಎಸ್ ಮತ್ತು ಪಕ್ಷ ನಿಷ್ಠ, ಅನುಭವಿ ರಾಜಕಾರಣಿ, ಭ್ರಷ್ಟಾಚಾರದ ಕೆಸರು ಅಂಟಿಲ್ಲ. ಬ್ರಾಹ್ಮಣ ಸಮುದಾಯದ ಮುಖಂಡರಾಗಿದ್ದಾರೆ.

ಸಿ.ಟಿ.ರವಿ:
ಚಿಕ್ಕಮಗಳೂರು ಶಾಸಕರಾಗಿರುವ ಇವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಯುವ ಮುಖಂಡ, ಹಿಂದುತ್ವದ ಪ್ರತಿಪಾದಕ, ಸಂಘ ಮತ್ತು ಪಕ್ಷ ನಿಷ್ಠ, ಸಂಘಟನಾ ಚತುರ, ಹೈಕಮಾಂಡ್ ಕಣ್ಣಿಗೆ ಬಿದ್ದಿರುವ ನಾಯಕ, ಇತ್ತೀಚಿಗೆ ತಮಿಳುನಾಡು ಎಲೆಕ್ಷನ್ ಹೊಣೆಯನ್ನು ಹೊತ್ತಿದ್ದರು.

ಅರವಿಂದ್ ಬೆಲ್ಲದ್:
ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕರಾಗಿರುವ ಬಿಜೆಪಿ ಯುವ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಹೈಕಮಾಂಡ್ ಪಾಲಿನ ನೀಲಿಗಣ್ಣಿನ ಹುಡುಗ, ಪಂಚಮಸಾಲಿ ಸಮುದಾಯದ ಮುಖಂಡ, ಕ್ಲೀನ್ ಹ್ಯಾಂಡ್, ಆರ್‌ಎಸ್‌ಎಸ್‌ ಮತ್ತು ಪಕ್ಷದೆಡೆಗಿನ ನಿಷ್ಠೆ ಹೊಂದಿದ್ದಾರೆ.

ಮುರುಗೇಶ್ ನಿರಾಣಿ:
ಬೀಳಗಿ ಶಾಸಕರಾಗಿರುವ ಇವರು ಸದ್ಯ ಗಣಿ ಮತ್ತು ಭೂ ವಿಜ್ಞಾನ ಖಾತೆಯ ಸಚಿವರಾಗಿದ್ದಾರೆ. ಉದ್ಯಮಿ, ಪಂಚಮಸಾಲಿ ಸಮುದಾಯದ ಪ್ರಮುಖ ಮುಖಂಡ, ಹೈಕಮಾಂಡ್ ನಾಯಕರೊಂದಿಗೆ ನಂಟು, ಅಮಿತ್ ಶಾ ಜೊತೆಗೆ ಒಡನಾಟ, ಆಡಳಿತದ ಅನುಭವವನ್ನು ಹೊಂದಿದ್ದಾರೆ.

ಅಶ್ವಥ್ ನಾರಾಯಣ:
ಮಲ್ಲೇಶ್ವರಂ ಶಾಸಕರಾಗಿರುವ ಇವರು ಡಿಸಿಎಂ ಆಗಿದ್ದಾರೆ. ಒಕ್ಕಲಿಗ ಸಮುದಾಯದ ಮುಖಂಡ, ಉತ್ತರಾಧಿಕಾರಿ ಹುಡುಕಾಟ ವೇಳೆ ಕಣ್ಣಿಗೆ ಬಿದ್ದ ಯುವ ನಾಯಕ. ಸಾಮಥ್ರ್ಯ ಪರೀಕ್ಷೆ ನಡೆಸಲು ಡಿಸಿಎಂ ಹುದ್ದೆ ನೀಡಲಾಗಿದೆ. ಕೇರಳ ವಿಧಾನಸಭಾ ಚುನಾವಣೆಯ ಉಸ್ತುವಾರಿಯನ್ನು ಹೊತ್ತಿದ್ದರು. ಇದನ್ನೂ ಓದಿ : ಜುಲೈ 26ಕ್ಕೆ ಬಿಎಸ್‍ವೈ ಮಹಾ ಭಾಷಣ? – ಸಿಎಂ ಬೆಂಬಲಿಗರು ಸೈಲೆಂಟ್ 

The post ಸಿಎಂ ಸ್ಪರ್ಧೆಯಲ್ಲಿದ್ದಾರೆ 6 ಮಂದಿ – ಅರ್ಹತೆ, ಅನುಭವ ಏನು? appeared first on Public TV.

Source: publictv.in

Source link