ಸಿಕ್ಸರ್​​ ಕಿಂಗ್​​ ಯುವರಾಜ್​ ಬಯೋಪಿಕ್​​ಗೆ ವಿಘ್ನ​.. ಪ್ರಾಜೆಕ್ಟ್​ ಕೈಬಿಟ್ಟ ಕರಣ್​ ಜೋಹರ್

ಮುಂಬೈ: ಬಾಲಿವುಡ್​ನಲ್ಲಿ ಬಯೋಪಿಕ್​​ ಸಿನಿಮಾಗಳ ಹವಾ ನಡೆಯುತ್ತಿದೆ. ಅದರಲ್ಲೂ ಕ್ರೀಡಾ ಕ್ಷೇತ್ರಗಳ ಸ್ಟಾರ್​ಗಳ ಬಯೋಪಿಕ್​​ಗಳು ಸಾಕಷ್ಟು ಸದ್ದು ಕೂಡ ಮಾಡುತ್ತಿವೆ. ಈ ನಡುವೆ ಸಿಕ್ಸರ್ ಕಿಂಗ್​ ಯುವರಾಜ್​​ ಸಿಂಗ್​​ ಅವರ ಬಯೋಪಿಕ್​ ನಿರ್ಮಾಣ ಮಾಡಲು ನಿರ್ಮಾಪಕ ಕರಣ್​ ಜೋಹರ್​ ಸಿದ್ಧತೆ ನಡೆಸಿದ್ದರು ಎಂಬ ಸುದ್ದಿ ಕಳೆದ ಎರಡು ದಿನಗಳ ವರದಿಯಾಗಿತ್ತು. ಆದರೆ ಸದ್ಯ ಕರಣ್​ ಜೋಹರ್ ಯುವಿ ಸಿನಿಮಾವನ್ನು ಕೈಬಿಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ.

ಯುವರಾಜ್ ಸಿಂಗ್ ಹಾಗೂ ಬಾಲಿವುಡ್ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ನಡುವೆ ಸಿನಿಮಾಗೆ ಸಂಬಂಧಿಸಿದಂತೆ ಕಿರಿಕ್ ಆಗಿದೆ ಎನ್ನಲಾಗಿದೆ. ಇದರಿಂದಲೇ ಕರಣ್ ಜೋಹರ್ ಸಿನಿಮಾ ನಿರ್ಮಾಣವನ್ನು ಕೈಬಿಟ್ಟಿದ್ದರಂತೆ. ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ನಟನ ಕುರಿತಂತೆ ಯುವರಾಜ್ ಸಿಂಗ್ ಮಾಡಿದ ಡಿಮ್ಯಾಂಡ್‌ನಿಂದಲೇ ಕರಣ್ ಜೋಹರ್ ಸಿನಿಮಾ ನಿರ್ಮಾಣದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಹೃತಿಕ್​​ ರೋಷನ್​​ ಅಥವಾ ರಣಬೀರ್ ಕಪೂರ್​​ ಇಬ್ಬರಲ್ಲಿ ಒಬ್ಬರು ತಮ್ಮ ಬಯೋಪಿಕ್​​​​ನಲ್ಲಿ ನಟಿಸಿದರೇ ಚೆನ್ನಾಗಿರುತ್ತದೆ ಎಂದು ಯುವರಾಜ್​ ಸಿಂಗ್​ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಕರಣ್​​ ತಮ್ಮ ಸಿನಿಮಾದಲ್ಲಿ ಹೊಸ ಹುಡುಗ ಸಿದ್ಧಾರ್ಥ್​​ ಚತುರ್ವೇದಿ ಅವರನ್ನು ಲೀಡ್​ ರೋಲ್​​ನಲ್ಲಿ ಪರಿಚಯ ಮಾಡಲು ಮುಂದಾಗಿದ್ದರು ಎನ್ನಲಾಗಿದೆ.

News First Live Kannada

Leave a comment

Your email address will not be published. Required fields are marked *