ಇಂಗ್ಲೆಂಡ್​​ನಲ್ಲಿ ನಡೆದ ಕ್ಲಬ್ ಕ್ರಿಕೆಟ್​ವೊಂದರಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಇಲ್ಲಿಂಗ್​ವರ್ಥ್​ ಕ್ರಿಕೆಟ್​​ ಕ್ಲಬ್ ಬ್ಯಾಟ್ಸ್​​ಮನ್​ ಆಸಿಫ್​ ಅಲಿ ಸಿಕ್ಸರ್​ ಸಿಡಿಸಿದ್ರು. ಆದರೆ ಆ ಚೆಂಡು ಬೌಂಡರಿ ಗೆರೆ ಆಚೆ ಇದ್ದ ಕಾರಿಗೆ ಬಡಿದಿದ್ದು, ಕಾರಿನ ಹಿಂಬದಿ ಗಾಜು ಪೀಸ್​​ಪೀಸ್​ ಆಗಿದೆ. ಕಾಕತಾಳೀಯ ಎಂಬಂತೆ ಚೆಂಡು ಬಿದ್ದು ಗಾಜು ಚೂರುಚೂರಾದ ಕಾರು ಆ ಬ್ಯಾಟ್ಸ್​​ಮನ್​ನದ್ದೇ ಆಗಿತ್ತು. ಆ ಕ್ಷಣ ಆಸಿಫ್​​ ಕ್ರೀಸ್​​​ನಲ್ಲೇ ತಲೆ ಮೇಲೆ ಕೈಹೊತ್ತು ಒಂದು ಕ್ಷಣ ಕುಳಿತುಬಿಟ್ಟರು. ಸದ್ಯ ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗ್ತಿದೆ.

The post ಸಿಕ್ಸರ್​​ ಬಾರಿಸಿ ತಲೆ ಮೇಲೆ ಕೈಹೊತ್ತು ಕುಳಿತಿದ್ದೇಕೆ ಬ್ಯಾಟ್ಸ್​​ಮನ್? ವಿಡಿಯೋ appeared first on News First Kannada.

Source: newsfirstlive.com

Source link