2016ರಲ್ಲಿ ಸ್ಯಾಂಡಲ್​ವುಡ್​ನ ಇಬ್ಬರು ಉದಯೋನ್ಮುಖ ಖಳನಟರು ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಹೆಲಿಕಾಪ್ಟರ್​ನಿಂದ ನೀರಿಗೆ ಲೈವ್​ ಜಂಪ್​ ಮಾಡಿ ಪ್ರಾಣ ಕಳೆದುಕೊಂಡಿದ್ದರು. ಆ ವಿಚಾರದ ಬಗ್ಗೆ ಸಾಕಷ್ಟು ಚರ್ಚೆಗಳಾಗಿದ್ದರೂ ಕೂಡ ಒಬ್ಬೊಬ್ಬರು ಒಂದೊಂದು ವಿಚಾರವನ್ನ ಮಾತನಾಡಿದ್ದರು. ಆ್ಯಕ್ಷನ್​ ಸೀಕ್ವೆನ್ಸ್​ ಕೊರಿಯೋಗ್ರಾಫ್​ ಮಾಡ್ತಿದ್ದ ಸ್ಟಂಟ್​ ಮಾಸ್ಟರ್​ ರವಿವರ್ಮಾ ಈ ವಿಚಾರವಾಗಿ ಜೈಲು ಸೇರಿದ್ದರು. ಇದೀಗ ಸರಿ ಸುಮಾರು ಐದು ವರ್ಷಗಳ ಬಳಿಕ ರವಿವರ್ಮಾ ನ್ಯೂಸ್​ ಫಸ್ಟ್​ ಜೊತೆ ಮಾತನಾಡುತ್ತಾ ಒಂದೊಂದೇ ರಹಸ್ಯಗಳನ್ನ ಬಿಚ್ಚಿಟ್ಟಿದ್ದಾರೆ.

ಹೌದು.. ಘಟನೆ ನಡೆದ ದಿನ ದುನಿಯಾ ವಿಜಯ್​ಗೆ ಲೈಫ್​ ಜ್ಯಾಕೆಟ್​ ಹಾಕಲಾಗಿದ್ದು, ಉದಯ್​ ಹಾಗೂ ಅನಿಲ್​ ಕಡೇ ಪಕ್ಷ ಶರ್ಟ್​​ ಕೂಡ ಇಲ್ಲದೇ ಬರೀ ಪ್ಯಾಂಟ್​​ನಲ್ಲಿ ಶೂಟ್​ ಮಾಡಿದ್ದರು. ಈ ಬಗ್ಗೆ ರವಿವರ್ಮಾರನ್ನ ಕೇಳಿದ್ರೆ, ‘ದುನಿಯಾ ವಿಜಯ್​ ಅವರು ಜ್ಯಾಕೆಟ್​ ಬೇಡ ಅಂದ್ರೂ ಬೈದು ಹಾಕಿಸಿದ್ವಿ. ಆದ್ರೆ ಉದಯ್​ ಮತ್ತು ಅನಿಲ್​​ ಅವರ ಸಿಕ್ಸ್​ ಪ್ಯಾಕ್ಸ್​ ಕಾಣಿಸಬೇಕು ಅನ್ನೋ ಕಾರಣಕ್ಕೆ ಲೈಫ್​ ಜ್ಯಾಕೆಟ್​ ಬೇಡ ಅಂತ ಹಠ ಹಿಡಿದ್ರು’ ಅಂತ ಹೇಳಿದ್ದಾರೆ.

ನನಗೆ ಬೇರೆ ಸಿನಿಮಾಗಳ ಶೂಟಿಂಗ್​ ಇದೆ ಅಂತ ಮಾಸ್ತಿಗುಡಿ ಟೀಮ್​ಗೂ ತಿಳಿಸಿದ್ದೆ. ಎಲ್ಲೋ ಒಂದೇ ದಿನ ಬ್ರೇಕ್​ ಸಿಗೋದು, ತಯಾರಿ ಮಾಡ್ಕೊಳ್ಳೋಕು ಆಗಲ್ಲ ಅಂದಿದ್ದೆ. ಆದ್ರೆ ಅವರು, ಅದೆಲ್ಲಾ ನಿಮಗ್ಯಾಕೆ ನಾವೆಲ್ಲಾ ರೆಡಿ ಮಾಡಿರ್ತೀವಿ ಬನ್ನಿ ಅಂದ್ರು. ನನಗೆ ಅಲ್ಲಿ ನೀರಿಗೆ ಲೈವ್​ ಜಂಪ್​ ಮಾಡ್ಬೇಕು ಅನ್ನೋದು ಗೊತ್ತಿರಲಿಲ್ಲ. ಜಂಪ್​ ಮಾಡೋದು ಲೈವ್​ ಶೂಟ್​ ಮಾಡೋದಕ್ಕೆ ಇಡೀ ಮೀಡಿಯಾ ತಂಡವೇ ಬಂದಿತ್ತು. ಅನಿಲ್​-ಉದಯ್​ ತಮಗೆ ಈಜು ಬರಲ್ಲ ಅಂತ ಮೀಡಿಯಾದ ಇಂಟರ್​ವ್ಯೂನಲ್ಲಿ ಹೇಳಿದ್ದಾರೆ. ಆದ್ರೆ ಆಗಲೂ ಯಾರೂ ಬಂದು ಅದರ ಬಗ್ಗೆ ನನ್ನ ಬಳಿ ಪ್ರಶ್ನೆ ಮಾಡಿಲ್ಲ.

ಕೆರೆಯಲ್ಲಿ ಈ ಜಾಗದಲ್ಲಿ ಆಗಲ್ಲ, ಆ ಜಾಗದಲ್ಲಿ ಬೀಳೋಕೆ ಆಗಲ್ಲ ಅಂತ ಬಹಳ ಅಡೆತಡೆ ನಂತರ ಕೊನೆಗೆ ಒಂದು ಜಾಗ ಫಿಕ್ಸ್​ ಆಗಿದ್ದು. ದುನಿಯಾ ವಿಜಯ್​ ಅವರು ಲೈಫ್​​ ಜ್ಯಾಕೆಟ್​ ಬೇಡ ಅಂದ್ರು. ಬೈದು ಜ್ಯಾಕೆಟ್​ ಹಾಕಿಸಿದ್ವಿ. ಉದಯ್​, ಅನಿಲ್​​ ಇಬ್ಬರಿಗೂ ಹಿಂಸೆ ಮಾಡಿ ಜ್ಯಾಕೆಟ್​ ಹಾಕಿ ಅಂದ್ರೆ, ಇಲ್ಲ ಸಿಕ್ಸ್​ ಪ್ಯಾಕ್​ ತೋರಿಸ್ಬೇಕು ಅಂತ ಅವರ ಹಠ. ಕಾಲಿಗಾದ್ರೂ ಸೈಕಲ್​​ ಟ್ಯೂಬ್​ಗಳನ್ನ ಹಾಕೋಣ ಅಂದ್ರೆ ಇಬ್ಬರೂ ಟೈಟ್​​ ಪ್ಯಾಂಟ್​ ಹಾಕೊಂಡಿದ್ದಾರೆ. ಕೊನೆಗೆ ಶೂ ಕೂಡ ಹಾಕೊಂಡಿಲ್ಲ, ಸಾಕ್ಸ್​ ಅಷ್ಟೆ.

ರವಿವರ್ಮಾ, ಸ್ಟಂಟ್​ ಮಾಸ್ಟರ್​​

The post ಸಿಕ್ಸ್​​ ಪ್ಯಾಕ್ಸ್​​ ತೋರಿಸೋ ಭರದಲ್ಲಿ ಪ್ರಾಣ ಕಳೆದುಕೊಂಡ್ರಾ ಖಳನಟರು..? ರವಿವರ್ಮಾ ಹೇಳಿದ್ದೇನು? appeared first on News First Kannada.

Source: newsfirstlive.com

Source link