ಸಿಕ್ಸ್ ​ಪ್ಯಾಕ್​ ಕನಸು ಕಂಡ ಇಂಜಿನಿಯರ್​​​ಗೆ ಜಿಮ್​​ ಟ್ರೈನರ್​ನಿಂದ ₹7 ಲಕ್ಷ ದೋಖಾ

ಸಿಕ್ಸ್ ​ಪ್ಯಾಕ್​ ಕನಸು ಕಂಡ ಇಂಜಿನಿಯರ್​​​ಗೆ ಜಿಮ್​​ ಟ್ರೈನರ್​ನಿಂದ ₹7 ಲಕ್ಷ ದೋಖಾ

ಬೆಂಗಳೂರು: ಸಿಕ್ಸ್ ಪ್ಯಾಕ್ ಮಾಡಿಸ್ತೀನಿ ಅಂತ ಇಂಜಿನಿಯರ್ ಯುವಕನಿಗೆ ಜಿಮ್​ ಟ್ರೈನರ್​ವೊಬ್ಬ ದೋಖಾ ಮಾಡಿರುವ ಆರೋಪ ಕೇಳಿಬಂದಿದೆ. ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಕೆರೆಹಳ್ಳಿಯಲ್ಲಿ ಈ ಘಟನೆ ನಡೆದಿದೆ.

ಹೊಸಕೆರೆಹಳ್ಳಿಯ ನಿವಾಸಿ, ಇಂಜಿನಿಯರ್ ಕೌಶಿಕ್ ಎಂಬವರು ಸಿಕ್ಸ್ ಪ್ಯಾಕ್ ಮಾಡಲು ಇಚ್ಚಿಸಿದ್ದರು. ಇದಕ್ಕಾಗಿ ಬನಶಂಕರಿ ಮೂರನೇ ಹಂತದ ಮೋಹನ್ ಎಂಬ ಜಿಮ್ ಟ್ರೈನರನ್ನು ಸಂಪರ್ಕಿಸಿದ್ದರು. ಬನಶಂಕರಿಯಲ್ಲಿ ಎಂಪವರ್ ಹೆಸರಿನಲ್ಲಿ ಜಿಮ್ ನಡೆಸುತ್ತಿರುವ ಮೋಹನ್, ಸಿಕ್ಸ್ ಪ್ಯಾಕ್ ಮಾಡಿರೋ ಫೋಟೋಗಳನ್ನು ಕೌಶಿಕ್ಗೆ ತೋರಿಸಿ ಮೂರೇ ತಿಂಗಳಲ್ಲಿ ನಿನಗೂ ಸಿಕ್ಸ್ ಪ್ಯಾಕ್ ಮಾಡಿಸುತ್ತೇನೆ ಎಂದು ಭರವಸೆ ನೀಡಿದ್ದ ಎನ್ನಲಾಗಿದೆ.

ಇದಕ್ಕಾಗಿ ಮೊದಲೆರಡು ಹಂತಗಳಲ್ಲಿ ಕೌಶಿಕ್ನಿಂದ ಎರಡು ಲಕ್ಷ ಹಣ ಪಡೆದಿರೋ ಜಿಮ್ ಟ್ರೈನರ್ ಮೋಹನ್, ನಂತರ ಬ್ಯಾಂಕ್ನಿಂದ ಐದು ಲಕ್ಷ ಹಣ ಕೊಡಿಸು.. ಇಎಂಐ ನಾನೇ ಕಟ್ಟುತ್ತೇನೆ ಎಂದು ನಂಬಿಸಿದ್ದ. ಈ ಮಾತು ನಂಬಿ ಜಿಮ್ ಟ್ರೈನರ್ಗೆ ತನ್ನ ಅಕೌಂಟ್ ನಿಂದ ಐದು ಲಕ್ಷ ಲೋನ್ ಹಣವನ್ನ ಮೋಹನ್​​ಗೆ ಕೊಡಿಸಿದ್ದಾಗಿ ಕೌಶಿಕ್ ಹೇಳಿದ್ದಾರೆ.

ಹಣ ಪಡೆದ ಬಳಿಕ ತನ್ನ ವರಸೆ ಬದಲಿಸಿದ ಮೋಹನ್, ಸಿಕ್ಸ್​ ಪ್ಯಾಕ್ ಮಾಡಲು ಯಾವುದೇ ತರಬೇತಿ ನೀಡದೆ, ಬ್ಯಾಂಕ್​ಗೆ ಇಎಂಐ ಹಣ ಕೂಡ ಕಟ್ಟದೆ ವಂಚಿಸಿದ್ದಾನೆ ಎಂದು ಕೌಶಿಕ್​ ಆರೋಪ ಮಾಡಿದ್ದಾರೆ. ಘಟನೆ ಕುರಿತಂತೆ ಕೌಶಿಕ್​​ ಗಿರಿನಗರ ಪೊಲೀಸ್ ಠಾಣೆಯಲ್ಲಿ ಮೋಹನ್​ ವಿರುದ್ಧ ದೂರು ದಾಖಲು ಮಾಡಿದ್ದು, ಎಫ್​​ಐಆರ್​ ದಾಖಲಾಗುತ್ತಿದಂತೆ ಇತ್ತ ಜಿಮ್ ಟ್ರೈನರ್ ಮೋಹನ್ ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ.

The post ಸಿಕ್ಸ್ ​ಪ್ಯಾಕ್​ ಕನಸು ಕಂಡ ಇಂಜಿನಿಯರ್​​​ಗೆ ಜಿಮ್​​ ಟ್ರೈನರ್​ನಿಂದ ₹7 ಲಕ್ಷ ದೋಖಾ appeared first on News First Kannada.

Source: newsfirstlive.com

Source link