ಬಿಗ್‍ಬಾಸ್‍ನ ಸೆಕೆಂಡ್ ಇನ್ನಿಂಗ್ಸ್‌ನ ವಾರದ ಕಥೆ ಕಿಚ್ಚನ ಜೊತೆಗೆ ವಾರಂತ್ಯ ಕಾರ್ಯಕ್ರಮದಲ್ಲಿ ಸುದೀಪ್ ಅವರು ಬಿಗ್‍ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಮಾಡಿದ್ದಾರೆ.

ವಾರಾಂತ್ಯಾದ ಪಂಚಾಯ್ತಿ ವೇಳೆ ಒಂದು ಚೊಂಬನ್ನು ನೀಡಲಾಗಿತ್ತು. ಎಲ್ಲಾ ಸ್ಪರ್ಧಿಗಳು ಈ ಚೊಂಬಿಗೆ ಯಾರು ಅರ್ಹರು ಎಂದು ಡಿಸೈಡ್ ಮಾಡಿ ಅವರಿಗೆ ನೀಡಬೇಕು. ಸುದೀಪ್ ವೇದಿಕೆಯಿಂದ ಮಾತನಾಡುತ್ತಿದ್ದಂತೆ ಮಧ್ಯೆ ಸಾಕಷ್ಟು ಬಾರಿ ಸ್ಪರ್ಧಿಗಳು ಮಾತನಾಡಿದರು ಈ ವೇಳೆ ಸುದೀಪ್ ಎಚ್ಚರಿಕೆಯನ್ನು ನೀಡಿದ್ದಾರೆ.

ಒಬ್ಬರು ಮಾತಾನಾಡುವಾಗ ಮಧ್ಯೆ ಮಾತಾನಾಡಬಾರದು. ಪ್ರತಿಯೊಬ್ಬರಿಗೂ ಮಾತಾಡೋಕೆ ಕೊಟ್ಟಿದೀವಿ. ವೇದಿಕೆಯಲ್ಲಿ ಮಾತನಾಡುವವರಿಗೆ ಇದು ಗೌರವವಲ್ಲ. ಪ್ರತಿಯೊಬ್ಬರಿಗೂ ಮಾತನಾಡುವುದಕ್ಕೆ ಅವಕಾಶ ಕೊಟ್ಟಿದ್ದೇವೆ. ನಿಮ್ಮ ವಿವರಣೆ ತೆಗೆದುಕೊಳ್ಳದೆ ಸೆಗ್ಮೆಂಟ್ ಮುಗಿಸಿಲ್ಲ. ಹಾಗಿರುವಾಗ ಒಬ್ಬರು ಮಾತನಾಡುತ್ತಿದ್ದಾರೆ ಎಂದರೆ, ನಾವು ಅವರಿಗೆ ಪ್ರಶ್ನೆ ಕೇಳಿದ್ದೇವೆ ಎಂದರ್ಥ. ಆ ಮಾತಿನಲ್ಲಿ ಅವರು ಯಾರಿಗಾದರೂ ಏನಾದರೂ ಹೇಳಿದ್ದರೆ ಅವರಿಗೂ ಮಾತನಾಡೋಕೆ ಒಂದು ಅವಕಾಶ ಕೊಡ್ತೀವಿ ಎಂದು ಮಾತು ಆರಂಭಿಸಿದರು ಸುದೀಪ್.

ಎಲ್ಲರೂ ಕೂತು ನೋಡುವಾಗ ವ್ಯಕ್ತಿತ್ವದ ಮೇಲೆ, ನಿಮ್ಮ ಮೇಲೆ ಪ್ರಭಾವ ಬೀರುತ್ತಿದೆ. ನಿಮಗೆ ತಾಳ್ಮೆ ಇಲ್ಲ. ಯಾರೋ ಮಾತನಾಡುವಾಗ ಮಧ್ಯದಲ್ಲಿ ನೀವು ಮಾತನಾಡುತ್ತಿದ್ದೀರಿ ಎಂದರೆ ಅದು ಎಂತಹ ಸಭ್ಯತೆ ಇದು ಕ್ಲಾಸ್ ಆಗಿ ತೆಗೆದುಕೊಳ್ಳಬೇಡಿ. ಇದು ವಾನಿರ್ಂಗ್ ಎಂದೇ ಪರಿಗಣಿಸಿ. ಇದು 43 ದಿನ ಗ್ಯಾಪ್ ಆಗಿದ್ದರ ಎಫೆಕ್ಟಾ? 73 ದಿನಗಳಲ್ಲಿ ಇಲ್ಲದ ಸ್ಪರ್ಧಿಗಳಾಗಿ ನೀವು ಬಂದಿದೀರಾ ತಾಳ್ಮೆ ಇಲ್ಲವೇ? ಇದು ಎಲ್ಲರಿಗೂ ಅನ್ವಯವಾಗುತ್ತದೆ. ಇದು ಮೊದಲ ಬಾರಿ ಆಗಿದೆ. ಮನಸ್ಸಲ್ಲಿ ಸಾವಿರ ವಿಚಾರ ಇಟ್ಕೊಂಡು ಬಂದಿದೀರಾ. ಎಲ್ಲವನ್ನೂ ಹೇಳೋಕಾಗಲ್ಲ. ನಿಮ್ಮ ಉತ್ತರವನ್ನು ನಾವು ಕೇಳ್ತಾ ಇದೀವಿ ಎಂದರೆ ಅದಕ್ಕೆ ಅಗೌರವ ತೋರಿಸಬೇಡಿ ಎಂದರು ಸುದೀಪ್ ಖಡಕ್ ಆಗಿ ಹೇಳಿದ್ದಾರೆ.

ಬಿಗ್‍ಬಾಸ್ ಮನೆಯಲ್ಲಿ ವಾರಪೂರ್ತಿ ನಡೆದ ಘಟನೆಗಳನ್ನು ಇಟ್ಟ್ಕೊಂಡು ವಾರಾಂತ್ಯದಲ್ಲಿ ಸುದೀಪ್ ಅವರು ಮಾತನಾಡುತ್ತಾರೆ. ಸುದೀಪ್ ಸ್ಪರ್ಧಿಗಳಿಗೆ ಕೆಲವು ವಿಚಾರಗಗಳ ಕುರಿತಾಗಿ ಸ್ಪಷ್ಟ ಪಡಿಸುತ್ತಾರೆ. ಆದರೆ ಸ್ಪರ್ಧಿಗಳ ನಡವಳಿಕೆ ಕೊಂಚ ಬೇಸರ ತಂದಿದೆ.

The post ಸಿಟ್ಟಿಗೆದ್ದ ಸುದೀಪ್ ಸ್ಪರ್ಧಿಗಳಿಗೆ ಖಡಕ್ ವಾರ್ನಿಂಗ್ appeared first on Public TV.

Source: publictv.in

Source link