ಕಿಮ್ ಜಾಂಗ್​ ಉನ್ ಈ ಹೆಸರು ಕೇಳುತ್ತಿದ್ದಂತೆ ಕಿವಿಗಳು ಎಚ್ಚರಗೊಳ್ಳುತ್ತವೆ.. ಉತ್ತರ ಕೊರಿಯಾದಲ್ಲಿ ಮತ್ತಿನ್ಯಾವ ಹೊಸ ಕಟ್ಟಪ್ಟಣೆ ಹೊರಡಿಸಿದನೋ ಎಂಬ ಕುತೂಹಲ ಕೆರಳುತ್ತದೆ. ಅಷ್ಟರ ಮಟ್ಟಿಗೆ ಒಂದು ದೇಶವನ್ನ ಬಿಗಿಹಿಡಿತದಲ್ಲಿ ಹಿಡಿದುಕೊಂಡು ತನ್ನ ಜನರನ್ನ ತನ್ನ ತಾಳಕ್ಕೆ ತಕ್ಕಂತೆ ಮಾತ್ರವೇ ಕುಣಿಯುವಂತೆ ನಿಯಂತ್ರಣದಲ್ಲಿರಿಸಿಕೊಂಡಿದ್ದಾನೆ ಈತ.

ಆದ್ರೆ ಅವನೆಷ್ಟೇ ದೊಡ್ಡ ಮನುಷ್ಯನಾದರೂ ರೋಗ ಆತನನ್ನ ತಿಂದುಹಾಕಿಬಿಡುತ್ತದೆ. ಹಾಗಾದ್ರೆ ಜಗತ್ತನ್ನೇ ಬೆಚ್ಚಿಬೀಳಿಸುವ ಕಿಮ್ ಜಾಂಗ್ ಉನ್​ಗೆ ರೋಗ ಉಲ್ಬಣಿಸಿದೆಯಾ.. ಇದ್ದಕ್ಕಿದ್ದಂತೆ ಕಿಮ್​ ಜಾಂಗ್ ಉನ್ ಕಣ್ಮರೆಯಾಗೋದೇಕೆ.. ನಿದ್ರೆಯಲ್ಲಿದ್ದು ಥಟ್ಟನೆ ಎಚ್ಚರಗೊಂಡಂತೆ ಎದ್ದು ಪ್ರತ್ಯಕ್ಷವಾಗಿ ಮತ್ತೆ ಜಗತ್ತಿಗೆ ಅಚ್ಚರಿ ಹುಟ್ಟಿಸೋದೇಗೆ ಎಂಬುದು ರಹಸ್ಯವಾಗಿಯೇ ಉಳಿದಿದೆ.

ಈ ಹಿಂದೆ ಕಿಮ್​ ಜಾಂಗ್ ಉನ್ ಸತ್ತೇ ಹೋಗಿದ್ದಾನೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿತ್ತು. ಆದರೆ ನೋಡನೋಡುತ್ತಿದ್ದಂತೆ ಪ್ರತ್ಯಕ್ಷವಾದ ಕಿಮ್​ಜಾಂಗ್​ ಉನ್ ಸಿಡಿಲ ಮರಿಯಂತೆ ಓಡಾಡಿದ.. ಆದ್ರೆ ಆತನ ಆರೋಗ್ಯದಲ್ಲಿ ಏರುಪೇರಾಗಿದೆ ಅನ್ನೋದನ್ನ ಆತ ತನ್ನ ಮುಂಗೈಗೆ ಕಟ್ಟಿಕೊಂಡಿರುವ ವಾಚ್ ಹೇಳುತ್ತಿದೆ.

ಕಿಮ್ ಜಾಂಗ್ ಉನ್, ನಾರ್ಥ್ ಕೋರಿಯಾ ಸರ್ವಾಧಿಕಾರಿ

ಹೌದು ಕಳೆದ ವರ್ಷ 20 ದಿನಗಳ ಕಾಲ ಕಣ್ಮರೆಯಾಗಿದ್ದ ಕಿಮ್ ಜಾಂಗ್ ಉನ್ ಹಲವು ಪ್ರಮುಖ ಕಾರ್ಯಕ್ರಮಗಳಲ್ಲೂ ಗೈರು ಹಾಜರಾಗಿದ್ದ. ನಂತರ ಮತ್ತ ಹೊರಬಂದಾಗ ಆತನ ಕೈನಲ್ಲಿ ಬಿಗಿಯಾಗಿ ಕಟ್ಟಿಕೊಂಡಿದ್ದ ವಾಚ್ ಸ್ವಲ್ಪ ಸಡಿಲಗೊಂಡಿತ್ತು. ಅಂದಹಾಗೆ ಕಿಮ್ ಜಾಂಗ್ ಉನ್ ಕಟ್ಟಿಕೊಂಡಿರೋ IWC Shaffhausen portofino ವಾಚ್​ ದುಬಾರಿ ಬೆಲೆಯದ್ದು. ₹9 ಲಕ್ಷ ಬೆಲೆಯ ಈ ವಾಚ್​ನ ಬೆಲ್ಟ್ ಇತ್ತೀಚೆಗೆ ಲೂಸ್ ಆಗಿದ್ದನ್ನು ಇಡೀ ಜಗತ್ತು ಗಮನಿಸಿದೆ. ಅಲ್ಲದೇ ಕಿಮ್ ಜಾಂಗ್ ಉನ್ ತನ್ನ ದೇಹದ ತೂಕ ಕಳೆದುಕೊಂಡಿದ್ದಾನೆ. ಆತನ ಆರೋಗ್ಯ ಹದಗೆಟ್ಟಿದೆ ಎಂಬ ಊಹಾಪೋಹವೆದ್ದಿದೆ.

37 ವರ್ಷದ ಕಿಮ್ ಜಾಂಗ್ ಉನ್ 10 ರಿಂದ 20 ಕೆ ಜಿ ಕಳೆದುಕೊಂಡಿದ್ದಾನೆ ಎಂದು ಅಂದಾಜಿಸಲಾಗಿದ್ದು ಆತನ ಮುಖದ ಕಳೆಯೂ ಸಹ ಕೊಂಚ ಕುಂದಿದ ಹಾಗೆ ಕಾಣುತ್ತಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

The post ಸಿಡಿಲ ಮರಿಯಂತಿದ್ದ ಕಿಮ್​ಜಾಂಗ್​ ಬಡಕಲಾಗುತ್ತಿರೋದೇಕೆ? ವಾಚ್​ ಬಿಚ್ಚಿಟ್ಟ ರಹಸ್ಯವೇನು? appeared first on News First Kannada.

Source: newsfirstlive.com

Source link