‘ಸಿಡ್ನಿ ಟೆಸ್ಟ್​ ಹೀರೋ’ ಮರೆತ ಆಯ್ಕೆ ಸಮಿತಿ.. ಕ್ರಿಕೆಟ್​ ಅಭಿಮಾನಿಗಳ ಪ್ರಶ್ನೆ ಏನು ಗೊತ್ತಾ..?


ಕಿವೀಸ್ ವಿರುದ್ಧದ ಟೆಸ್ಟ್​ ಸರಣಿಗೆ ಟೀಮ್ ಇಂಡಿಯಾವನ್ನ ಪ್ರಕಟಿಸಲಾಗಿದ್ದು, ಸೆಲೆಕ್ಷನ್ ಕಮಿಟಿಯ ಆ ಒಂದು ನಡೆ, ವ್ಯಾಪಕ ಟೀಕಿಗೆ ಗುರಿಯಾಗಿದೆ. ಅಷ್ಟೇ ಅಲ್ಲ, ಸೆಲೆಕ್ಷನ್ ಕಮಿಟಿಯ ನಡೆಯನ್ನೂ ಪ್ರಶ್ನಿಸುವಂತೆ ಮಾಡಿದೆ.

ಆತ ಟೀಮ್ ಇಂಡಿಯಾ ಟೆಸ್ಟ್​ ತಂಡದ ಹನುಮ, ಬೆಟ್ಟದಷ್ಟು ಸಂಕಷ್ಟ ಬಂದಾಗಲೂ ತಾಳ್ಮೆಯ ಬ್ಯಾಟಿಂಗ್​ ಮೂಲಕ ತಂಡವನ್ನ ಗೆಲುವಿನ ದಡ ಸೇರಿಸ್ತಾನೆ. ಇನ್ನೇನು ಪಂದ್ಯವೇ ಮುಗೀತು ಎಂದಾಗ ದಿನಗಟ್ಟಲೇ ಬ್ಯಾಟಿಂಗ್ ಮಾಡಿ ಸೋಲಿನ ದವಡೆಯಿಂದ ಪಾರುಮಾಡ್ತಾನೆ. ಆದ್ರೆ, ಆತನೇ ಈಗ ಟೀಮ್ ಇಂಡಿಯಾಕ್ಕೆ ಬೇಡವಾಗಿದ್ದಾನಾ? ಇದಕ್ಕೆಲ್ಲಾ ಕಾರಣವಾಗಿರೋದು ನ್ಯೂಜಿಲೆಂಡ್ ಟೆಸ್ಟ್​ ಸರಣಿಗೆ ಪ್ರಕಟಿಸಿರುವ ತಂಡ.

ಟೆಸ್ಟ್ ಸರಣಿಗೆ 16 ಸದಸ್ಯರ ಆಟಗಾರರ ಟೀಮ್ ಇಂಡಿಯಾವನ್ನ ಪ್ರಕಟಿಸಲಾಗಿದೆ. ಈ ಸರಣಿಯಲ್ಲಿ ಕೆಲ ಆಟಗಾರರಿಗೆ ರೆಸ್ಟ್​ ನೀಡಲಾಗಿದೆ. ಆದ್ರೆ, ಟೆಸ್ಟ್​ ಸ್ಪೆಷಲಿಸ್ಟ್​ ಹನುಮ ವಿಹಾರಿಯನ್ನೇ ಕೈಬಿಟ್ಟಿರುವುದು, ಅಚ್ಚರಿ ಮೂಡಿಸಿದೆ. ಅಷ್ಟೇ ಅಲ್ಲ.. ಆಯ್ಕೆ ಸಮಿತಿ ನಿಲುವನ್ನ ಪ್ರಶ್ನಿಸುವಂತೆ ಮಾಡಿದೆ.

ಯಾವ ಮಾನದಂಡದಲ್ಲಿ ಕೈಬಿಡ್ತು ಸೆಲೆಕ್ಷನ್​ ಕಮಿಟಿ..?
ಮಿಡಲ್ ಆ್ಯಂಡ್ ಲೋವರ್ ಆರ್ಡರ್​ನಲ್ಲಿ ಟೀಮ್ ಇಂಡಿಯಾದ ಬೆನ್ನೆಲುಬಾಗಿದ್ದ ಹನುಮ ವಿಹಾರಿ, ಆಸ್ಟ್ರೇಲಿಯಾ ಪ್ರವಾಸದ ಸಿಡ್ನಿ ಪಂದ್ಯವೇ, ಕೊನೆಯ ಟೆಸ್ಟ್​ ಪಂದ್ಯವಾಗಿತ್ತು.. ಹ್ಯಾಮ್​ ಸ್ಟ್ರಿಂಗ್ ಇಂಜುರಿಯಿಂದ ತವರಿನಲ್ಲಿ ನಡೆದ ಟೆಸ್ಟ್​ ಸರಣಿಗೆ ಅಲಭ್ಯರಾಗಿದ್ದ ಹನುಮ ವಿಹಾರಿ, ನಂತರ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್, ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್​ ಸರಣಿಗೆ ಕಮ್​ಬ್ಯಾಕ್ ಮಾಡಿದ್ದರು. ಆದ್ರೆ ಆಡಿದ ನಾಲ್ಕು ಟೆಸ್ಟ್​ಗಳಲ್ಲಿ ವಿಹಾರಿ, ಜಸ್ಟ್​ ಬೆಂಚ್​ಗೆ ಸಿಮೀತವಾಗಿದ್ದರು.. ಆದ್ರೀಗ ತಂಡದಿಂದಲೇ ಕೈಬಿಟ್ಟಿದೆ. ಅಷ್ಟೇ ಅಲ್ಲ.. ಸೆಲೆಕ್ಷನ್​ ಕಮಿಟಿ ಪ್ರಕಟಿಸಿರುವ ತಂಡದಲ್ಲಿ 5 ಹಾಗೂ 6ನೇ ಕ್ರಮಾಂಕದಲ್ಲಿ ಸೂಕ್ತ ಆಟಗಾರನೇ ಇಲ್ಲ.. ಇಂಥದರಲ್ಲಿ ಯಾವ ಮಾನದಂಡದಲ್ಲಿ ಕೈಬಿಟ್ಟಿದೆ ಎಂದು ಪ್ರಶ್ನಿಸಲಾಗ್ತಿದೆ.

ಸಿಡ್ನಿ ಹೀರೋನನ್ನೇ ಮರೆತು ಬಿಡ್ತಾ ಸೆಲೆಕ್ಷನ್ ಕಮಿಟಿ..?
ಹನುಮ ವಿಹಾರಿ ಪರಿಣಾಮಕಾರಿ ಆಟಗಾರ. ಇದಕ್ಕೆ ಬೆಸ್ಟ್​ ಎಕ್ಸಾಂಪಲ್​, ಆಸ್ಟ್ರೇಲಿಯಾ ಪ್ರವಾಸದ ಸಿಡ್ನಿ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್. ಈ ಇನ್ನಿಂಗ್ಸ್​ನಲ್ಲಿ ಟೀಮ್ ಇಂಡಿಯಾ 5 ವಿಕೆಟ್ ಕಳೆದುಕೊಂಡು, ಸೋಲಿನ ದವಡೆಗೆ ಸಿಲುಕಿತ್ತು. ಆದ್ರೆ ಈ ವೇಳೆ ಕ್ರೀಸ್​​ಗೆ ಅಂಟಿಕೊಂಡ ವಿಹಾರಿ, ಗಾಯದ ನೋವಿನಲ್ಲೇ 161 ಎಸೆತ ಎದುರಿಸಿ ಅಜೇಯ 23 ರನ್ ಕಲೆಹಾಕಿದ್ದರು. ಆ ಮೂಲಕ ಪಂದ್ಯದ ಫಲಿತಾಂಶ ಡ್ರಾದಲ್ಲಿ ಅಂತ್ಯವಾಗಲು ಕಾರಣರಾಗಿದ್ದರು. ಇಂಥಹ ಆಟಗಾರನನ್ನೇ, ಆಯ್ಕೆ ಸಮಿತಿ ಮರೆತು ಬಿಡ್ತಾ ಎಂಬ ಪ್ರಶ್ನೆಗಳು ಉದ್ಭವಿಸುತ್ತಿವೆ. ಒಟ್ನಲ್ಲಿ ಮಿಡಲ್ ಆರ್ಡರ್​ನ ನಂಬಿಕಸ್ಥ ಬ್ಯಾಟರ್​​​ನನ್ನೇ ಕೈಬಿಟ್ಟಿರುವ ನಡೆ ಮಾಜಿ ಕ್ರಿಕೆಟಿಗರು, ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.

News First Live Kannada


Leave a Reply

Your email address will not be published.