ತುಮಕೂರು: ನಿನ್ನೆ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದಾರೆ.

ಚಿತ್ರದುರ್ಗದಿಂದ ಬೆಂಗಳೂರಿಗೆ ಬರುವ ಮಾರ್ಗ ಮಧ್ಯೆ ಮಠಕ್ಕೆ ಆಗಮಿಸಿದ ಅವರು ಶಿವಕುಮಾರ ಶ್ರೀಗಳ ಗದ್ದುಗೆಯ ದರ್ಶನ ಪಡೆದರು. ವಿಜಯೇಂದ್ರ ಭೇಟಿಗೆ ಕಾರಣವೇನೆಂಬುದು ಕುತೂಹಲ ಕೆರಳಿಸಿದೆ.

ಸಿದ್ಧಲಿಂಗ ಶ್ರೀಗಳೊಂದಿಗೆ ಚರ್ಚಿಸಿದ ನಂತರ ವಿಜಯೇಂದ್ರ ಬೆಂಗಳೂರಿಗೆ ಹೊರಟರು. ಈ ವೇಳೆ ಅವರೊಂದಿಗೆ ಮಾಜಿ ಶಾಸಕ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್ ಗೌಡ ಉಪಸ್ಥಿತರಿದ್ದರು.

The post ಸಿದ್ದಗಂಗಾ ಮಠಕ್ಕೆ ಬಿ.ವೈ. ವಿಜಯೇಂದ್ರ ದಿಢೀರ್ ಭೇಟಿ appeared first on News First Kannada.

Source: newsfirstlive.com

Source link