ಮಂಗಳೂರು: ಸ್ವಾತಂತ್ರ್ಯಕ್ಕಾಗಿ ಬಿಜೆಪಿಗರು ಯಾರಾದ್ರೂ ಬಲಿದಾನ ಮಾಡಿದ್ದಾರಾ? ಎಂಬ ಸಿದ್ದರಾಮಯ್ಯರ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಾಂಧೀಜಿ ಹೆಸರಲ್ಲಿ ಹೆಚ್ಚು ಪಾಪ ಮಾಡಿದ್ದು ಕಾಂಗ್ರೆಸ್
ನಗರದಲ್ಲಿ ಮಾತನಾಡಿದ ಅವರು.. ಆ ಸಮಯದಲ್ಲಿ ನಾವು ಹುಟ್ಟಿರಲಿಲ್ಲ, ಬಲಿದಾನ ಮಾಡಿಲ್ಲ, ಆಗ ಹುಟ್ಟಿದ್ದ ಕಾಂಗ್ರೆಸ್ ಎಷ್ಟು ಬಲಿದಾನ ಮಾಡಿದೆ? ಪ್ರತಿ ಊರಿನಲ್ಲೂ ಗಾಂಧೀಜಿ ಹೆಸರಿನಲ್ಲಿ ಅಂಗಡಿ ಇಟ್ಟುಕೊಂಡಿದ್ದಾರೆ. ಗಾಂಧೀಜಿ ವಿಷಯದಲ್ಲಿ ಅತೀ ಹೆಚ್ಚು ಪಾಪ ಮಾಡಿದವರು ಕಾಂಗ್ರೆಸ್ನವರು. ಕಾಂಗ್ರೆಸ್ನವರು ಪುರುಸೊತ್ತಿದ್ದಾಗ ಮಾತ್ರ ಆಡಳಿತ ನಡೆಸುತ್ತಾರೆ. ಆದ್ರೆ ನಮ್ಮಲ್ಲಿ ದೇಶಕ್ಕಾಗಿ, ಜನಸೇವೆಗಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಇಂದು ಟಿ-20 ವಿಶ್ವಕಪ್ ಫೈನಲ್; ಯಾವ ತಂಡಕ್ಕೆ ಗೆಲುವಿನ ಹೆಚ್ಚು ಚಾನ್ಸ್ ಇದೆ ಗೊತ್ತಾ..?
ಸಿದ್ದರಾಮಯ್ಯಗೆ ಇದು ಅರ್ಥ ಆಗೋದಿಲ್ಲ. ನಾವು ಹುಟ್ಟಿರಲಿಲ್ಲ, ಹಾಗಾಗಿ ಬಲಿದಾನ ಮಾಡಿರಲಿಲ್ಲ. ಬಲಿದಾನ ಮಾಡುವ ಅವಕಾಶ ಬಂದಾಗ ನಮ್ಮ ಸಂಘಟನೆಯವರು ಮಾಡಿದಷ್ಟು ಬಲಿದಾನ ಬೇರೆ ಯಾರು ಮಾಡಿಲ್ಲ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ರಾಜಕೀಯ ಪ್ರತಿನಿಧಿಗಳಿಗೆ ಧೈರ್ಯ ತುಂಬಿದ್ದು ಇದೇ RSS, ಬಿಜೆಪಿ. ಪ್ರಜಾಪ್ರಭುತ್ವದಲ್ಲಿ ಅವರನ್ನು ಜೀವಂತವಾಗಿ ಇಟ್ಟವರು ನಾವುಗಳೇ. ಇದನ್ನು ಖಾಸಗಿಯಾಗಿ ಕಾಂಗ್ರೆಸ್ ನವರು ಒಪ್ಪಿಕೊಳ್ತಾರೆ. ವಿರೋಧಪಕ್ಷ ಸಮರ್ಥವಾಗಿ ಇರಬೇಕು. ಆದ್ರೆ ಈ ರೀತಿ ಇರಬಾರದು ಎಂದರು.
ಇದನ್ನೂ ಓದಿ:‘ಬಿಟ್ ಕಾಯಿನ್’ ಕೇಸ್ ಗಂಭೀರ ಅರಿತ ಮೋದಿ; ಕ್ರಿಪ್ಟೋ ಕರೆನ್ಸಿ ಸಂಬಂಧ ರಾತ್ರೋರಾತ್ರಿ ದಿಢೀರ್ ಸಭೆ
ಇದನ್ನೂ ಓದಿ: ದೊಡ್ಡ ಪ್ರಮಾದ ಮಾಡಿಬಿಡ್ತಾ ಆಯ್ಕೆ ಸಮಿತಿ..? ‘ತಲೆದಂಡ’ ಪಕ್ಕಾ ಅಂತಿವೆ ಸಾಲು ಸಾಲು ಪ್ರಶ್ನೆಗಳು..!
ಇದನ್ನೂ ಓದಿ: ಸೇನಾಧಿಕಾರಿ, ಪತ್ನಿ, ಮಗು ಸೇರಿ 4 ಯೋಧರು ಹುತಾತ್ಮ; ರಕ್ಕಸ ದಾಳಿಯ ಹೊಣೆ ಹೊತ್ತ PLA, MNPF
ಇದನ್ನೂ ಓದಿ: ದೆಹಲಿಯಲ್ಲಿ 1 ದಿನ ಉಸಿರಾಡೋದು 20 ಸಿಗರೇಟ್ ಸೇವನೆಗೆ ಸಮ -ಲಾಕ್ಡೌನ್ ಬಗ್ಗೆ ಕೇಜ್ರಿವಾಲ್ ಏನಂದ್ರು..?
ಇದನ್ನೂ ಓದಿ: ಆಯ್ಕೆ ಸಮಿತಿ ವಿರುದ್ಧ ಶಾಸ್ತ್ರಿ ಹೊಸ ಬಾಂಬ್; ಗಂಗೂಲಿ ಆಡಳಿತದ ಅವಧಿಯಲ್ಲೇ ಹೀಗ್ಯಾಕೆ ಆಯ್ತು..?
ಇದನ್ನೂ ಓದಿ: 26 ನಕ್ಸಲರಲ್ಲಿ ಭೀಮಾ ಕೋರೆಗಾಂವ್ ಆರೋಪಿಯೂ ಎನ್ಕೌಂಟರ್; ಮಿಲಿಂದ್ ಕೊಂದವ್ರಿಗೆ ಸಿಕ್ತು ₹25 ಲಕ್ಷ