ಸಿದ್ದರಾಮಯ್ಯ ಆಡಳಿತವನ್ನು ‘ಟಿಪ್ಪು ಆಡಳಿತ’ಕ್ಕೆ ಹೋಲಿಸಿದ ಬೊಮ್ಮಾಯಿಗೆ ಸಿದ್ದರಾಮಯ್ಯ ತರಾಟೆ

ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಭಾರೀ ವಾಗ್ವಾದವೇ ಸೃಷ್ಟಿಯಾಗಿದೆ. ನೈತಿಕ ಪೊಲೀಸ್​ಗಿರಿಯನ್ನು ಸಮರ್ಥಿಸಿಕೊಳ್ಳುವಂತೆ ಮಾತನಾಡಿದ್ದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಬಸವರಾಜ ಬೊಮ್ಮಾಯಿ ಅವರನ್ನು ರಾಜೀನಾಮೆ ನೀಡುವಂತೆ ಒತ್ತಾಯಿಸಿ ಟ್ವೀಟ್ ಮಾಡಿದ್ದರು.

ಇದಕ್ಕೆ ಟ್ವೀಟ್ ಮೂಲಕವೇ ಪ್ರತಿಕ್ರಿಯೆ ನೀಡಿದ್ದ ಬಸವರಾಜ ಬೊಮ್ಮಾಯಿ.. ನೀವು ಸಿಎಂ ಆಗಿದ್ದಾಗ ಹಿಂದೂ ವಿರೋಧಿಗಳ ಐಕಾನ್ ಆಗಿದ್ರಿ. ಟಿಪ್ಪು ಸುಲ್ತಾನ್ ತನ್ನ ಆಳ್ವಿಕೆಯಲ್ಲಿ ಮಾಡಿದಂತೆ ಹಿಂದೂ ಹೋರಾಟಗಾರರ ಕೊಲೆಗೆ ಕಾರಣವಾದ್ರಿ. ನಿಮ್ಮಿಂದ ನಾನು ಆಡಳಿತ ಅಥವಾ ನೈತಿಕತೆ ಕಲಿಯಬೇಕಿಲ್ಲ. ನಮ್ಮ ಬಳಿ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಫೋರ್ಸ್​ನ್ನು ನಾವು ಹೊಂದಿದ್ದೇವೆ ಎಂದಿದ್ದರು.

ಇದೀಗ ಸಿದ್ದರಾಮಯ್ಯ ಟ್ವೀಟ್​ಗೆ ರಿಯಾಕ್ಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಯ್ಯ.. ನೀವು ನಾನು ಹಿಂದೂಗಳನ್ನು ಕೊಲೆ ಮಾಡಿಸಿದ್ದೇನೆ ಎಂದಿದ್ದೀರಿ.. ಓರ್ವ ಸಿಎಂ ಆಗಿ ಇಂಥ ಲೂಸ್ ಕಮೆಂಟ್ ಮಾಡುವ ಮುನ್ನ ಯೋಚಿಸಿ. ನಿಮ್ಮ ವಿರುದ್ಧ ನಾನು ಮಾನಹಾನಿ ಕೇಸ್ ದಾಖಲಿಸಬಹುದು.. ಆದರೆ ನಾನು ನಿಮ್ಮನ್ನು ಸರಿಪಡಿಸಿಕೊಳ್ಳಲು ಸಲಹೆಯನ್ನಷ್ಟೇ ನೀಡುತ್ತೇನೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಬಿಜೆಪಿ 2013 ರಿಂದ 2018 ರ ಮಧ್ಯೆ 24 ಹಿಂದೂಗಳು ಕೋಮುಸಂಘರ್ಷದಲ್ಲಿ ಕೊಲೆಯಾದರೆಂದು ಹೇಳಿತ್ತು. ಅದು 24 ಅಲ್ಲ ಹಿಂದೂ ಮತ್ತು ಮುಸ್ಲೀಮರು ಸೇರಿ 45. ನಮ್ಮ ಪಾರ್ಟಿ ಈ ಸಾವುಗಳ ಬಗ್ಗೆ ನಿಜಾಂಶಗಳನ್ನು ಬಿಡುಗಡೆ ಮಾಡಿದೆ.

2013-18ರ ಅವಧಿಯಲ್ಲಿ 10 ಹಿಂದೂಗಳ ಕೊಲೆಯ ಹಿಂದಿನ ಆರೋಪಿಗಳು ಪಿಎಫ್​ಐ ಮತ್ತು ಎಸ್​ಡಿಪಿಐನವರು. ಎಲ್ಲರನ್ನೂ ಬಂಧಿಸಲಾಗಿದೆ. ಮತ್ತು 11 ಮುಸ್ಲೀಂರ ಕೊಲೆಯ ಹಿಂದಿನ 10 ಆರೋಪಿಗಳು ಹಿಂದೂಗಳಾಗಿದ್ದು ಅವರು ಆರ್​ಎಸ್​ಎಸ್​ನ ಮಿತ್ರ ಸಂಘಟನೆ ಬಜರಂಗದಳ ಮತ್ತು ಹಿಂದೂ ಜಾಗರಣ ವೇದಿಕೆಯವರು.

ನಿಮ್ಮ ಪಕ್ಷ ಜೀವಂತವಿದ್ದ ಅಶೋಕ್ ಪೂಜರಿ ಹೆಸರನ್ನ ಕೊಲೆಯಾದವರ ಪಟ್ಟಿಯಲ್ಲಿ ಸೇರಿಸಿ ನಗೆಪಾಟಲಿಗೀಡಾಗಿದ್ದನ್ನು ನೆನಪು ಮಡಿಕೊಳ್ಳಿ ಮಿ. ಬೊಮ್ಮಾಯಿ. ಹೊನ್ನಾವರದ ಪರೇಶ್ ಮೇಸ್ತ ಅವರ ಕೊಲೆ ಕೇಸ್​​ನ್ನು ಸಿಬಿಐ ನಡೆಸಿತು. ಹಿಂದೂಗಳ ಹೆಸರಿನಲ್ಲಿ ಮೊಸಳೆ ಕಣ್ಣೀರು ಹಾಕುವ ಬದಲಿಗೆ ಸಿಬಿಐಗೆ ಅಪರಾಧಿಗಳನ್ನು ಬಂಧಿಸುವಂತೆ ಒತ್ತಡ ಹೇರಿ.

ಬೊಮ್ಮಾಯಿಯವರೇ ಹಿಂದೂ ಆರ್​ಟಿಐ ಕಾರ್ಯಕರ್ತ ವಿನಾಯಕ್ ಬಾಳಿಗ ಕೊಲೆಯ ಪ್ರಮುಖ ಆರೋಪಿ ನರೇಶ್ ಶೆಣೈ ಬಿಜೆಪಿಗೆ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ಬೆಸ್ಟ್ ಫ್ರೆಂಡ್ ಆಗಿದ್ದವರು. ವಿನಾಯಕ ಬಾಳಿಗ ಕಠೋರ ಹಿಂದೂ ಆಗಿದ್ದವರು.. ಅವರ ಕುಟುಂಬಕ್ಕೆ ಯಾವಾಗ ನ್ಯಾಯ ಒದಗಿಸುತ್ತೀರಿ..?

ಇದರ ಜೊತೆಗೆ ನಾನು ಪ್ರರ್ಕಾ ಕುಳೈ, ಕೇಶವ ಶೆಟ್ಟಿ, ಹರೀಶ್ ಪೂಜಾರಿ, ಪ್ರವೀಣ ಪೂಜಾರಿ, ಕಲ್ಲಪ್ಪ ಹಂಡಿಭಾಗ್, ಧನ್ಯಶ್ರೀ ಮತ್ತು ದಾನಮ್ಮರನ್ನು ಕೊಂದವರಿಗೆ ಶಿಕ್ಷೆ ನೀಡಿ ಎಂದು ಒತ್ತಾಯಿಸುತ್ತೇನೆ. ಇವರು ಸಹ ಹಿಂದೂಗಳು.. ಈ ಪ್ರಕರಣಗಳ ಕೆಲವು ಆರೋಪಿಗಳು ಸಂಘ ಪರಿವಾರದ ಜೊತೆಗೆ ಲಿಂಕ್ ಹೊಂದಿದ್ದಾರೆ.

News First Live Kannada

Leave a comment

Your email address will not be published. Required fields are marked *