ನವದೆಹಲಿ: ಸಿದ್ದರಾಮಯ್ಯ ಕೇವಲ ಸಿಎಂ ಅಲ್ಲ, ಪಿಎಂ ಆಗಬೇಕು.. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ತೊಂದರೆ ಕೊಡುವ ಕೆಲಸ ಆಗಬಾರದು ಅಂತಾ ಕಾಂಗ್ರೆಸ್ ನಾಯಕ ರಾಮಪ್ಪ ಹೇಳಿದ್ದಾರೆ​.

‘ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ’ ಎಂದು ಹಲವು ನಾಯಕರು ಹೇಳಿಕೆ ನೀಡುತ್ತಿರೋ ವಿಚಾರದ ಬಗ್ಗೆ ಮಾತನಾಡಿದ ಅವರು.. ಸಿದ್ದರಾಮಯ್ಯ ಕೇವಲ ಸಿಎಂ ಅಲ್ಲ, ಪ್ರಧಾನಿ ಆಗಬೇಕು. ಕಾಂಗ್ರೆಸ್ ಸಂಕಷ್ಟದಲ್ಲಿದೆ, ಕಷ್ಟಪಟ್ಟು ಕೆಲಸ ಮಾಡಬೇಕು. ಸಿಎಂ ಮಾಡುವುದು ಕಾಂಗ್ರೆಸ್ ಹೈಕಮಾಂಡ್. ಸಿದ್ದರಾಮಯ್ಯ ತಮ್ಮ ಶಿಷ್ಯರಿಗೆ ಬುದ್ಧಿ ಹೇಳಬೇಕು. ಸಿದ್ದರಾಮಯ್ಯ ಪಕ್ಷದಲ್ಲಿ ಗೊಂದಲ ಉಂಟು ಮಾಡಬಾರದು ಎಂದರು.

ನಿಷ್ಠಾವಂತ ಕಾರ್ಯಕರ್ತರಿಗೆ ತೊಂದರೆ ಕೊಡಬಾರದು. ಸಿಎಂ, ಸಚಿವರಾಗಿ ಮಜಾ ಮಾಡುತ್ತೀರಿ, ಕಾರ್ಯಕರ್ತರ ಪಾಡೇನು? ಬೇರೆ ಪಾರ್ಟಿಯಿಂದ ಬಂದು ಮಾತನಾಡುವುದು ಸರಿಯಲ್ಲ. ಸಿಎಂ ಬಗ್ಗೆ ಮಾತನಾಡುವವರನ್ನು ಕರೆದು ಉಗಿಯಿರಿ. ಡಿಕೆ ಶಿವಕುಮಾರ್​​ಗೆ ತೊಂದರೆ ಕೊಡುವ ಕೆಲಸ ಆಗುತ್ತಿದೆ. ಬಿಎಸ್ವೈ ಸಿಎಂ ಆಗಿದ್ದಾರೆ, ನೀವು ಯಾವಾಗ ಸಿಎಂ ಆಗುತ್ತೀರಿ? ಬಹುಮತ ಎಲ್ಲಿದೆ? ನೀವು ಬಿಜೆಪಿ ಸೇರಿ ಸಿಎಂ ಆಗುತ್ತೀರಾ? ಎಂದು ಪ್ರಶ್ನೆ ಮಾಡಿದರು.

The post ಸಿದ್ದರಾಮಯ್ಯ ಕೇವಲ ಸಿಎಂ ಅಲ್ಲ.. ಪಿಎಂ ಆಗಬೇಕು, ಆದರೆ.. -ಎಸ್.ರಾಮಪ್ಪ ಹೊಸ ಬಾಂಬ್ appeared first on News First Kannada.

Source: newsfirstlive.com

Source link