ಬೆಂಗಳೂರು: ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರೇ, ಹಠ ಪ್ರತಿಯೊಬ್ಬರಿಗೂ ಬೇಕು. ಆದರೆ ನಿಮ್ಮದು ಮಹಾಭಾರತದ ದುರ್ಯೋಧನನ ರೀತಿಯ ಕೆಟ್ಟ ಹಠ ಎಂದು ಕಾಂಗ್ರೆಸ್ ನಾಯಕರನ್ನ ಸಚಿವ ಆರ್. ಅಶೋಕ್ ಟ್ವೀಟ್ ಮೂಲಕ ಕುಟುಕಿದ್ದಾರೆ.
ಇದು ನಿಮಗೂ, ನಾಡಿಗೂ ಒಳ್ಳೆಯದಲ್ಲ. ದುರ್ಯೋಧನನಂತೆ, ನೀವೂ ಮತ್ತು ನಿಮ್ಮ ಕಾಂಗ್ರೆಸ್ ಸರ್ವನಾಶವಾಗಲು ಬಯಸುತ್ತೀರಾ? ಯೋಚಿಸಿ.. ಇದರಿಂದ ಯಾರಿಗೂ ಒಳ್ಳೆಯದಾಗುವುದಿಲ್ಲ. ದಯವಿಟ್ಟು ಹಠ ಬಿಡಿ ಎಂದು ಪಾದಯಾತ್ರೆ ಕೈಬಿಡುವಂತೆ ಸಚಿವ ಅಶೋಕ್ ಟ್ವೀಟ್ ಮಾಡಿದ್ದಾರೆ.
ಮಾನ್ಯ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರೇ, ನಿಮ್ಮದು ಮಹಾಭಾರತದ ದುರ್ಯೋಧನನ ರೀತಿಯ ಕೆಟ್ಟ ಹಠ. ಇದರಿಂದ ಯಾರಿಗೂ ಒಳ್ಳೆಯದಾಗುವದಿಲ್ಲ. ದುರ್ಯೋಧನನಿಗೆ ಆದಂತೆ, ನೀವೂ, ನಿಮ್ಮ ಕಾಂಗ್ರೆಸ್ ಪಕ್ಷ ನಿರ್ನಾಮವಾಗುತ್ತದೆ. ನಮಗೆ ವಿರೋಧ ಪಕ್ಷವೂ ಇರುವುದಿಲ್ಲ. ದಯವಿಟ್ಟು ಹಠ ಬಿಡಿ.@KPCCPresident @siddaramaiah @DKShivakumar
— R. Ashoka (ಆರ್. ಅಶೋಕ) (@RAshokaBJP) January 12, 2022
ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಜನವರಿ 9 ರಿಂದ ಪಾದಯಾತ್ರೆ ಕೈಗೊಂಡಿದ್ದಾರೆ. ಕೊರೊನಾ ಹೆಚ್ಚುತ್ತಿರುವ ಸಂದರ್ಭದಲ್ಲಿ ಪಾದಯಾತ್ರೆ ಮಾಡ್ತಿರೋದು ಸರಿನಾ ಎಂಬ ಪ್ರಶ್ನೆಯನ್ನ ಆಡಳಿತ ಪಕ್ಷದ ನಾಯಕರು ಪ್ರಶ್ನೆ ಮಾಡುತ್ತಿದ್ದಾರೆ.